ಯುವತಿ ನಾಪತ್ತೆ

(ನ್ಯೂಸ್ ಕಡಬ) newskadaba.com,ಮಂಗಳೂರು,ಮೇ.17.ಗೌತಮಿ (ಪ್ರಾಯ 28 ವರ್ಷ) ಎಂಬಾಕೆ ಮೇ 12 ರಂದು ಪೂರ್ವಾಹ್ನ 10 ಗಂಟೆಗೆ ತನ್ನ ತಾಯಿಯಲ್ಲಿ ಪೇಟೆಗೆ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೊರ ಹೋದವಳು ಮನೆಗೆ ಬಾರದೆ ಕಾಣೆಯಾಗಿರುವ ಬಗ್ಗೆ ಪ್ರಕರಣ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಕಾಣೆಯಾದವರ ಚಹರೆ ಇಂತಿವೆ: ಮೈಬಣ್ಣ – ಬಿಳಿ, 5.3 ಅಡಿ ಎತ್ತರ, ಕಪ್ಪು ಚೂಡಿದಾರ್ ಪ್ಯಾಂಟ್ ಮತ್ತು ಕೆಂಪು ಟಾಪ್ ಧರಿಸಿದ್ದು, ವಿದ್ಯಾಭ್ಯಾಸ 7 ನೇ ಕ್ಲಾಸು, ತಿಳಿದಿರುವ ಭಾಷೆ ತುಳು, ಕನ್ನಡ. ಈ ಚಹರೆಯ ಯುವತಿಯ ಪತ್ತೆಯಾದಲ್ಲಿ ಪೊಲೀಸ್ ಆಯುಕ್ತರು ದೂರವಾಣಿ ಸಂಖ್ಯೆ: 0824-2220801,2220800, ಮೂಡಬಿದ್ರೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 08258-236333 ಇವರಿಗೆ ಮಾಹಿತಿ ನೀಡಬೇಕಾಗಿ ಠಾಣಾಧಿಕಾರಿ ಮೂಡಬಿದ್ರಿ ಪೊಲೀಸ್ ಠಾಣೆ ಇವರ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top