ಶುಶ್ರೂಷಣಾಧಿಕಾರಿ ಹುದ್ದೆಗೆ ನೇರ ಸಂದರ್ಶನ

(ನ್ಯೂಸ್ ಕಡಬ) newskadaba.com,ಮಂಗಳೂರು,ಮೇ.13.ಜಿಲ್ಲಾ ತರಬೇತಿ ಕೇಂದ್ರ, ಸುರತ್ಕಲ್, ಮಂಗಳೂರು, ಇಲ್ಲಿ 2019-20ನೇ ಸಾಲಿಗೆ ಶುಶ್ರೂಷಣಾಧಿಕಾರಿ ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕ ನೆಲೆಯಲ್ಲಿ ನೇಮಿಸಿಕೊಳ್ಳಲು ಮೇ 18 ರಂದು ನೇರ ಸಂದರ್ಶನ ನಡೆಸಲಾಗುವುದು. ಶುಶ್ರೂಷಣಾಧಿಕಾರಿ (ಗುತ್ತಿಗೆ) ಹಿರಿಯ ಆರೋಗ್ಯ ಸಹಾಯಕಿ, ಜನರಲ್ ನರ್ಸಿಂಗ್, ಡಿಪಿಹೆಚ್‍ಎನ್ ತರಬೇತಿ ಹೊಂದಿದವರಿಗೆ ಆದ್ಯತೆ ನೀಡಲಾಗುವುದು ತರಬೇತಿ ಬಗ್ಗೆ ಟಿ.ಓ.ಟಿ ಹೊಂದಿದ ದಾಖಲೆಗಳನ್ನು ಲಗ್ತೀಕರಿಸುವುದು. ಬಿ.ಎಸ್‍ಸಿ ನರ್ಸಿಂಗ್ ಪದವಿ ಹೊಂದಿರಬೇಕು, ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ಹಾಗೂ ಪ್ರತ್ಯೇಕವಾಗಿ ತರಬೇತಿ ನೀಡಿದ ಅನುಭವ ಇರಬೇಕು. ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದವರಿಗೆ ಆದ್ಯತೆ ನೀಡಲಾಗುವುದು.

Also Read  ಜೈನಮುನಿ ಹತ್ಯೆ- ಕಠಿಣ ಕ್ರಮಕ್ಕೆ ಒತ್ತಾಯ ➤ ಮಂಗಳೂರಿನಲ್ಲಿ ಮೌನ ಪ್ರತಿಭಟನೆ

ಈ ತರಬೇತಿ ಕೇಂದ್ರಕ್ಕೆ ಸಂಬಂಧಪಟ್ಟಂತೆ ತರಬೇತಿಗಳಲ್ಲಿ ಬೋಧನಾ ಅನುಭವ ಹಾಗೂ ಪಡೆದ ಇನ್ನಿತರ ತರಬೇತಿಗಳ ಅನುಭವದ ಆಧಾರದಲ್ಲಿ ಪ್ರಾಧಾನ್ಯತೆ ನೀಡಲಾಗುವುದು. ಹುದ್ದೆಯು ತಾತ್ಕಾಲಿಕವಾಗಿದ್ದು, ದಿನಾಂಕ: 31/03/2020 ಅಥವಾ ಖಾಯಂ ಹುದ್ದೆ ಭರ್ತಿಯಾಗುವ ವರೆಗೆ (ಯಾವುದು ಮೊದಲೋ ಅದು) ಚಾಲ್ತಿಯಲ್ಲಿರುತ್ತದೆ. ವೇತನ ಶ್ರೇಣಿ ಮಾಸಿಕ 16,538 ರೂಗಳು, ವಯೋಮಿತಿ 67 ವರ್ಷ ಒಳಗಿರಬೇಕು.ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರ ಕಛೇರಿ, ಜಿಲ್ಲಾ ತರಬೇತಿ ಕೇಂದ್ರ, ಸುರತ್ಕಲ್ ಕಛೇರಿಯ ದೂರವಾಣಿ ಸಂಖ್ಯೆ: 0824-2478930, ಪ್ರಾಂಶುಪಾಲರ ಕಚೇರಿ, ಜಿಲ್ಲಾ ತರಬೇತಿ ಕೇಂದ್ರ, ಸುರತ್ಕಲ್ ಇವರ ಪ್ರಕಟಣೆ ತಿಳಿಸಿದೆ.

Also Read  ಮರ್ಧಾಳ: ಧನಲಕ್ಷ್ಮೀ ಕಾಂಪ್ಲೆಕ್ಸ್ ಮತ್ತು ಧನಲಕ್ಷ್ಮೀ ಜನರಲ್ ಸ್ಟೋರ್ ಶುಭಾರಂಭ

error: Content is protected !!
Scroll to Top