ಉಪ್ಪಿನಂಗಡಿ ಮಾದರಿ ಶಾಲೆಯಲ್ಲಿರುವ ಗೃಹರಕ್ಷಕರ ಘಟಕದ ಕಚೇರಿಯಲ್ಲಿ ಕುಂದು ಕೊರತೆ ಸಭೆ

ಮಂಗಳೂರು ಮೇ 6( ನ್ಯೂಸ್ ಕಡಬ) newskadaba.com,) :- ಮೇ 5 ರಂದು ಉಪ್ಪಿನಂಗಡಿ ವಾರದ ಕವಾಯತಿಗೆ ಭೇಟಿ ನೀಡಿದ ಜಿಲ್ಲಾ ಕಮಾಂಡೆಂಟ್ ಡಾ|| ಮುರಳಿ ಮೋಹನ್ ಚೂಂತಾರುರವರು ಕವಾಯತು ವೀಕ್ಷಣೆ ನಡೆಸಿದರು ನಂತರ ಉಪ್ಪಿನಂಗಡಿ ಮಾದರಿ ಶಾಲೆಯಲ್ಲಿರುವ ಗೃಹರಕ್ಷಕರ ಘಟಕದ ಕಚೇರಿಯಲ್ಲಿ ಕುಂದು ಕೊರತೆಗಳ ಸಭೆ ನಡೆಸಿದ ವೇಳೆ ಮಾತನಾಡಿದ ಕಮಾಂಡೆಂಟ್ ಕರ್ನಾಟಕ ಹಾಗೂ ಕೇರಳ ರಾಜ್ಯದ 2 ಹಂತಗಳಲ್ಲಿ ನಡೆದ ಚುನಾವಣಾ ಕರ್ತವ್ಯದಲ್ಲಿ ಭಾಗವಹಿಸಿದ ಘಟಕದ ಎಲ್ಲಾ ಗೃಹರಕ್ಷಕರಿಗೂ ಧನ್ಯವಾದಗಳನ್ನು ಸಲ್ಲಿಸಿದರು ಹಾಗೂ ಇನ್ನು ಮುಂದೆ ಎಲ್ಲಾ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಗೃಹರಕ್ಷಕರನ್ನು 3 ತಿಂಗಳಿಗೊಮ್ಮೆ ಬದಲಾವಣೆ ಮಾಡಲಾಗುತ್ತದೆ ಹಾಗೂ ಘಟಕದ ಎಲ್ಲಾ ಗೃಹರಕ್ಷಕರಿಗೆ ಇದರಿಂದ ಕರ್ತವ್ಯಗಳ ಅನುಭವ ಆಗುತ್ತದೆ ಅಲ್ಲದೇ ಇತರ ಇಲಾಖೆಯ ಕೆಲಸವನ್ನು ಕಲಿಯಲು ಅವಕಾಶ ಸಿಕ್ಕಿದಂತೆ ಆಗುತ್ತದೆ ಎಂದು ಹೇಳಿದರು ಚುನಾವಣೆಯಲ್ಲಿ ಭಾಗವಹಿಸದ ಉಪ್ಪಿನಂಗಡಿ ಘಟಕದ 2 ಗೃಹರಕ್ಷಕರನ್ನು ಅಮಾನತು ಮಾಡಲಾಗುವುದು ಎಂದು ತಿಳಿಸಿದರು.

error: Content is protected !!
Scroll to Top