ಪುರಸಭೆ, ಪಟ್ಟಣ ಪಂಚಾಯತ್‍ಗಳ ಚುನಾವಣೆ

(ನ್ಯೂಸ್ ಕಡಬ) newskadaba.com,ಮಂಗಳೂರು,ಮೇ.10.ಕರ್ನಾಟಕ ಪೌರಸಭೆ (ಕೌನ್ಸಿಲರ್ ಗಳ ಚುನಾವಣೆಗಳು) ನಿಯಮಗಳು 1977 ನಿಯಮ 8 ರ ಅಡಿಯಲ್ಲಿ ಸ್ಥಾಪಿತವಾದ ಮೂಡಬಿದ್ರೆ ಪುರಸಭೆ, ಸುಳ್ಯ ಹಾಗೂ ಮುಲ್ಕಿ ಪಟ್ಟಣ ಪಂಚಾಯತ್‍ಗಳ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಮೇ 16 ನಾಮಪತ್ರ ಸಲ್ಲಿಸಲು ಕೊನೆಯ ದಿನ, ನಾಮಪತ್ರ ಪರಿಶೀಲಿಸುವ ದಿನ ಮೇ 17, ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುಲು ಕೊನೆಯ ದಿನ ಮೇ 20, ಮತದಾನ ಅವಶ್ಯವಿದ್ದರೆ ಮತದಾನವನ್ನು ನಡೆಸಬೇಕಾದ ದಿನ ಮೇ 29 ರಂದು ಪೂರ್ವಾಹ್ನ 7 ರಿಂದ ಸಂಜೆ 5 ಗಂಟೆಯವರೆಗೆ, ಮರು ಮತದಾನ ಅವಶ್ಯವಿದ್ದರೆ ಮತದಾನವನ್ನು ನಡೆಸಬೇಕಾದ ದಿನ ಮೇ 30 ರಂದು ಪೂರ್ವಾಹ್ನ 7 ರಿಂದ ಸಂಜೆ 5 ಗಂಟೆಯವರೆಗೆ, ಮತಗಳ ಎಣಿಕೆ ಮೇ 31 ರಂದು ಪೂರ್ವಾಹ್ನ 8 ಗಂಟೆಯಿಂದ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ ಮೇ 31 ರಿಂದ ಮೊದಲೇ ಚುನಾವಣೆಯನ್ನು ಮುಕ್ತಾಯಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ಶಾಖೆಯ ಪ್ರಕಟಣೆ ತಿಳಿಸಿದೆ.

Also Read  ವಿದ್ಯಾಭಾರತಿ ಅಖಿಲ ಭಾರತ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟ ► ಕಡಬ ಸರಸ್ವತೀ ವಿದ್ಯಾಲಯ ತಂಡ ಪ್ರಥಮ ಸ್ಥಾನದೊಂದಿಗೆ ರಾಷ್ಟ್ರಮಟ್ಟಕ್ಕೆ

error: Content is protected !!
Scroll to Top