ರಾಜ್ಯ ಸರ್ಕಾರಿ ನೌಕರರ ಸಂಘ – ಜಿಲ್ಲಾ ಶಾಖೆ ಚುನಾವಣೆ

(ನ್ಯೂಸ್ ಕಡಬ) newskadaba.com,ಮಂಗಳೂರು,ಮೇ.18.  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ಕಾರ್ಯಾಕಾರಿ ಸಮಿತಿ ಸದಸ್ಯರು, ಅಧ್ಯಕ್ಷರು, ಖಜಾಂಚಿ ಮತ್ತು ರಾಜ್ಯ ಪರಿಷತ್ ಸದಸ್ಯರ ಸ್ಥಾನಗಳಿಗೆ ಚುನಾವಣಾ ಅಧಿಸೂಚನೆ ಹೊರಡಿಸಲಾಗಿದ್ದು ಚುನಾವಣಾಧಿಕಾರಿಯಾಗಿ ಎನ್. ಎಸ್. ಶೋಭಾ ಮಾರಾಟಾಧಿಕಾರಿ ಸಹಕಾರ ಸ0ಘಗಳ ಸಹಾಯಕ ನಿಬ0ಧಕರ ಕಚೇರಿ, ಪುತ್ತೂರು ಇವರನ್ನು ನೇಮಕ ಮಾಡಲಾಗಿದೆ.


ಅರ್ಹ ಮತದಾರರ ಪಟ್ಟಿಯನ್ನು ಹಾಗೂ ಚುನಾವಣಾ ವೇಳಾಪಟ್ಟಿಯನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ದಕ್ಷಿಣ ಕನ್ನಡ. ಜಿಲ್ಲಾ ಶಾಖೆ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಜಿಲ್ಲಾ ಕಾರ್ಯಕಾರೀ ಸಮಿತಿಯ ಚುನಾವಣಾ ಪ್ರಕ್ರಿಯೆಯು ಚುನಾವಣಾ ವೇಳಾಪಟ್ಟಿಯ0ತೆ ಮೇ 27 ರಿಂದ ಪ್ರಾರ0ಭಗೊ0ಡು ಜೂನ್ 13 ಕ್ಕೆ ಅ0ತ್ಯಗೊಳ್ಳುವುದು ಎ0ದು ಜಿಲ್ಲಾ ಸ0ಘದ ಅಧ್ಯಕ್ಷರಾದ ಪ್ರಕಾಶ್ ನಾಯಕ್ ಇವರ ಪ್ರಕಟಣೆ ತಿಳಿಸಿದೆ.

Also Read  ಸುಚನಾ ಸೇಠ್ ಪ್ರಕರಣ- ಮರಣೋತ್ತರ ಪರೀಕ್ಷೆಯಲ್ಲಿ ಸತ್ಯಾಂಶ ಬಯಲು..!

error: Content is protected !!
Scroll to Top