ಪರಿಶಿಷ್ಟವರ್ಗ ಮತ್ತು ಸಮಾಜ ಕಲ್ಯಾಣ ಇಲಾಖಾ ವತಿಯಿಂದ ವಿದ್ಯಾರ್ಥಿನಿಲಯಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.18. ಸಮಾಜ ಕಲ್ಯಾಣ ಇಲಾಖಾ ವತಿಯಿಂದ ಮತ್ತು ಪರಿಶಿಷ್ಟವರ್ಗ ಕಲ್ಯಾಣ ಇಲಾಖಾ ವತಿಯಿಂದ ನಡೆಸಲ್ಪಡುತ್ತಿರುವ ವಿದ್ಯಾರ್ಥಿನಿಲಯಗಳಿಗೆ 2019-20 ನೇ ಸಾಲಿಗೆ ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸಲು ಆನ್‍ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ. ಆಸಕ್ತ ಪ.ಜಾತಿ ವಿದ್ಯಾರ್ಥಿಗಳು www://admissions.kar.nic.in/hosteladmission ವೆಬ್‍ಸೈಟ್ ಮೂಲಕ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು www:kar.nic.in/hosteladmission  ವೆಬ್‍ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳಿಗೆ ವಿದ್ಯಾರ್ಥಿಗಳ ಹೆತ್ತವರ ಆದಾಯ ರೂ. 2 ಲಕ್ಷ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಿಗೆ ವಿದ್ಯಾರ್ಥಿಗಳ ಹೆತ್ತವರ ಆದಾಯ ರೂ.2.50 ಲಕ್ಷ ಒಳಪಟ್ಟಿರಬೇಕು.

ಅರ್ಜಿ ಸಲ್ಲಿಸಲು ಜೂನ್ 15 ಕೊನೆಯ ದಿನ ಆಗಿರುತ್ತದೆ..ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳ ವಿವರ ಇಂತಿವೆ: ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯ ಕೊಡಿಯಾಲಬೈಲ್ (ಕೋಡಿಕಲ್), ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯ ಲಾಡಿ ಮೂಡಬಿದ್ರೆ, ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ ಕದ್ರಿ, ಮಂಗಳೂರು, ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ ಬಜ್ಪೆ ಮಂಗಳೂರು, ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ ಮುಲ್ಕಿ, ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ ಎಡಪದವು, ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ ಮೂಡಬಿದ್ರೆ, ಕೇಂದ್ರಿಯಾ ಮಾದರಿ ವಸತಿಶಾಲೆ ಮಧ್ಯ (1 ರಿಂದ 10ನೇ ತರಗತಿ), ಕೆ.ಆರ್ ಶಾಲೆ ಕದ್ರಿ, ಮಂಗಳೂರು (1 ರಿಂದ 7ನೇ ತರಗತಿ).

Also Read  ಶ್ರೀಗಂಧದ ಮರ ಕಳ್ಳತನ ಪ್ರಕರಣ ➤ ಮೂವರು ಖಾಕಿ ಬಲೆಗೆ..!

ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ವಿವರ ಇಂತಿವೆ: ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಕೊಡಿಯಾಲಬೈಲ್ (ಕೋಡಿಕಲ್) (ಪಿ.ಯು.ಸಿ, ಡಿಗ್ರಿ), ಪ.ಜಾತಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಮೂಡಬಿದ್ರೆ, ಪ.ಜಾತಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ ಜೈನ್ ಪೇಟೆ ಮೂಡಬಿದ್ರೆ,. ಪ.ವರ್ಗ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ ,ಪಂಪುವೆಲ್ ಮಂಗಳೂರು ( ಪಿ.ಯು.ಸಿ, ಡಿಗ್ರಿ,ವೃತ್ತಿಪರ)ಅರ್ಜಿ ಸಲ್ಲಿಸಲು ವಿದ್ಯಾರ್ಥಿಯ ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಅಂಕಪಟ್ಟಿ, ವಿದ್ಯಾರ್ಥಿಯ ಫೊಟೋ, ವಿದ್ಯಾರ್ಥಿಯ ಮೊಬೈಲ್ ಸಂಖ್ಯೆ ಇತ್ಯಾದಿ ದಾಖಲೆಗಳನ್ನು ಸಲ್ಲಿಸಬೇಕು. ಎಂದು ಸಹಾಯಕ ನಿರ್ದೆಶಕರು(ಗ್ರೇಡ್ 1) ಸಮಾಜ ಕಲ್ಯಾಣ ಇಲಾಖೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ಪಶು ಪಾಲನಾ ಚಟುವಟಿಕೆಗಳ ಕುರಿತು ತರಬೇತಿ

error: Content is protected !!
Scroll to Top