ಡಿಪ್ಲೋಮಾ ಮತ್ತು ಪೋಸ್ಟ್ ಡಿಪ್ಲೋಮಾ ಪ್ರವೇಶಕ್ಕೆ ಆನ್‍ಲೈನ್‍ನಲ್ಲಿ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮೈಸೂರು, ಮೇ.22.  ಮೈಸೂರಿನಲ್ಲಿರುವ ಕೇಂದ್ರಿಯ ಪ್ಲಾಸ್ಟಿಕ್ ತಂತ್ರಜ್ಞಾನ ಸಂಸ್ಥೆ ಸಿಪೆಟ್ (ಕೌಶಲ್ಯ ಮತ್ತು ತಾಂತ್ರಿಕ ತರಬೇತಿ ಕೇಂದ್ರ) ಸಿಪೆಟ್ ಸಂಸ್ಥೆಯು ಭಾರತ ಸರ್ಕಾರದ ರಸಾಯನ ಪಟ್ರೋರಸಾಯನ ಮತ್ತು ರಸಗೊಬ್ಬರ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾಗಿದೆ. ಸಂಸ್ಥೆಯು ದೇಶದ ಪ್ಲಾಸ್ಟಿಕ್ ಕೈಗಾರಿಕಾ ವಲಯಕ್ಕೆ ಬೇಕಾದ ಮಾನವ ಸಂಪನ್ಮೂಲಕ್ಕೆ ಶೈಕ್ಷಣಿಕ ತರಬೇತಿ ನೀಡಲಾಗುತ್ತಿದೆ. 2019-20 ನೇ ಸಾಲಿನ ಡಿಪ್ಲೋಮಾ ಮತ್ತು ಪೋಸ್ಟ್ ಡಿಪ್ಲೋಮಾ ಪ್ರವೇಶಕ್ಕೆ ಆನ್‍ಲೈನ್ ಮಾಲಕ ಅರ್ಜಿ ಆಹ್ವಾನಿಸಿದೆ.ಅರ್ಜಿ ಸಲ್ಲಿಸಲು ಜೂನ್ 30 ಕೊನೆಯ ದಿನ.

ಡಿಪ್ಲೋಮಾ ಇನ್ ಪ್ಲಾಸ್ಟಿಕ್ ಟೆಕ್ನಾಲಜಿ (3ವರ್ಷ), ಡಿಪ್ಲೋಮಾ ಇನ್ ಪ್ಲಾಸ್ಟಿಕ್ ಮೌಲ್ಡ್ ಟೆಕ್ನಾಲಜಿ (3 ವರ್ಷ) ಪೋಸ್ಟ್ ಗ್ರಾಜುಯೇಟ್ ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಪ್ರೊಸೆಸಿಂಗ್ & ಟೆಸ್ಟಿಂಗ್ (ಒಂದೂವರೆ ವರ್ಷ), ಕೋರ್ಸ್‍ಗಳಿಗೆ ಎಸ್.ಎಸ್.ಎಲ್.ಸಿ, ಪಿ.ಯು.ಸಿ(ವಿಜ್ಞಾನ) ಮತ್ತು ಬಿ.ಎಸ್.ಸ್ಸಿ(ರಸಾಯನ) ಪರೀಕ್ಷೆಯಲ್ಲಿ ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದು.ಹೆಚ್ಚಿನ ಮಾಹಿತಿಗಾಗಿ http://eadmission.cipet.gov.in ಅಥವಾ ದೂರವಾಣಿ ಸಂಖ್ಯೆ : 0821-2510618/ 9480253024/ 9632688884 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

Also Read  ಮೂಡುಬಿದಿರೆ :ಅಪರಾಧ ತಡೆಗೆ ಪೇಟೆಯಲ್ಲಿ ವಾಹನ ಜಾಥಾ

error: Content is protected !!
Scroll to Top