ಸೌಜನ್ಯ ಮಹಿಳಾ ಮಂಡಲದ ಮಹಾಸಭೆ:

(ನ್ಯೂಸ್ ಕಡಬ) newskadaba.com,ಉರ್ವ, ಹೊೈಗೆಬೈಲು ,ಮೇ.13. ಇಲ್ಲಿನ ಸೌಜನ್ಯ ಮಹಿಳಾ ಮಂಡಲದ ಮಹಾಸಭೆಯುಇತ್ತೀಚೆಗೆ ಮಂಡಲದಅಧ್ಯಕ್ಷ ಶಾಂತಾಎಲ್.ಭಟ್‍ಇವರಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದಗೌರವಾಧ್ಯಕ್ಷೆ ಕೆ.ಎ ರೋಹಿಣಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತ ಬಯಸಿದರು.ಕಾರ್ಯದರ್ಶಿ ರಾಜೇಶ್ವರಿಎಸ್.ರಾವ್ ವಾರ್ಷಿಕ ವರದಿಯನ್ನೊಪ್ಪಿಸಿ ,ಕೋಶಾಧಿಕಾರಿ ನಳಿನಿ ವಿ.ರೈಆಯವ್ಯಯವನ್ನು ಮಂಡಿಸಿದರು. ಮುಂದಿನ ವರ್ಷದಕಾರ್ಯಯೋಜನೆಯನ್ನು ಸಾಂಸ್ಕೃತಿಕ ಕಾರ್ಯದರ್ಶಿ ರಮಾಎನ್. ಹಾಗೂ ಪ್ರತಿಭಾ ಡಿ.ವಿಅಂದಾಜುಆಯವ್ಯಯ ಪಟ್ಟಿಯನ್ನು ಮಹಾಸಭೆಯ ಮುಂದಿಟ್ಟರು.

2019-20ರ ಸಾಲಿಗೆ 19 ಮಂದಿ ಸದಸ್ಯರನ್ನುಕಾರ್ಯಕಾರಿ ಸಮಿತಿಗೆಆಯ್ಕೆ ಮಾಡಲಾಯಿತು. ಕೆ.ಎ.ರೋಹಿಣಿ, ಗೌರವಾಧ್ಯಕ್ಷೆ, ಹೇಮಲತಾರಮೇಶ, ಅಧ್ಯಕ್ಷೆಯಾಗಿ, ರಮಾಎನ್. ಉಪಾಧ್ಯಕ್ಷೆ, ರಾಜೇಶ್ವರಿಎಸ್.ರಾವ್ ಕಾರ್ಯದರ್ಶಿ, ಶೈಲಜ ಎ. ರಾವ್‍ಜೊತೆ ಕಾರ್ಯದರ್ಶಿ, ಪ್ರತಿಭಾ ಡಿ.ವಿಕೋಶಧಿಕಾರಿ, ರತ್ನಾವತಿಜೆ. ಬೈಕಾಡಿ  ಸಾಂಸ್ಕೃತಿಕಕಾರ್ಯದರ್ಶಿ, ಸುಶೀಲ ಪುರುಷೋತ್ತಮಜೊತೆ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಮಹಾಸಭೆಯಲ್ಲಿ ಮಂಡಲದ ನಿಯಮಾವಳಿಗಳಿಗೆ ಸೂಕ್ತ ತಿದ್ದುಪಡಿತರಲಾಯಿತು. ಕೊನೆಯಲ್ಲಿರತ್ನಾವತಿಜೆ. ಬೈಕಾಡಿ ವಂದಿಸಿದರು.

Also Read  ಅಂಬರ್ ಗ್ರೀಸ್ ಎಂದು ನಂಬಿಸಿ ಹಳದಿ ಬಣ್ನದ ವಸ್ತು ಮಾರಾಟಕ್ಕೆ ಯತ್ನ- ಮೂವರು ಅಂದರ್

error: Content is protected !!
Scroll to Top