ವಯೋಶ್ರೇಷ್ಠ ಸಮ್ಮಾನ್ 2019 ರಾಷ್ಟ್ರ ಪ್ರಶಸ್ತಿ – ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com,ಮಂಗಳೂರು,ಮೇ.10.  2019-20ನೇ ಸಾಲಿನಲ್ಲಿ ಹಿರಿಯ ನಾಗರೀಕರ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಂದ/ಸಂಸ್ಥೆಗಳಿಂದ ವಯೋಶ್ರೇಷ್ಠ ಸಮ್ಮಾನ್ 2019 ರಾಷ್ಟ್ರ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಅರ್ಜಿ ಆಹ್ವಾನಿಸಲಾಗಿದೆ.ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಟ್ಟಡ, ಕೊಟ್ಟಾರ, ಮಂಗಳೂರು ಈ ಕಚೇರಿಗೆ ಅರ್ಜಿಗಳನ್ನು ಮೇ 13 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ. 0824-2458173 ಸಂಪರ್ಕಿಸಬಹುದು, ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ಸರ್ಪ ಸಂಸ್ಕಾರಕ್ಕೆ ಹೆಚ್ಚಿನ ದಕ್ಷಿಣೆಗೆ ಬೇಡಿಕೆ - ಅರ್ಚಕ ಅಮಾನತು

error: Content is protected !!
Scroll to Top