ತೋಟಗಾರಿಕಾ ಇಲಾಖೆಯಿಂದ ಅಡಿಕೆ ಮತ್ತು ತೆಂಗಿನ ಕೀಟರೋಗ ನಿಯಂತ್ರಣಕ್ಕೆ ಸಹಾಯಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.23.ಅಡಿಕೆ ಬೆಳೆಗೆ ಬಾದಿಸುವ ಕೊಳೆರೋಗ, ಸುಳಿಕೊಳೆರೋಗ ನಿಯಂತ್ರಣಕ್ಕೆ ರೈತರು ಖರೀದಿಸುವ ಮೈಲುತುತ್ತಕ್ಕೆ ಇಲಾಖೆಯಿಂದ ಪ್ರತೀ ಎಕರೆಗೆ ಶೇ. 75ರ ರೂ 3000/- ವರೆಗೆ ಸಹಾಯಧನ ಲಭ್ಯವಿರುತ್ತದೆ.

ಅದೇ ರೀತಿ ತೆಂಗಿನ ನುಸಿ ಪೀಡೆ, ಬಿಳಿನೊಣ, ಕಪ್ಪುತಲೆಹುಳ ಇತ್ಯಾದಿ ನಿಯಂತ್ರಣಕ್ಕೆ ಖರೀದಿಸುವ ಬೇವಿನ ಹಿಂಡಿ ಹಾಗೂ ಬೇವಿನ ಎಣ್ಣೆಗೆ ಪ್ರತೀ ಎಕರೆಗೆ ಶೇ 75ರ ರೂ 2000/- ವರೆಗೆ ಸಹಾಯಧನ ಲಭ್ಯವಿರುತ್ತದೆ.ತೆಂಗಿನ ತೋಟದ ಪೋಷಕಾಂಶ ನಿರ್ವಹನೆಗೆ ಖರೀದಿಸುವ ಬೇವಿನ ಹಿಂಡಿ, ಮ್ಯೂರೇಟ್ ಆಫ್ ಪೊಟೇಷ್, ರಾಕ್ ಪಾಸ್ಪೇಟ್, ಯೂರಿಯಾ, ಬೊರೋನ್ ಇತ್ಯಾದಿಗೆ ಪ್ರತೀ ಎಕರೆಗೆ ಶೇ 75ರ ರೂ 3000/- ವರೆಗೆ ಸಹಾಯಧನ ಲಭ್ಯವಿರುತ್ತದೆ.

Also Read  ಇಬ್ಬರನ್ನು ಬಲಿ ಪಡೆದ ನರಭಕ್ಷಕ ಚಿರತೆ ಸೆರೆ

ರೈತರು ಪ್ರತಿ ಔಷಧಿ ಅಥವಾ ಗೊಬ್ಬರ ಖರೀದಿಸಿ, ಜಿ.ಎಸ್.ಟಿ ಬಿಲ್, ಆರ್.ಟಿ.ಸಿ, ಆಧಾರ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ರೈತರಾದಲ್ಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಬೇಕು. ಜೇಷ್ಠತೆ ಆಧಾರದಲ್ಲಿ ಸಹಾಯಧನ ನೀಡಲಾಗುವುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿಲ್ಲಾ ಪಂಚಾಯತ್ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top