ಪ್ರಥಮ ವರ್ಷದ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ

ಮಂಗಳೂರು ಏಪ್ರಿಲ್ 30( ನ್ಯೂಸ್ ಕಡಬ) newskadaba.com,):- (- ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್, ಮಂಗಳೂರು ಇಲ್ಲಿ 2019-20ನೇ ಸಾಲಿನ ಪ್ರಥಮ ವರ್ಷದ ಡಿಪ್ಲೋಮಾ ಅರ್ಜಿಗಳನ್ನು ಮತ್ತು ಮಾಹಿತಿ ಪುಸ್ತಕಗಳನ್ನು www.dte.kar.nic.in ವೆಬ್ ಸೈಟ್ ಮೂಲಕ ಡೌನ್ ಲೋಡ್ ಮಾಡಿ ಮೇ 2 ರಿಂದ 18 ರವರೆಗೆ ಪಡೆಯಬಹುದು ಹಾಗೂ ಭರ್ತಿ ಮಾಡಿದ ಅರ್ಜಿಗಳನ್ನು ಸಂಬಂಧಪಟ್ಟ ದಾಖಲೆಗಳು ಹಾಗೂ ಶುಲ್ಕ ಪಾವತಿಸಿದ ರಶೀದಿಯೊಂದಿಗೆ ಮೇ 18 ರಂದು ಸಂಜೆ 5.30 ರೊಳಗೆ ಈ ಸಂಸ್ಥೆಯಲ್ಲಿ ಅಥವಾ ಸಮೀಪದ ಸರ್ಕಾರಿ/ಅನುದಾನಿತ ಪಾಲಿಟೆಕ್ನಿಕ್‍ಗಳಲ್ಲಿ ಕಂಪ್ಯೂಟರಿಗೆ ಅಪ್‍ಲೋಡ್ ಮಾಡುವ ಸೌಲಭ್ಯವನ್ನು ಕಲ್ಪಿಸಲಾಗಿದೆ. ಹೆಚ್ಚಿನ ವಿವರಗಳಿಗೆ ಕಚೇರಿಯ ದೂರವಾಣಿ ಸಂಖ್ಯೆ 0824-2211636ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ಕಡಬ: ಸರಸ್ವತೀ ವಿದ್ಯಾಲಯದ ಪ್ರಾಥಮಿಕ ವಿಭಾಗದಲ್ಲಿ ವಿಶ್ವ ಯೋಗ ದಿನಾಚರಣೆ

 

error: Content is protected !!
Scroll to Top