ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಇವರ ವತಿಯಿಂದ ಸಾಲ ಸೌಲಭ್ಯ – ಆನ್‍ಲೈನ್ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com,ಮಂಗಳೂರು,ಮೇ.14.ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ನಿ) ಇವರ ವತಿಯಿಂದ ಮುಸ್ಲಿಂ, ಕ್ರಿಶ್ಚಿಯನ್, ಜೈನ್ಸ್, ಸಿಖ್ಖ್, ಹಾಗೂ ಪಾರ್ಸಿ ಜನಾಂಗದ ವಿದ್ಯಾರ್ಥಿಗಳು 2019-20ನೇ ಸಾಲಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ(ಸಿ.ಇ.ಟಿ)ಹಾಜರಾಗಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣ ಕೈಗೊಳ್ಳಲು ನಿಗಮದಿಂದ ಇಂಜಿನಿಯರಿಂಗ್ ಕೋರ್ಸಿಗೆ ವಾರ್ಷಿಕ ಗರಿಷ್ಠ ರೂ 56,000/- ಹಾಗೂ ಬಿ.ಡಿ.ಎಸ್ ಮತ್ತು ಎಂ.ಬಿ.ಬಿ.ಎಸ್ ಕೋಸ್ರ್ಮಗಳಿಗೆ ನೀಟ್ ಮೂಲಕ ವಾರ್ಷಿಕ ಗರಿಷ್ಟ ರೂ. 3,50,000/- ಶೇ 2%ರ ಸೇವಾ ಶುಲ್ಕದ ಆಧಾರದ ಮೇಲೆ ಸಾಲ ಸೌಲಭ್ಯ (Pre Sanction Loan) ಕಲ್ಪಿಸಲಾಗುತ್ತದೆ. ಆನ್‍ಲೈನ್ ಅರ್ಜಿ ಸಲ್ಲಿಸಲು ಜೂನ್ 5 ಕೊನೆಯ ದಿನಾಂಕವಾಗಿದೆ.ಈ ಸಂಬಂಧ 2019-20ನೇ ವರ್ಷದ ವೃತ್ತಿಪರ ಶಿಕ್ಷಣ ಸೇರ ಬಯಸುವ ಜಿಲ್ಲೆಯ ಕುಟುಂಬದ ವಾರ್ಷಿಕ ವರಮಾನ ರೂ. 6,00,000/- ಮಿತಿಯಲ್ಲಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಅರ್ಜಿಗಳನ್ನು ಆನ್‍ಲೈನ್ ಮೂಲಕ ಸಲ್ಲಿಸಲು ತಿಳಿಸಲಾಗಿದೆ.

Also Read  ದಲಿತರ ಬೇಡಿಕೆಗಳನ್ನು ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು - ಯು.ಟಿ ಖಾದರ್ ಆಶ್ವಾಸನೆ

ನಿಗಮದ ವೆಬ್‍ಸೈಟ್ URL kmdc.kar.nic.in/arivu2 ಲಿಂಕನ್ನು ತೆರೆದು ಆನ್‍ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡಿ ಪ್ರಿಂಟ್‍ಔಟ್‍ನ್ನು ತೆಗೆದುಕೊಂಡು ಕಿಖ ಕೋಡಿನೊಂದಿಗೆ ಇತರೆ ದಾಖಲಾತಿಗಳೊಂದಿಗೆ ನೇರವಾಗಿ ಜಿಲ್ಲಾ ಕಛೇರಿಗೆ ಸಲ್ಲಿಸಬೇಕು. ಅಂತಹ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ/ಸಿ.ಇ.ಟಿಗೆ ಪಾವತಿಸಬೇಕಾದ ಶುಲ್ಕವನ್ನು ಸೀಟು ಪಡೆಯುವ ಹಂತದಲ್ಲಿಯೇ ನಿಗಮದಿಂದ ಸಾಲ ಮಂಜೂರು ಮಾಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಹೊಂದಾಣಿಕೆ ಮಾಡಲಾಗುತ್ತದೆ.ಅರ್ಜಿ ಸಲ್ಲಿಸಲುಬೇಕಾದ ದಾಖಲೆಗಳು:- ಜಾತಿ ಮತ್ತು ಆದಾಯ ಪ್ರಮಾಣ ಪತ್ರ ರೂ. 6,00,000/- ಮಿತಿಯಲ್ಲಿರಬೇಕು. ಆಧಾರ್ ಕಾರ್ಡ್ ಮತ್ತು ರೇಶನ್ ಕಾರ್ಡ್ ಜರಾಕ್ಸ್ ಪ್ರತಿ. ಸಿ.ಇ.ಟಿ ಪರೀಕ್ಷೆ ಪ್ರವೇಶ ಪತ್ರ. ಎಸ್.ಎಸ್.ಎಲ್.ಸಿ ಅಂಕ ಪಟ್ಟಿಯ ದೃಢೀಕೃತ ಪ್ರತಿ. 50 ರೂಪಾಯಿಯ ಇ-ಸ್ಟ್ಯಾಂಪ್‍ನೊಂದಿಗೆ ಇಂಡಿಮ್ನಿಟಿ ಬಾಂಡ್. ವಿದ್ಯಾರ್ಥಿ ಮತ್ತು ಪೋಷಕರ ಭಾವಚಿತ್ರ.ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ನಿ) ಮೌಲಾನ ಆಝಾದ್ ಅಲ್ಪಸಂಖ್ಯಾತರ ಭವನ, ಓಲ್ಡ್ ಕೆಂಟ್ ರೋಡ್, ಪಾಂಡೇಶ್ವರ, ಮಂಗಳೂರು ದೂರವಾಣಿ ಸಂಖ್ಯೆ-0824-2429044 ಇವರನ್ನು ಸಂಪರ್ಕಿಸಬಹುದು.

Also Read  ಕಡಬ: ಸಂಪರ್ಕ ರಸ್ತೆ ಇಲ್ಲದೆ ರೋಗಿಯನ್ನು ಹೊತ್ತುಕೊಂಡು ಸಾಗಿದ ಗ್ರಾಮಸ್ಥರು.!!

error: Content is protected !!
Scroll to Top