(ನ್ಯೂಸ್ ಕಡಬ) newskadaba.com ರಾಮಕುಂಜ, ಡಿ. 22 ಪ್ರತಿಯೊಬ್ಬ ವಿದ್ಯಾರ್ಥಿಯು ನಾಯಕನಾಗಬೇಕೆಂಬ ಅಧ್ಬುತ ಕನಸುಗಳನ್ನು ಕಟ್ಟಿಕೊಳ್ಳಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಜೀವನವನ್ನು ಸದುಪಯೋಗಿಸಿಕೊಂಡು ಜೀವನ ಮೌಲ್ಯಗಳನ್ನು ವೃದ್ದಿಸಿಕೊಂಡು ಗುರಿಮುಟ್ಟಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು. ಕಡಬ ತಾಲೂಕು ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಮತ್ತು ಕನ್ನಡ ಮಾಧ್ಯಮ ಪ್ರೌಢಶಾಲಾ ವಾರ್ಷಿಕೋತ್ಸವ ಸಮಾರಂಭದ ಪ್ರತಿಭಾ ಪುರಸ್ಕಾರಸಾಧಕರಿಗೆ ಸನ್ಮಾನ ಬಹುಮಾನ ವಿತರಣಾ ಕಾರ್ಯಮದಲ್ಲಿ ಅತಿಥಿಯಾಗಿ ಮಾತನಾಡಿದರು. ಬದುಕಿನ ಚೌಕಟ್ಟು ನಿರ್ಮಿಸುವ ಪಕ್ವವಾದ ವಿದ್ಯಾರ್ಥಿ ಜೀವನದ ಕಾಲಘಟ್ಟದಲ್ಲಿ ಸಮಯ ಅತ್ಯಮೂಲ್ಯವಾಗಿದೆ. ಸಮಯ ಹಾಳು ಮಾಡದೆ ಸಾಧನೆಯತ್ತ ಹೆಜ್ಜೆ ಹಾಕುವ ಸಂಕಲ್ಪ ತೊಡಬೇಕು.ಸಾಧನೆ , ಯಶಸ್ಸಿಗೆ ಸದೃಡ ಮನಸ್ಸುಅನೂಕೂಲವಾಗುತ್ತದೆ.ಕನ್ನಡ ಮಾದ್ಯವೆಂಬ ಕೀಳರಿಮೆ ಬಿಟ್ಟು ಭಾಷೆಯನ್ನು ಪ್ರೀತಿಸಿ ಎಂದರು.
ಸಿಸ್ಕೋ ಸಂಸ್ಥೆಯ ಹಿರಿಯ ಅಧಿಕಾರಿ ದೇವಿಕಾ ಮಾತನಾಡಿ,ಸಾಧಿಸುವ ಛಲಮೈಗೂಡಿಸಿಕೊಂಡು ವಿದ್ಯಾರ್ಥಿ ಜೀವನವನ್ನುಆನಂದಿಸಿ ನಿರ್ದಿಷ್ಟ ಗುರಿಯನ್ನು ಸಾಧಿಸಬೆಕು. ಗುರುಹಿರಿಯರನ್ನು ಪ್ರೀತಿಸುವ ಸುಸಂಸ್ಕಂತ ಶಿಕ್ಷಣದಿಂದ ವಿದ್ಯಾರ್ಥಿಯ ಉತ್ತಮ ಭವಿಷ್ಯವನ್ನು ನಿರೀಕ್ಷಿಸಬಹುದು ಎಂದರು. ಸಾಧಕ ವಿದ್ಯಾರ್ಥಿ , ಮಣಿಪಾಲ ಜೈಡುಸ್ ಕಾಡಿಲಾ ಹೆಲ್ತ್‍ಕೇರ್ ಮುಖ್ಯಸ್ಥ ಮಹೇಶ್ ಭಟ್, ರಾಮಕುಂಜೇಶ್ವರ ವಿದ್ಯಾವರ್ದಕಸಭಾ ಉಪಾಧ್ಯಕ್ಷ ಬಲರಾಮ ಆಚಾರ್ಯ ಶುಭ ಹಾರೈಸಿದರು. ವಿದ್ಯಾವರ್ದಕ ಸಭಾದ ಕಾರ್ಯದರ್ಶಿ ರಾಧಕೃಷ್ಣ ಕೆ ಎಸ್ ಅಧ್ಯಕ್ಷತೆ ವಹಿಸಿದ್ದರು.ಕಾಲೇಜಿನ ಪ್ರಾಂಶುಪಾಲ ಎಂ.ಸತೀಶ್ ಭಟ್, ಆಡಳಿತ ಮಂಡಳಿ ಸದಸ್ಯ ಲಕ್ಷ್ಮೀ ನಾರಾಯಣ ರಾವ್ ಆತೂರು, ಶ್ರೀರಾಮಕುಂಜೇಶ್ವರ ಪದವಿ ಕಾಲೇಜು ಪ್ರಾಂಶುಪಾಲ ಡಾ. ಸಂಕೀರ್ತ್ ಹೆಬ್ಬಾರ್ ಉಪಸ್ಥಿತರಿದ್ದರು.
ಹಿರಿಯ ವಿದ್ಯಾರ್ಥಿಸಂಘದ ವತಿಯಿಂದ ಕಾಲೇಜಿನಲ್ಲಿ ನಡೆಯಲಿರುವಗುರುವಂದನೆ, ಹಿರಿಯ ವಿದ್ಯಾರ್ಥಿಗಳ ಸಮಾವೇಶದಲಕ್ಕಿಡಿಪ್ಅನಾವರಣ ನಡೆಸಲಾಯಿತು. ಸಾಂಸ್ಕ್ರತಿಕ ಮತ್ತು ಕ್ರೀಡಾಸ್ಪರ್ದಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿ ನಾಯಕ ಹರ್ಷಿತ್ ಪ್ರೌಢಶಾಲಾ ವರದಿ ಹಾಗೂ ಚೈತ್ರಾ ಪದವಿಪೂರ್ವ ಕಾಲೇಜಿನ ವರದಿ ಮಂಡಿಸಿದರು. ಶಿಕ್ಷಕ ವೆಂಕಟೇಶ್ ದಾಮ್ಲೆ ಸ್ವಾಗತಿಸಿದರು. ಶಿಕ್ಷಕ ಪ್ರವೀಣ್ ವಂದಿಸಿದರು. ನಿಶಿತಾ, ಚಂದ್ರಶೇಖರ ,ಶ್ಯಾಂಪ್ರಸಾದ್, ರಾಧಕೃಷ್ಣ , ಮಲ್ಲಿಕಾ,ಮಯೂರಿ ಎಂ ಜಿ, ಗಣರಾಜ ಕುಂಬ್ಲೆ, ಶಿವರಾಜ್ ಸಿ ವಿವಿಧ ಕಾರ್ಯಕ್ರಮ ನಿರೂಪಿಸಿದರು.