(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.20.ಮೇ 17 ಜಿಲ್ಲಾ ಗೃಹರಕ್ಷಕ ದಳದ ಕಚೇರಿ, ಮೇರಿಹಿಲ್ ಇಲ್ಲಿ ಪ್ರವಾಹ ರಕ್ಷಣಾ ಮುನ್ಸೂಚನೆ ಕುರಿತು ಜಿಲ್ಲಾ ಸಮಾದೇಷ್ಟರಾದ ಡಾ; ಮುರಲೀ ಮೋಹನ್ ಚೂಂತಾರು ಇವರ ಅಧ್ಯಕ್ಷತೆಯಲ್ಲಿ ಘಟಕಾಧಿಕಾರಿಗಳ ಸಭೆಯನ್ನು ಕರೆಯಲಾಗಿತ್ತು ಮುಂಬರುವ ಮಳೆಗಾಲದಲ್ಲಿ ಸಂಭವಿಸಬಹುದಾದ ಅನಾಹುತಗಳನ್ನು ತಡೆಯುವ ಸಲುವಾಗಿ ಸೋಮೇಶ್ವರ, ಉಲ್ಲಾಳ, ಪಣಂಬೂರು, ತಣ್ಣೀರ್ ಬಾವಿ, ಸಸಿಹಿತ್ಲು, ಫಾತಿಮ ಬೀಚ್, ಮೊಗವೀರ್ ಪಟ್ನ ಸುರತ್ಕಲ್ ಬೀಚ್‍ಗಳಿಗೆ ತಲಾ 3 ಜನ ಗೃಹರಕ್ಷಕರನ್ನು ನಿಯೋಜಿಸಲು ಸೂಚಿಸಲಾಯಿತು.
ಮಳೆಗಾಲದ ಸಮಯದಲ್ಲಿ ಉಪ್ಪಿನಂಗಡಿಯ ನೇತ್ರಾವತಿ ಕುಮಾರಧಾಮ ಸಂಗಮ, ಕಡಬದ ಹೊಸಮಠ ಸೇತುವೆ, ಸುಬ್ರಹ್ಮಣ್ಯದ ಕುಮಾರದಾರ, ಸುಳ್ಯದಲ್ಲಿ ಜೋಡುಪಾಳ್ಯ ಹಾಗೂ ಪಯಾಸ್ವಿನ್, ಬಂಟ್ವಾಳದ ಬಿ.ಸಿ.ರಸ್ತೆ, ಬೆಳ್ತಂಗಡಿಯಲ್ಲಿ ನೇತ್ರಾವತಿ ನದಿಯಲ್ಲಿ ಆಗುವ ಅನಾಹುತಗಳ ಪ್ರವಾಹಗಳ ರಕ್ಷಣಾ ಕಾರ್ಯಗಳಿಗೆ ತಲಾ 4 ಗೃಹರಕ್ಷಕರಂತೆ ನಿಯೋಜಿಸಲು ಘಟಕಾದಿಕಾರಿಗಳಿಗೆ ಸೂಚಿಸಲಾಯಿತು. ಹಾಗೂ ಎಲ್ಲಾ ಘಟಕಾಧಿಕಾರಿಗಳಿಗೆ ತಮ್ಮ ತಮ್ಮ ಘಟಕಗಳಿಗೆ ಅಗತ್ಯವಿರುವ ಪ್ರವಾಹ ರಕ್ಷಣಾ ಸಲಕರಣೆಗಳ ಕೋರಿಕೆಯ ಪತ್ರವನ್ನು ನೀಡಲು ಸೂಚಿಸಲಾಯಿತು.
ಹಾಗೂ ತಮ್ಮ ತಮ್ಮ ಘಟಕಗಳಲ್ಲಿರುವ ಮುಳುಗು ತಜ್ಞರು ಹಾಗೂ ಪ್ರವಾಹ ರಕ್ಷಣಾ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರನ್ನು ಸನ್ನದ್ದಗೊಳಿಸಲು ಸೂಚಿಸಲಾಯಿತು. ಈ ಸಭೆಯಲ್ಲಿ ಕಚೇರಿಯ ಉಪ ಸಮಾದೇಷ್ಟರಾದ ರಮೇಶ್, ಕಚೇರಿಯ ಅಧೀಕ್ಷಕರಾದ ರತ್ನಾಕರ್ ಹಾಗೂ ಪ್ರಥಮ ದರ್ಜೆ ಸಹಾಯಕಿ ಅನಿತಾ ಟಿ.ಎಸ್, ಮಂಗಳೂರು ಘಟಕದ ಘಟಕಾಧಿಕಾರಿ ಮಾರ್ಕ್‍ಶೇರ್, ಮುಲ್ಕಿ ಘಟಕದ ಪ್ರಭಾರ ಘಟಕಾಧಿಕಾರಿ ಲೋಕೇಶ್, ಸುರತ್ಕಲ್ ಘಟಕದ ಪ್ರಭಾರ ಘಟಕಾಧಿಕಾರಿ ರಮೇಶ್, ಉಪ್ಪಿನಂಗಡಿ ಘಟಕದ ಪ್ರಭಾರ ಘಟಕಾಧಿಕಾರಿ ದಿನೇಶ್, ಕಡಬದ ಸಾರ್ಜೆಂಟ್ ತೀರ್ಥೇಶ್, ಸುಬ್ರಹ್ಮಣ್ಯ ಘಟಕದ ಸಾರ್ಜೆಂಟ್ ಹರೀಶ್ವಂದ್ರ, ಸುಳ್ಯ ಘಟಕದ ಸಾರ್ಜೆಂಟ್ ಅಬ್ದುಲ್ ಗಫೂರ್ ಉಪಸ್ಥಿತರಿದ್ದರು.