ಅಂಚೆ ಜೀವ ವಿಮೆ ಪ್ರೀಮಿಯಂ ಪಾವತಿಗೆ ಆನ್ ಲೈನ್/ಕೌಂಟರ್ ಸೌಲಭ್ಯ

(ನ್ಯೂಸ್ ಕಡಬ) newskadaba.com,ಮಂಗಳೂರು,ಮೇ.17.ಅಂಚೆ ಕಚೇರಿಯ ಅಂಚೆ ಜೀವ ವಿಮೆಗೆECS ಮೂಲಕ ಪ್ರೀಮಿಯಂ ಪಾವತಿ ಮಾಡುತ್ತಿರುವ ಗ್ರಾಹಕರು ಹೊಸ ತಂತ್ರಜಾನದ ಬಳಕೆಯ ಕಾರ್ಯವು ಪ್ರಗತಿಯಲ್ಲಿರುವುದರಿಂದ SBI ಹೊರತಾಗಿ ಇತರ ಬ್ಯಾಂಕ್ ಗಳಿಂದ ECS ಗೆ ನೋಂದಾಯಿಸಿದ ಹೆಚ್ಚಿನ ಪಾಲಿಸಿಗಳಿಗೆ  ECS ಮುಖಾಂತರ ಪ್ರೀಮಿಯಂ ಪಾವತಿ ಆಗಿರುವುದಿಲ್ಲ. ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸಿ ನಿಮ್ಮ ಪಾಲಿಸಿಯ ಸ್ಟೇಟಸ್ ಅನ್ನು ಪರಿಶೀಲಿಸಬೇಕು ಹಾಗೂ ತಂತ್ರಜಾನದ ಪ್ರಗತಿಯು ಪೂರ್ಣ ಆಗುವ ತನಕ ಕೌಂಟರ್ ಮೂಲಕ ಅಥವಾ ಆನ್ ಲೈನ್ ಮೂಲಕ (https://pli.indiapost.gov.in) ಪ್ರೀಮಿಯಂ ಪಾವತಿ ಮಾಡಬೇಕು ಎಂದು ಅ0ಚೆ ಅಧೀಕ್ಷಕರು ಮ0ಗಳೂರು ವಿಭಾಗ,ಮ0ಗಳೂರು 575002 ಇವರ ಪ್ರಕಟಣೆ ತಿಳಿಸಿದೆ.

Also Read  ಕರಾವಳಿಯಲ್ಲಿ ಕಡಿಮೆಯಾದ ಮಳೆಯ ಪ್ರಮಾಣ - ನಾಳೆ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ

error: Content is protected !!
Scroll to Top