ಜೂನ್ 8 ಮತ್ತು 9 ರಂದು ಹಣ್ಣುಗಳ ಉತ್ಸವ

(ನ್ಯೂಸ್ ಕಡಬ) newskadaba.com,ಮಂಗಳೂರು,ಮೇ.17.ಮಂಗಳೂರಿನ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಜೂನ್ 8 ಮತ್ತು 9 (ಶನಿವಾರ ಮತ್ತು ಆದಿತ್ಯವಾರ) ರಂದು ‘ಹಣ್ಣುಗಳ ಉತ್ಸವ’ ವನ್ನು ತೋಟಗಾರಿಕಾ ಇಲಾಖಾ ಸಹಯೋಗದೊಂದಿಗೆ ಆಚರಿಸಲಾಗುವುದು.ಈ ಕಾರ್ಯಕ್ರಮಕ್ಕೆ ಪ್ರಾದೇಶಿಕವಾದ ಹಲಸು, ಮಾವು ಹಾಗೂ ಇತರ ಹಣ್ಣುಗಳಲ್ಲದೆ ರಾಜ್ಯದ ಇತರೆ ಕಡೆಯ ಮೌಲ್ಯವರ್ದಿತ ಹಣ್ಣುಗಳನ್ನು ಬೆಳೆಗಾರರೇ ತಂದು ಪ್ರದರ್ಶಿಸಿ ಮಾರಾಟದ ವ್ಯವಸ್ಥೆಯನ್ನು ಮಾಡಲಾಗಿದೆ.

ಅಲ್ಲದೆ, ವಿವಿಧ ಹಣ್ಣುಗಳು, ಔಷದೀಯ ಸಸಿಗಳು, ಕಸಿ ಗಿಡಗಳು, ಬೀಜಗಳು, ಖಾದಿ ಬಟ್ಟೆಗಳು, ಸಹಜ ಬಣ್ಣದ ಕೈಮಗ್ಗದ ವಸ್ತ್ರಗಳು, ಸಾವಯವ ಬಳಗದ ವಿವಿಧ ಆಹಾರ ಮತ್ತಿತ್ತರ ಪದಾರ್ಥಗಳು ಮತ್ತು ಕೃಷಿ ಉಪಕರಣಗಳನ್ನು ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯನ್ನು ಮಾಡಲಾಗಿದೆ. ಹಣ್ಣುಗಳಿಂದ ತಯಾರಿಸಲ್ಪಡುವ ವಿವಿಧ ಖಾದ್ಯಗಳು ಹಾಗೂ ಪಾನೀಯಗಳನ್ನು ಕೂಡಾ ಮಾರಾಟ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ.ಅಲ್ಲದೇ ಈ ಎರಡು ದಿನಗಳಲ್ಲಿ ಕರ್ನಾಟಕ ಸರ್ಕಾರದ ಮೀನುಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ಮೌಲ್ಯವರ್ದಿತ ಮೀನು ಮತ್ತು ಮೀನಿನ ಖಾದ್ಯಗಳನ್ನು ಪ್ರದರ್ಶಿಸಿ ಮಾರಾಟ ಮಾಡಲಾಗುವುದು. ಸ್ಟಾಲ್‍ಗಳಿಗಾಗಿ ದೂರವಾಣಿ ಸಂಖ್ಯೆ : 7349212817 ಸಂಪರ್ಕಿಸಲು ಕಾರ್ಯನಿರ್ವಾಹಕ ನಿರ್ದೇಶಕರು, ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಪ್ರಕಟಣೆ ತಿಳಿಸಿದೆ.

Also Read  ಏನೇ ಆದರೂ RSS ಕಛೇರಿ ತೆರೆಯಲು ಬಿಡುವುದಿಲ್ಲ- ಪ್ರಿಯಾಂಕ್ ಖರ್ಗೆ ಖಡಕ್ ವಾರ್ನಿಂಗ್

error: Content is protected !!
Scroll to Top