(ನ್ಯೂಸ್ ಕಡಬ) newskadaba.com ಮಂಗಳೂರು,ಮೇ.09.ರಾಯಚೂರು ವಾರದ ರಜೆಯ ಮೇಲೆ ಮನೆಗೆ ಬಂದಿದ್ದ ಯೋಧ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ ಘಟನೆ ಬುಧವಾರ ತಡರಾತ್ರಿ ಬಳ್ಳಾರಿಯ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.ಸಿಂಧನೂರು ತಾಲೂಕಿನ ಅಲಬನೂರು ಗ್ರಾಮದ ಶಿವಕುಮಾರ್ (34) ಮೃತ ಯೋಧನಾಗಿದ್ದು, ವಾರದ ರಜೆಯ ಮೇಲೆ ಮನೆಗೆ ಬಂದಿದ್ದರು. ರಾಜಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ, ಶಿವಕುಮಾರ್‌ರವರು 15 ವರ್ಷಗಳಿಂದ ನಿರಂತರವಾಗಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.ಶಿವಕುಮಾರ್ ಅವರಿಗೆ ಈ ಹಿಂದೆ 2 ಬಾರಿ ಹೃದಯಾಘಾತವಾಗಿತ್ತು ಎಂದು ತಿಳಿದು ಬಂದಿದೆ.
ಯೋಧ ಹೃದಯಾಘಾತದಿಂದ ನಿಧನ
