ಹಿರಿಯ ಅಂಚೆ ಅಧೀಕ್ಷಕರ ಕಚೇರಿ ಬಲ್ಮಠದಲ್ಲಿ ತ್ರೈಮಾಸಿಕ ಅಂಚೆ ಅದಾಲತ್

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.21.ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಚೇರಿ ಬಲ್ಮಠದಲ್ಲಿ ತ್ರೈಮಾಸಿಕ ಅಂಚೆ ಅದಾಲತ್ ಜೂನ್ 7 ರಂದು ಮಧ್ಯಾಹ್ನ 3 ಗಂಟೆಗೆ ಜರಗಲಿದೆ. ಸಾರ್ವಜನಿಕರು ಮಂಗಳೂರು ಅಂಚೆ ವಿಭಾಗಕ್ಕೆ ಸಂಬಂಧಪಟ್ಟ ದೂರುಗಳೇನಾದರೂ ಇದ್ದಲ್ಲಿ ಅಂಚೆ ಅದಾಲತ್ ತಲೆಬರಹದಡಿಯಲ್ಲಿ ಜೂನ್ 4 ರೊಳಗೆ ಹಿರಿಯ ಅಂಚೆ ಅಧೀಕ್ಷಕರು, ಮಂಗಳೂರು ವಿಭಾಗ ಬಲ್ಮಠ ಮಂಗಳೂರು 575002 ಈ ವಿಳಾಸಕ್ಕೆ ಕಳುಹಿಸಬಹುದು.

ಅಥವಾ ವಾಟ್ಸಾಪ್ ಸಂಖ್ಯೆ: 9448291072 ಮೂಲಕ ದೂರುಗಳನ್ನು ಕಳುಹಿಸಬಹುದು. ಅಂಚೆ ವಿಭಾಗಕ್ಕೆ ಸಂಬಂಧಪಟ್ಟ ದೂರುಗಳನ್ನು ಮಾತ್ರ ಕಳುಹಿಸಬೇಕೆಂದು ಹಿರಿಯ ಅಂಚೆ ಅಧೀಕ್ಷಕರು ಮಂಗಳೂರು ವಿಭಾಗ ಬಲ್ಮಠ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ಚರಿತ್ರೆ ಪ್ರಸಿದ್ಧ ಬೆಳ್ಳಾರೆ ಮಖಾಂ ಉರೂಸಿಗೆ ವಿದ್ಯುಕ್ತ ಚಾಲನೆ

error: Content is protected !!
Scroll to Top