ನೆಕ್ಕಿಲಾಡಿ ಗ್ರಾ.ಪಂ. ಉಪಚುನಾವಣೆ➤ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರಿಂದ ಮತಯಾಚನೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ , ಮೇ.23.34 ನೇ ನೆಕ್ಕಿಲಾಡಿ ಗ್ರಾ.ಪಂ.ನ ವಾರ್ಡ್ ನಂ. 2ರಲ್ಲಿ ತೆರವಾಗಿರುವ ಒಂದು ಸ್ಥಾನಕ್ಕೆ ಮೇ 29ರಂದು ಉಪ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅನಿ ಮಿನೇಜಸ್ ಪರ ಮಾಜಿ ಶಾಸಕಿ ಟಿ. ಶಕುಂತಳಾ ಶೆಟ್ಟಿ ಅವರು ಬುಧವಾರ ಕರ್ವೇಲು ಪ್ರದೇಶದಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು.

ಸಾರ್ವಜನಿಕ ಸಮಸ್ಯೆಗಳ ವಿರುದ್ಧ ಧ್ವನಿಯೆತ್ತುವವರು ಗ್ರಾಮ ಪಂಚಾಯತ್‍ನೊಳಗೆ ಪ್ರವೇಶಿಸಿದಾಗ ಮಾತ್ರ ಉತ್ತಮ ಆಡಳಿತದೊಂದಿಗೆ ಗ್ರಾಮದ ಅಭಿವೃದ್ಧಿ ಸಾಧ್ಯವಾಗಲಿದೆ. ಆದ್ದರಿಂದ ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ಕಾಳಜಿಯುಳ್ಳ ಅನಿ ಮಿನೇಜಸ್ ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.

Also Read  ಇಚ್ಲಂಪಾಡಿ: ಶಬರಿಮಲೆ ಪಾವಿತ್ರ್ಯತೆ ಉಳಿಸಿ ಮೆರವಣಿಗೆ

ಈ ಸಂದರ್ಭ ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳೀಧರ ರೈ, ನೆಕ್ಕಿಲಾಡಿ ಗ್ರಾಮದ ಚುನಾವಣಾ ಉಸ್ತುವಾರಿ ದೇವಿದಾಸ್ ರೈ, ವಲಯಾಧ್ಯಕ್ಷ ಶೇಖಬ್ಬ ಹಾಜಿ, ಅಭ್ಯರ್ಥಿ ಅನಿ ಮಿನೇಜಸ್, ಅಬ್ದುರ್ರಹ್ಮಾನ್ ಯುನಿಕ್, ಪುತ್ತೂರು ವಿಧಾನಸಭಾ ಕ್ಷೇತ್ರದ ಯೂತ್ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಉಸ್ತುವಾರಿ ಝಹೀರ್ ಶಾಂತಿನಗರ, ಕಾಂಗ್ರೆಸ್ ಮುಖಂಡರಾದ ಜಾನ್ ಕೆನ್ಯೂಟ್ ಮಸ್ಕರೇನ್ಹಸ್, ರೋಶನ್ ರೈ, ಸತ್ಯವತಿ ಪೂಂಜಾ, ಇಸ್ಮಾಯೀಲ್ ಮೇದರಬೆಟ್ಟು, ಪ್ರಕಾಶ್ ಗೌಡ, ತನಿಯಪ್ಪ ಪೂಜಾರಿ, ಸಂಕಪ್ಪ ಶೆಟ್ಟಿ, ರೋಶನ್ ರೈ, ಶಾಹುಲ್ ಹಮೀದ್ ಮತ್ತಿತರರು ಇದ್ದರು.

error: Content is protected !!
Scroll to Top