(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.21. ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆಗಳ ಸುರಕ್ಷತೆಯ ಮುನ್ನೆಚ್ಚರಿಕೆ ಕ್ರಮವಾಗಿ ಜೂನ್ 1 ರಿಂದ ಅಕ್ಟೋಬರ್ 15 ರ ಅವಧಿಗೆ ನೀರಿನ ಕೊಳವೆ ಜೋಡಣೆ ಒಳಚರಂಡಿ ವ್ಯವಸ್ಥೆ, ಒ.ಎಫ್.ಸಿ ಕೇಬಲ್‍ಗಳ ಅಳವಡಿಕೆ ಹಾಗೂ ಇತರ ಕೆಲಸ ಕಾರ್ಯಗಳಿಗಾಗಿ ರಸ್ತೆ ಅಗೆತ ಮಾಡುವುದನ್ನು ನಿಷೇಧಿಸಲಾಗಿದೆ.
ಅನಧಿಕೃತವಾಗಿ ಈ ರೀತಿಯ ಕೆಲಸ ನಿರ್ವಹಿಸಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಎಂದು ಆಯುಕ್ತರು ಮಹಾನಗರಪಾಲಿಕೆ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.