ಓವರ್ ಟೇಕ್ ಮಾಡಿ ಮುಂದೆ ಹೋಗಿದ್ದಕ್ಕೆ ಜೀವ ಬೆದರಿಕೆ ಪ್ರಕರಣ

(ನ್ಯೂಸ್ ಕಡಬ) newskadaba.com ಪುತ್ತೂರು ನಗರ ಪೊಲೀಸ್ ಠಾಣೆ ,ಡಿ. 26.  ದಿನಾಂಕ: 24-12-2018 ರಂದು  ಪುತ್ತೂರು ತಾಲೂಕು ಬನ್ನೂರು ಗ್ರಾಮ ಕುಮೆರಡ್ಕ ದ ಶ್ರೀ ಲಕ್ಷ್ಮೀ ನಿಲಯದ ನೇಮಣ್ಣಗೌಡರ  ಪುತ್ರರಾದ  ಪುನೀತ್ ಕುಮಾರ್ ತನ್ನ ಬಾಬ್ತು ದ್ವಿಚಕ್ರ ಕೆ.ಎ 12 ಇ-5071 ರಲ್ಲಿ ಪುತ್ತೂರು ನಗರದಿಂದ ಹಾರಾಡಿ ಎಂಬಲ್ಲಿರುವ ಸ್ವಾಮಿಗಳ ಆಶ್ರಮದ ಕಡೆಗೆ ಹೋಗುತ್ತಿರುವಾಗ ಬೊಳ್ವಾರು ಎಂಬಲ್ಲಿ ತನ್ನ ಎದುರಿಗಿದ್ದ ಮಾರುತಿ ಓಮಿನಿ ಕಾರು ಕೆ ಎ 19-ಎಂ -9188 ನೇಯದನ್ನು ಓವರ್ ಟೇಕ್ ಮಾಡಿ ಮುಂದೆ ಹೋದರು.

ಇದರಿಂದ ಕೋಪಗೊಂಡು ಹಿಂದಿನಿಂದ ಬಂದ ಮಾರುತಿ ಓಮಿನಿ ಕಾರು ಕೆ ಎ 19-ಎಂ -9188 ನೇದರ ಚಾಲಕ ಸೈಪುದ್ದೀನ್ ಎಂಬಾತನು ಪುತ್ತೂರು ತಾಲೂಕು  ಕಸ್ಬಾ ಗ್ರಾಮದ  ಹಾರಾಡಿ ಓವರ್ ಬ್ರಿಡ್ಜ್  ಬಳಿ   ಸಂಜೆ ಸುಮಾರು 6:30 ಗಂಟೆಯ ವೇಳೆಗೆ  ಮೂರು ಬಾರಿ ಓಮಿನಿ ಕಾರಿನಿಂದ  ಪುನೀತ್ ಕುಮಾರ್ ರ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ  ಢಿಕ್ಕಿ ಹೊಡೆಸಿದ್ದಲ್ಲದೇ  ಢಿಕ್ಕಿಯಾದ ಕಾರಣದಿಂದಾಗಿ ಪುನೀತ್ ಕುಮಾರ್ ರವರು ಬ್ಯಾಲೆನ್ಸ್ ತಪ್ಪಿ ಕೆಳಗೆ ಬಿದ್ದಾಗ ಅಲ್ಲಿಗೆ ಓಮಿನಿ ಕಾರನ್ನು ಅಡ್ಡವಾಗಿ  ನಿಲ್ಲಿಸಿ ಕಾರಿನಿಂದ ಕೆಳಗೆ ಇಳಿದು ಬಂದು ಪುನೀತ್ ಕುಮಾರ್ ರವರಿಗೆ  ಅವಾಚ್ಯ ಶಬ್ದಗಳಿಂದ ಬೈದು ಬಾರಿ ಓವರ್ ಟೇಕ್ ಮಾಡುತ್ತೀಯಾ ಎಂದು ಪುನೀತ್ ಕುಮಾರ್ ರ  ಕುತ್ತಿಗೆ ಹಿಡಿದು ಎಳೆದು ಹೊಡೆದುದಲ್ಲದೆ,  ಇನ್ನೊಂದು ಭಾರಿ  ಓವರ್ ಟೇಕ್ ಮಾಡಿದರೆ ನಿನ್ನನ್ನು ಕಾರಿನಡಿಗೆ ಹಾಕಿ ಕೊಂದು ಹಾಕುತ್ತೇನೆ ಎಂಬುದಾಗಿ ಜೀವ ಬೆದರಿಕೆಯನ್ನು ಒಡ್ಡಿರುತ್ತಾನೆ.ಈ ಬಗ್ಗೆ ಪುತ್ತೂರು ನಗರ ಠಾಣೆ  ಅ.ಕ್ರ: 188/2018  ಕಲಂ:  323,504,506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

Also Read  ಮಂಗಳೂರು ಮಾರುಕಟ್ಟೆಯಿಂದ ವ್ಯಾಪಾರಸ್ಥರು ಸ್ಥಳಾಂತರಗೊಳಿಸದಿದ್ದರೆ ಕಟ್ಟುನಿಟ್ಟಿನ ಕ್ರಮ- ಎಪಿ.ಎಂ.ಸಿ ಎಚ್ಚರಿಕೆ

error: Content is protected !!
Scroll to Top