ಮಾವಿನ ಹಣ್ಣಿನಿಂದ ತಯಾರಿಸಬಹುದಾದ ಖಾದ್ಯಗಳು

(ನ್ಯೂಸ್ ಕಡಬ) newskadaba.com ಅಡುಗೆ ಮಾಹಿತಿ.ಹಣ್ಣುಗಳ ರಾಜ ಎಂದೆ ಹೆಸರುವಾಸಿಯಾದ ಮಾವಿನ ಹಣ್ಣನ್ನು ಹಾಗೇ ಸವಿದು ಸಂಭ್ರಮಿಸಬಹುದು. ಜೊತೆಗೆ ಜ್ಯೂಸು, ಹಲ್ವ, ರಸಾಯನ ಮುಂತಾದ ಸಿಹಿ ಪದಾರ್ಥಗಳನ್ನೂ ಮಾಡಬಹುದು. ಇನ್ನು ಕಾಯಿಯಿಂದಲೂ ಅಷ್ಟೇ ವಿಧಧ ವ್ಯಂಜನಗಳನ್ನು ತಯಾರಿಸಲು ಸಾಧ್ಯವಿದೆ.

1.ಮಾವಿನಕಾಯಿತೊವ್ವೆ 
ಬೇಕಾಗುವ ಸಾಮಗ್ರಿ: ಸಣ್ಣಗೆ ಹೆಚ್ಚಿದ ಮಾವಿನಕಾಯಿ, ಹೆಸರುಬೇಳೆ- ಕಾಲು ಕಪ್‌, ತೊಗರಿಬೇಳೆ- ಕಾಲು ಕಪ್‌, ಸಣ್ಣಗೆ ಹೆಚ್ಚಿದ ಟೊಮೇಟೊ-ಕಾಲು ಕಪ್‌, ಹಸಿ ಮೆಣಸು- 4, ಅರಿಶಿನಪುಡಿ, ಚಿಟಿಕಿ ಇಂಗು, ಕರಿಬೇವು, ಕೊತ್ತಂಬರಿ ಸೊಪ್ಪು, ಉಪ್ಪು.

ಮಾಡುವ ವಿಧಾನ : ಕುಕ್ಕರ್‌ ಪಾತ್ರೆಯಲ್ಲಿ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೇ ಸಾಸಿವೆ ಸಿಡಿಸಿ, ಅರಿಶಿನ, ಇಂಗು, ಕರಿಬೇವು, ಕೊತ್ತಂಬರಿಸೊಪ್ಪು, ಮಾವಿನಕಾಯಿ, ಟೊಮೇಟೊ, ಹಸಿಮೆಣಸು ಹಾಕಿ ಒಂದೆರಡು ನಿಮಿಷ ಹುರಿಯಿರಿ. ನಂತರ ಹೆಸರು ಮತ್ತು ತೊಗರಿ ಬೇಳೆಗಳನ್ನು ನೀರಿನಲ್ಲಿ ತೊಳೆದು ಕುಕ್ಕರ್‌ಗೆ ಹಾಕಿ, ಉಪ್ಪು ಸೇರಿಸಿ ಮೂರು ಕಪ್‌ ನೀರುಹಾಕಿ ಚೆನ್ನಾಗಿ ಬೆರೆಸಿ, ಕುಕ್ಕರ್‌ ಮುಚ್ಚಿ, ಮಧ್ಯ ಉರಿಯಲ್ಲಿ ಮೂರು ವಿಷಿಲ್‌ ಕೂಗಿಸಿ.

2.ದಿಢೀರ್ಉಪ್ಪಿನಕಾಯಿ 
ಬೇಕಾಗುವ ಸಾಮಗ್ರಿ: ಸಣ್ಣಗೆ ಹೆಚ್ಚಿದ ತೋತಾಪುರಿ ಮಾವಿನಕಾಯಿ- 1 ಕಪ್‌, ಎರಡು ಚಮಚ ಅಚ್ಚ ಖಾರದ ಪುಡಿ, ಪುಡಿ ಉಪ್ಪು, ಸಾಸಿವೆ, ಎಣ್ಣೆ, ಇಂಗು

Also Read  ಕಳ್ಳತನ ಮಾಡಲು ಬಂದ ಕಳ್ಳರು ಮನೆಯಲ್ಲೇ ಲಾಕ್ !  ➤ ಖದೀಮರು ಅರೆಸ್ಟ್

ಮಾಡುವ ವಿಧಾನ: ಸಣ್ಣಗೆ ಹೆಚ್ಚಿದ ಮಾವಿನಕಾಯಿಯನ್ನು ಪಿಂಗಾಣಿ ಪಾತ್ರೆಗೆ ಹಾಕಿಡಿ. ಇದಕ್ಕೆ ಖಾರದ ಪುಡಿ, ಉಪ್ಪು ಹಾಕಿ. ನಂತರ ಒಂದು ಸೌಟು ಅಡುಗೆ ಎಣ್ಣೆ ಬಿಸಿ ಮಾಡಿ ಸಾಸಿವೆ ಸಿಡಿಸಿ, ಒಂದು ಚಮಚ ಇಂಗು ಸೇರಿಸಿ, ಈ ಒಗ್ಗರಣೆಯನ್ನು ಖಾರದ ಪುಡಿಯ ಮೇಲೆ ಹಾಕಿ, ತೇವಾಂಶವಿರದ ಚಮಚದಿಂದ ಉಪ್ಪು, ಖಾರ, ಮಾವಿನ ಹೋಳುಗಳು ಚೆನ್ನಾಗಿ ಹೊಂದಿಕೊಳ್ಳುವಂತೆ ಕಲೆಸಿ, ಅರ್ಧ ಗಂಟೆ ಮುಚ್ಚಿಟ್ಟು ಬಿಡಿ. ಉಪ್ಪಿನಕಾಯಿ ವಾರಗಳ ಕಾಲ ಉಳಿಯುತ್ತದೆ.

3.ಮಾವಿನಕಾಯಿಗೊಜ್ಜು 
ಬೇಕಾಗುವ ಸಾಮಗ್ರಿ: ಸಿಪ್ಪೆ, ಓಟೆ ತೆಗೆದ ಮಾವಿನಕಾಯಿ, ಅಚ್ಚ ಖಾರದ ಪುಡಿ, ಅರಿಶಿನ, ಚಿಟಿಕೆ ಇಂಗು, ಒಂದು ಚಮಚ ಹೆರೆದ ಬೆಲ್ಲದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ : ಮಾವಿನ ತಿರುಳನ್ನು ತುಸು ನೀರು ಹಾಕಿ ಕುಕ್ಕರ್‌ನಲ್ಲಿ, ಒಂದು ವಿಸಿಲ… ಕೂಗಿಸಿ ಬೇಯಿಸಿಕೊಳ್ಳಿ. ಬೆಂದ ತಿರುಳನ್ನು ಚೆನ್ನಾಗಿ ಕಿವುಚಿ. ನಂತರ, ಸಾಸಿವೆ ಸಿಡಿಸಿ, ಅರಿಶಿನ ಪುಡಿ, ಇಂಗು ಹಾಕಿ ಒಗ್ಗರಣೆ ಸಿಡಿಸಿ. ಅದಕ್ಕೆ ಮಾವಿನ ತಿರುಳು, ಅಚ್ಚ ಖಾರದ ಪುಡಿ, ಉಪ್ಪುಹಾಕಿ ಚೆನ್ನಾಗಿ ಕೈಯಾಡಿಸಿ, ಸಣ್ಣ ಉರಿಯಲ್ಲಿ ಒಂದೈದು ನಿಮಿಷ ಕುದಿಯಲು ಬಿಡಿ. ಖಾರದ ಘಾಟು ಹೋಗುತ್ತಿದ್ದಂತೆಯೇ, ಬೆಲ್ಲದ ಪುಡಿ ಬೆರೆಸಿ, ಮತ್ತೂಂದು ಸುತ್ತು ಕೈಯಾಡಿಸಿ, ಬಾಣಲಿ ಮುಚ್ಚಿ, ಉರಿ ನಂದಿಸಿ. ಹದವಾದ ಗೊಜ್ಜನ್ನು ಅನ್ನ, ದೋಸೆ, ಚಪಾತಿ ಜೊತೆಗೆ ಸವಿಯಬಹುದು.

Also Read  ಮಂಡೆಕೋಲು : ಪುಟಾಣಿಗಳಿಗೆ ಒಲಿದ "ಸಿರಿಗನ್ನಡ ಕಂದ ಪ್ರಶಸ್ತಿ"

4.ಮಾವಿನಕಾಯಿಚಟ್ನಿ
ಬೇಕಾಗುವ ಸಾಮಗ್ರಿ : ತುರಿದ ಮಾವಿನಕಾಯಿ- ಕಾಲು ಕಪ್‌, ಕಡಲೆಬೇಳೆ- ಅರ್ಧ ಕಪ್‌, ಒಣಮೆಣಸು- 8, ಉಪ್ಪು.

ಮಾಡುವ ವಿಧಾನ: ಬಾಣಲಿಗೆ ಎಣ್ಣೆ ಹಾಕದೆ, ಕಡಲೆಬೇಳೆ, ಒಣಮೆಣಸು ಹಾಕಿ ಕೆಂಬಣ್ಣ ಬರುವವರೆಗೆ ಹುರಿದುಕೊಂಡು ಒಂದು ತಟ್ಟೆಯಲ್ಲಿ ಆರಲು ಬಿಡಿ. ಅದೇ ಬಾಣಲೆಯ ಬಿಸಿಯಲ್ಲೇ ತುರಿದ ಮಾವಿನಕಾಯಿ ಹಾಕಿ ಬಾಡಿಸಿ, ಬೇಳೆಯ ಮಿಶ್ರಣಕ್ಕೆ ಸೇರಿಸಿ. ತಣಿದ ನಂತರ ರುಚಿಗೆ ತಕ್ಕಷ್ಟು ಕಲ್ಲುಪ್ಪು ಹಾಕಿ ಅರೆದರೆ ಮಾವಿನ ಕಾಯಿ ಚಟ್ನಿ ರೆಡಿ. ಇದಕ್ಕೆ ಸಾಸಿವೆ-ಇಂಗಿನ ಒಗ್ಗರಣೆ ಕೊಟ್ಟರೆ ರುಚಿ ಹೆಚ್ಚುತ್ತದೆ.

error: Content is protected !!
Scroll to Top