ಹಿರಿಯ ನಾಗರಿಕರಿಗೆ ಒಂದು ದಿನದ ಉಚಿತ ಕಾರ್ಯಗಾರ

(ನ್ಯೂಸ್ ಕಡಬ) newskadaba.com,ಮಂಗಳೂರು,ಮೇ.17. ಮಂಗಳೂರಿನ ಕದ್ರಿಹಿಲ್ಸ್‍ನ ಐ.ಟಿ.ಐ ಕ್ಯಾಂಪಸ್‍ನಲ್ಲಿರುವ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆಯಲ್ಲಿ ಹಿರಿಯ ನಾಗರಿಕರಿಗಾಗಿ ಇಂಟರ್ನೆಟ್ ಹಾಗೂ ಇ-ಪೇಮೆಂಟ್ ಬಗ್ಗೆ ಅರಿವು ಮೂಡಿಸಲು ಒಂದು ದಿನದ ಕಾರ್ಯಗಾರವನ್ನು ಮೇ 21 ರಂದು ಆಯೋಜಿಸಲಾಗಿದೆ. ತ್ವರಿತವಾಗಿ ಬೆಳೆಯುತ್ತಿರುವ ತಾಂತ್ರಿಕತೆಗೆ ತಕ್ಕಂತೆ ಹಿರಿಯ ನಾಗರಿಕರು ತಮ್ಮನ್ನು ಅಗತ್ಯ ಇ-ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ಈ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ.

ತರಬೇತಿ ಪಡೆಯಲು ಆಸಕ್ತಿ ಹೊಂದಿದ, ದೈಹಿಕ ಹಾಗೂ ಮಾನಸಿಕ ಕ್ಷಮತೆಯಿಂದ ಕೂಡಿದ, 60 ವರ್ಷ ಮೀರಿದ ಹಿರಿಯ ನಾಗರಿಕರು ತಮ್ಮ ಭಾಗವಹಿಸುವಿಕೆಯನ್ನು ದೂರವಾಣಿ ಸಂಖ್ಯೆ 0824-2211477 ಗೆ ಕರೆ ಮಾಡಿ ಮೇ 18 ರ ಸಾಯಂಕಾಲ 5 ಗಂಟೆಯ ಒಳಗಡೆ ನೋಂದಾಯಿಸಬೇಕು. ತರಬೇತಿಗೆ ನಿಗಧಿ ಪಡಿಸಿದ ಸಂಖ್ಯೆ ತಲುಪುವವರೆಗೆ ನೋಂದಣೆ ಪ್ರಕ್ರಿಯೆ ಜಾರಿಯಲ್ಲಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0824-2981877 ಸಂಪರ್ಕಿಸಲು ನಿರ್ದೇಶಕರು, ಕೆ.ಜಿ.ಟಿ.ಟಿ.ಐ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ಮೋದಿ ವಿರುದ್ದ ಪೋಸ್ಟರ್ !!! ➤ 8 ಮಂದಿ ಬಂಧನ

error: Content is protected !!
Scroll to Top