(ನ್ಯೂಸ್ ಕಡಬ) newskadaba.com,ಮಂಗಳೂರು,ಮೇ.17. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಕ್ತ ನಿಧಿಯು ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ರೋಗಿಗಳಿಗೆ ರಕ್ತ ನೀಡಲು ರಕ್ತದ ಕೊರತೆ ಕಂಡುಬಂದಿತ್ತು. ಆದರೆ ಕಳೆದ ಒಂದು ವಾರದಿಂದ ಸತತವಾಗಿ ರಕ್ತದಾನ ಶಿಬಿರಗಳನ್ನು ನಮ್ಮ ಸಂಸ್ಥೆಯ ವತಿಯಿಂದ ಏರ್ಪಡಿಸಲಾಗಿದ್ದು, ದಾನಿಗಳು ಸ್ಪಂದಿಸಿ ಉದಾರವಾಗಿ ರಕ್ತ ದಾನ ಮಾಡಿದ್ದರಿಂದ ರೆಡ್ ಕ್ರಾಸ್ ಲೇಡಿಗೋಷನ್ ರಕ್ತ ನಿಧಿಯಲ್ಲಿ ಕೆಳಕಂಡ ರಕ್ತದ ಎಲ್ಲಾ ಗುಂಪುಗಳು ಲಭ್ಯವಿರುತ್ತವೆ.
BLOOD GROUP | PCV | FFP | PLTC |
A+ | 71 | 127 | 09 |
B+ | 81 | 129 | 07 |
O+ | 60 | 222 | 09 |
AB+ | 22 | 43 | 05 |
A-NEG | 03 | 08 | – |
B-NEG | 03 | 12 | – |
O-NEG | 07 | 17 | – |
ಅಲ್ಲದೆ, ಮುಂದಿನ ದಿನಗಳಲ್ಲಿ ಕೂಡಾ ವಿವಿಧ ಸಂಘಟನೆಗಳು ರಕ್ತದಾನ ಶಿಬಿರಗಳನ್ನು ಏರ್ಪಡಿಸಲು ಸಿದ್ಧವಾಗಿದ್ದು, ರಕ್ತದ ಕೊರತೆಯನ್ನು ನೀಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ವ್ಯಕ್ತಿಗತವಾಗಿ ಕೂಡಾ ದಾನಿಗಳು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಸರ್ಕಾರಿ ಲೇಡಿಗೋಷನ್ ಆವರಣದಲ್ಲಿರುವ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್‍ಗೆ ಬಂದು ರಕ್ತದಾನವನ್ನು ಮಾಡಬಹುದು. ರೆಡ್ ಕ್ರಾಸ್ ರಕ್ತ ನಿಧಿಯ ದೂರವಾಣಿ ಸಂಖ್ಯೆ 0824: 2410787 / 2424788 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.