ಕೋಳಿ ಸಾಕಣೆ ತರಬೇತಿ

(ನ್ಯೂಸ್ ಕಡಬ) newskadaba.com,ಮಂಗಳೂರು,ಮೇ.13.ನಾಟಿಕೋಳಿಗೆ ಹೋಲುವ ವಿಶೇಷ ತಳಿಯಾದ ಸ್ವರ್ಣಧಾರ ಕೋಳಿಯು ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಬೇಡಿಕೆಯಾಗಿದೆ. ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಅಬಿವೃದ್ಧಿ ಪಡಿಸಿದ ಸ್ವದೇಶಿ ತಳಿಗಳೊಂದಾದ ಸ್ವರ್ಣಧಾರ ಕೋಳಿ ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಲಭ್ಯವಿದ್ದು ಆಸಕ್ತರಿಗೆ ನಿನ್ನೆ 10ನೇ ಶುಕ್ರವಾರ ತರಬೇತಿಯ ಮೂಲಕ ವೈಜ್ಞಾನಿಕ ಕೋಳಿ ಸಾಕಣೆ ವಿಧಾನವನ್ನು ತಿಳಿಸಲಾಯಿತು.ಕೇಂದ್ರದ ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಎ.ಟಿ. ರಾಮಚಂದ್ರ ನಾಯ್ಕ ರವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಾ ಘಟ್ಟದ ಪ್ರದೇಶದಲ್ಲಿ ಪ್ರಚಲಿತವಾಗಿರುವ ಕೋಳಿಗಳಿಗೆ ಇತ್ತೀಚೆಗೆ ಕರಾವಳಿಯ ಜನರಲ್ಲೂ ಸಹಾ ಆಸಕ್ತಿ ಮೂಡುತ್ತಿದೆ ಎಂದು ಹೇಳಿದರು.
ಕೇವಲ ರೈತರಲ್ಲದೇ, ಕೃಷಿ ಭೂಮಿ ಇಲ್ಲದವರೂ ಸಹಾ ಕೋಳಿ ಸಾಕಣೆ ಮಾಡಬಹುದೆಂದು ಹೇಳಿದರು.

ತರಭೇತಿ ಕಾರ್ಯಾಗಾರದಲ್ಲಿ ಆಗಮಿಸಿದ ಆಸಕ್ತ ಆಹ್ವಾನಿತರಿಗೆ ಕೋಳಿ ಸಾಕಣೆಯಿಂದ ಸಿಗಬಹುದಾದ ಪ್ರಯೋಜನಗಳನ್ನು ತಿಳಿಸಿಕೊಟ್ಟರು. ಕೇವಲ ಮಾಂಸಕ್ಕಾಗಿ ಅಲ್ಲದೇ ಮೊಟ್ಟೆ ಮಾಡಲೂ ಸಹಾ ಯೋಗ್ಯವಾದ ಸ್ವರ್ಣಧಾರ ತಳಿಯು ಒಂದು ವರದಾನವೆಂದು ಈ ಸಂದರ್ಭದಲ್ಲಿ ಹೇಳಿದರು.ನಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ರೈತರು ಕೋಳಿ ಸಾಕಣೆಯನ್ನು ಒಂದು ಉಪಕಸುಬಾಗಿ ಮಾಡಬಹುದಾಗಿದೆ ಹಾಗೂ ಬೇರೆ ಬೆಳೆಗಳಿಗೆ ಹಾಕುವಷ್ಟು ಬಂಡವಾಳಕ್ಕೆ ಹೋಲಿಸಿದರೆ, ಇದಕ್ಕೆ ಅತೀ ಕಡಿಮೆ ಖರ್ಚಿನಲ್ಲಿ ಮಾಡಬಹುದಾಗಿದೆಯೆಂದು ಹೇಳಿದರು. ಸ್ವರ್ಣಧಾರ ಕೋಳಿಯನ್ನು ಮೊಟ್ಟೆ ಮತ್ತು ಮಾಂಸಕ್ಕಾಗಿ ಸಾಕಲಾಗುತ್ತದೆ.

Also Read  ತೂಫಾನ್- ಕೆಎಸ್ಆರ್ಟಿಸಿ ಬಸ್ ಢಿಕ್ಕಿ ► 6 ಮಂದಿ ಸ್ಥಳದಲ್ಲೇ ಮೃತ್ಯು

ಈ ಕೋಳಿಯು 3 ತಿಂಗಳಿಗೆ ಸರಾಸರಿ 4 ರಿಂದ 5 ಕೆ.ಜಿ.ಯವರೆಗೆ ಬೆಳೆಯುವಂತಹ ಸಾಮಥ್ರ್ಯ ಹೊಂದಿದ್ದು ನಿದರ್ಶನಗಳೂ ಕೂಡ ಇದೆ ಎಂದು ಹೇಳಿದರು. ಹಾಗಾಗಿ ಈ ಕೋಳಿಗೆ ಬೇಡಿಕೆ ಹೆಚ್ಚಾಗುವುದನ್ನು ಗಮನಿಸಿದರೆ ಕೋಳಿ ಸಾಕಣೆಯು ಒಂದು ಲಾಭದಾಯಕ ಕಸುಬಾಗುವುದರಲ್ಲಿ ಯಾವುದೇ ಸಂಶಯವಿಲ್ಲವೆಂದು ಡಾ. ಎ.ಟಿ. ರಾಮಚಂದ್ರ ನಾಯ್ಕ ರವರು ಅಭಿಪ್ರಾಯ ವ್ಯಕ್ತಪಡಿಸಿದರು.ಕೋಳಿಗಳನ್ನು ಸಾಕುವುದು, ಮರಿಮಾಡುವುದು, ಆಹಾರ ನೀಡುವುದು, ಜೋಪಾಸಣೆ ಮಾಡುವುದು, ಕೋಳಿಗೆ ಸಹಜವಾಗಿ ತಗಲುವ ರೋಗಗಳ ನಿರ್ವಹಣೆ ಹಾಗೂ ಕೋಳಿಯಿಂದ ಹೊರಹುಮ್ಮುವ ತ್ಯಾಜ್ಯಗಳ ನಿರ್ವಹಣೆ ಮತ್ತು ಉಪಯೋಗಗಳ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿ ಹಾಗೂ ಪಶು ವೈದ್ಯ ಡಾ. ವಸಂತ್ ಕುಮಾರ್ ಶೆಟ್ಟಿ ತಿಳಿಸಿಕೊಟ್ಟರು. ಕೋಳಿ ಮರಿ ಕೊಳ್ಳುಗರು ಕೂಲಂಕುಷವಾಗಿ ಕಾರ್ಯಾಗಾರದಲ್ಲಿ ಮುಕ್ತ ಚರ್ಚೆಯಲ್ಲಿ ಭಾಗವಹಿಸಿದ್ದರು. ಪ್ರತಿಯಾಗಿ, ಸಲಹೆ ಸೂಚನೆಗಳನ್ನು ಸಂಪನ್ಮೂಲ ವ್ಯಕ್ತಿಯವರು ಮಾಹಿತಿ ನೀಡಿದರು.ಡಾ. ಟಿ.ಎಸ್. ಅಣ್ಣಪ್ಪಸ್ವಾಮಿ, ಮೀನುಗಾರಿಕೆ ತಜ್ಞ, ಕಾರ್ಯಕ್ರಮವನ್ನು ನಿರೂಪಿಸಿ ಕೋಳಿಯನ್ನು ಸಾಕುವ ಪ್ರವೃತ್ತಿ ಬೆಳೆಸಿಕೊಂಡರೆ ಮೊಟ್ಟೆಯಿಂದ ಮತ್ತೊಮ್ಮೆ ಮರಿ ಮಾಡಿ ಆದಾಯ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

Also Read  ಒಆರ್‌ಒಪಿ ಬಾಕಿ ಪಾವತಿಸಲು ಕೇಂದ್ರಕ್ಕೆ ಮಾರ್ಚ್ 15 ರವರೆಗೆ ಸಮಯ ನೀಡಿದ ಸುಪ್ರೀಂ ಕೋರ್ಟ್

error: Content is protected !!
Scroll to Top