6ನೇ ತರಗತಿ ರಿಂದ ಪಿ.ಯು.ಸಿ ವರೆಗಿನ ವಿಧ್ಯಾರ್ಥಿಗಳಿಗಾಗಿ ಫಿಲಾಟೆಲಿ ಬೇಸಿಗೆ ಶಿಬಿರ➤ ಅಂಚೆ ಇಲಾಖೆ ಮಂಗಳೂರು ವಿಭಾಗ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.21.ಮೇ 24 ಮತ್ತು 25 ರಂದು ಅಂಚೆ ಇಲಾಖೆ ಮಂಗಳೂರು ವಿಭಾಗವು ತರಗತಿ 6 ರಿಂದ ಪಿ.ಯು.ಸಿ ವರೆಗಿನ ವಿಧ್ಯಾರ್ಥಿಗಳಿಗಾಗಿ ಫಿಲಾಟೆಲಿ ಬಗ್ಗೆ ಬೇಸಿಗೆ ಶಿಬಿರವನ್ನು ಹಮ್ಮಿಕೊಂಡಿದೆ. ಈ ಶಿಬಿರದಲ್ಲಿ ಫಿಲಾಟೆಲಿ ಬಗೆಗಿನ ಮೂಲ ಮಾಹಿತಿ, ಸ್ಟಾಂಪ್ ಪ್ರದರ್ಶನದ ತಯಾರಿ, ಫಿಲಾಟೆಲಿ ಬ್ಯೂರೋ ಭೇಟಿ ಮುಂತಾದವುಗಳ ಬಗ್ಗೆ ಮಾಹಿತಿ ನೀಡಲಾಗುವುದು.

ಸ್ಟಾಂಪ್ ಕಲೆಕ್ಷನ್ ಉತ್ತಮ ಹವ್ಯಾಸವಾಗಿದ್ದು, ಜ್ಞಾನವೃದ್ದಿಗೆ ಉತ್ತಮ ದಾರಿಯಾಗಿದೆ. ರಿಜಿಸ್ಟ್ರೇಷನ್ ದರ 200/- ರಿಜಿಸ್ಟ್ರೇಷನ್‍ಗಾಗಿ ದೂರವಾಣಿ ಸಂಖ್ಯೆ: 0824-2218400,2217076. ಇ-ಮೇಲ್ :domangalore.ka@indiapost.gov.in ಶಿಬಿರದ ಸಮಯ ಬೆಳಿಗ್ಗೆ 9.30 ರಿಂದ – ಅಪರಾಹ್ನ 12.30 ರವರೆಗೆ ಬಲ್ಮಠ ಅಂಚೆ ಕಚೇರಿ, ಲಕ್ಷ್ಮಿ ಮೆಮೋರಿಯಲ್ ಕಾಲೇಜು ಹತ್ತಿರ, ಮಂಗಳೂರು-575002 ಇಲ್ಲಿ ಶಿಬಿರ ನಡೆಯಲಿದೆ ಎಂದು ಮಂಗಳೂರು ಹಿರಿಯ ಅಂಚೆ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.

Also Read  ➤ ಮಂಗಳೂರು ಗ್ಯಾಸ್ ಟ್ಯಾಂಕರ್ ನಲ್ಲಿ ಸೋರಿಕೆ

error: Content is protected !!
Scroll to Top