ಉಪ್ಪಿನಂಗಡಿ : ಪ್ರತಿಭಾನ್ವಿತ ವಿದ್ಯಾರ್ಥಿಗೆ ದಾನಿಗಳ ನೆರವು ಬೇಕಾಗಿದೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ,  ಡಿ. 22.  ಉಪ್ಪಿನಂಗಡಿ:  ಪ್ರತಿಭಾನ್ವಿತ ವಿದ್ಯಾರ್ಥಿ ಹೆಸರು ವಿಜೇತ್ (19) . ಪ್ರತಿಭೆಗೆ ತಕ್ಕಂತೆ ಇಂಜಿನಿಯರಿಂಗ್ ಶಿಕ್ಷಣ ಪಡೆಯಲು ಮುಂದಾದ. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ಶಿಕ್ಷಣವನ್ನು ಪಡೆಯುತ್ತಿರುವ ಈತನಿಗೆ ಕಾಡಿದ ರಕ್ತ ಸಂಬಂಧಿ ಕಾಯಿಲೆ ಇದೀಗ ಅಸ್ಥಿಮಜ್ಜೆ ಕಸಿ ಚಿಕಿತ್ಸೆಗೆ ಒಳಗಾಗುವಂತೆ ಮಾಡಿದೆ. ಶಿಕ್ಷಣಕ್ಕಾಗಿ ಮಾಡಿದ ಸಾಲದ ಚಿಂತೆಯಲ್ಲಿದ್ದ ಆತನ ಕುಟುಂಬ ಇದೀಗ ಸುಮಾರು 30 ಲಕ್ಷ ರೂ ವೆಚ್ಚದ ಹೊಸ ಚಿಕಿತ್ಸ್ಸೆಯನ್ನು ನೀಡಲು ಅಸಹಾಯಕತೆಗೆ ಒಳಗಾಗಿದ್ದು, ಸಹೃದಯರ ಸಹಕಾರದಿಂದ ತನ್ನ ಕರುಳಕುಡಿಯನ್ನು ರಕ್ಷಿಸಲು ಸಹಾಯ ಹಸ್ತ ಚಾಚಿದೆ.

ಪುತ್ತೂರು ತಾಲೂಕು 34 ನೇ ನೆಕ್ಕಿಲಾಡಿ ಗ್ರಾಮದ ನಿವಾಸಿ ಗಣೇಶ್ ಆಚಾರ್ಯ ಎಂಬವರ ಮಗ ವಿಜೇತ್ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದು, ಸುಂದರ ಬದುಕಿನ ಕನಸುಗಳನ್ನು ಹೊತ್ತು ಇಂಜಿನಿಯರಿಂಗ್ ಪದವಿ ಪೂರೈಸಲು ಅಧ್ಯಯನ ನಿರತನಾಗಿದ್ದ. ವಿಧಿಯ ಲೀಲೆ ಎಂಬಂತೆ ತನ್ನ ರಕ್ತ ಸಂಬಂಧಿ ಅನಾರೋಗ್ಯ ತನ್ನನ್ನು ಆವರಿಸುತ್ತಿದ್ದಂತೆಯೇ ಚಿಕಿತ್ಸೆಗೆ ಒಳಗಾಗುತ್ತಿದ್ದ. ಜನವರಿ ತಿಂಗಳಲ್ಲಿ ನಡೆಯುವ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಬೇಕೆಂಬ ಹಂಬಲದೊಂದಿಗೆ ಶ್ರಮಿಸುತ್ತಿದ್ದ ಈತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಕಾರಣಕ್ಕೆ ದಾಖಲಾಗಿದ್ದಾನೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈತನ ಚಿಕಿತ್ಸಾ ವೆಚ್ಚ ಕುಟುಂಬವರ್ಗದ ಧಾರಣ ಸಾಮರ್ಥ್ಯಕ್ಕೆ ಸಿಲುಕದೇ ಹೋದಾಗ ಆತನನ್ನು ಮಂಗಳೂರಿನ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಅಲ್ಲಿನ ವೈದ್ಯರು ಈತನ ಆರೋಗ್ಯ ಸ್ಥಿತಿ ಬಿಗಾಡಯಿಸಿದ್ದು, ಅಸ್ಥಿಮಜ್ಜೆ ಕಸಿ ಚಿಕಿತ್ಸೆ ಮಾಡಬೇಕಾಗಿದೆ ಎಂದೂ , ಅದನ್ನು ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಮಾಡುವಂತೆಯೂ ಸೂಚಿಸಿದ್ದು, ಮನೆ ಮಂದಿಯ ರಕ್ತವೇನಾದರೂ ಹೊಂದಿಕೆಯಾದಲ್ಲಿ ರಕ್ತ ವರ್ಗಾವಣೆ ಸಾಧ್ಯವಾದರೆ 20 ಲಕ್ಷಕ್ಕೂ ಮಿಗಿಲಾದ ಖರ್ಚು ತಗಲಬಹುದೆಂದೂ, ಒಂದು ವೇಳೆ ಅನ್ಯರಿಂದ ರಕ್ತ ಪಡೆಯಬೇಕಾದಲ್ಲಿ 30 ಲಕ್ಷಕ್ಕೂ ಮಿಗಿಲಾದ ಖರ್ಚು ತಗಲಬಹುದೆಂದು ತಿಳಿಸಿರುತ್ತಾರೆ.

Also Read  ಶರಾಬಿನ ನಶೆ : ಬ್ಲೇಡಿನಿಂದ ಕೈ ಕೋಯ್ದುಕೊಂಡು ಮಹಿಳೆ ಆತ್ಮಹತ್ಯೆ

ತನ್ನ ವಿದ್ಯಾಭ್ಯಾಸಕ್ಕಾಗಿ ಮಾಡಿರುವ ಸಾಲದ ಚಿಂತೆಯಲ್ಲಿದ್ದ ವಿಜೇತ್ ಗೆ ಇದೀಗ ತನ್ನ ಚಿಕಿತ್ಸೆಗಾಗಿ ಬರೋಬ್ಬರಿ 30 ಲಕ್ಷ ಹೊಂದಿಸುವುದು ಸಾದ್ಯವಾಗದ ಮಾತು.ವಿದ್ಯಾ ಭ್ಯಾಸ ಮುಗಿಸಿ ತನ್ನ ತಂದೆ ತನಗಾಗಿ ಮಾಡಿದ ಸಾಲವನ್ನು ತೀರಿಸಬೇಕೆಂದು ಹಂಬಲಿಸುತ್ತಿದ್ದ ಈತ, ಇದೀಗ ತನ್ನನ್ನು ಕೆಲಸ ಮಾಡುವ ರೀತಿಯಲ್ಲಿಯಾದರೂ ಗುಣಪಡಿಸಿ, ನಾನು ಕಾಲೇಜು ತೊರೆದು ಗ್ಯಾರೇಜಿಗೆ ಸೇರುವೆ. ಅಲ್ಲಿ ದುಡಿದು ವಿದ್ಯಾಭ್ಯಾಸಕ್ಕಾಗಿ ಮಾಡಿದ ಸಾಲವನ್ನು ತೀರಿಸುವೆನೆಂದು ಕುಟುಂಬ ಸದಸ್ಯರಲ್ಲಿ ಮನದಿಂಗಿತವನ್ನು ಹೊರಗೆಡವಿದ್ದಾನೆ. ಮುಂಬರುವ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳೀಸಬೇಕೆಂಬ ತುಡಿತವನ್ನು ಹೊಂದಿರುವ ಈತ ತನ್ನ ಸ್ನೇಹಿತರಿಂದ ಪುಸ್ತಕವನ್ನು ತರಿಸಿಕೊಂಡು ಆಸ್ಪತ್ರೆಯ ಹಾಸಿಗೆಯಲ್ಲೇ ಓದುತ್ತಿರುವುದು ಆತನ ಮನೋಬಲವನ್ನು ಸಾದರ ಪಡಿಸುತ್ತಿದೆ.ಕರವ ಜೋಡಿಸ ಬನ್ನಿ . . . ವಿಜೇತನಿಗೆ ನೆರವಾಗಲು ವಿಧಿಯ ಲೀಲೆ ಎಂತವರನ್ನೂ ಹೈರಾಣಗೊಳಿಸಬಹುದೆಂಬ ಸತ್ಯದ ನೆಲೆಯಲ್ಲಿ ವಿಜೇತನ ಬದುಕಿನಲ್ಲಿ ಅಪ್ಪಳಿಸಿರುವ ಈ ಆಘಾತದಲ್ಲಿ ಸಮಾಜದ ಸಹೃದಯೀ ಬಂಧುಗಳಿಂದ ಸಹಕಾರದ ಬಿಂದು ಲಭಿಸಿದರೂ ವಿಜೇತನ ಬಾಳಿಗೆ ಅದು ಶಕ್ತಿ ನೀಡಬಲ್ಲದು.

Also Read  ಸುಬ್ರಹ್ಮಣ್ಯ: ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದ ಹಾಲು ಸಾಗಾಟದ ವಾಹನ ➤ ಸಣ್ಣಪುಟ್ಟ ಗಾಯಗಳಿಂದ ಪಾರಾದ ಪ್ರಯಾಣಿಕರು

ಆತನ ಚಿಕಿತ್ಸೆಗೆ ಧನ ಸಹಾಯ ನೀಡಬಯಸುವವರು
ದೂರವಾಣಿ ಸಂಖ್ಯೆ : 9902483604 ಸಂಖ್ಯೆಯನ್ನು ಸಂಪರ್ಕಿಸಬಹುದು.ಬ್ಯಾಂಕ್ ವಿವರ :
ಖಾತೆದಾರರ ಹೆಸರು : ವಿಜೇತ್
ಖಾತೆ ಸಂಖ್ಯೆ : 145901111000361
ಐಎಫ್‍ಎಸ್‍ಸಿ ಕೋಡ್ : ವಿಐಜೆಬಿ0001459
ಬ್ಯಾಂಕ್ ಹೆಸರು : ವಿಜಯಾ ಬ್ಯಾಂಕ್
ಶಾಖೆ : ಉಪ್ಪಿನಂಗಡಿ ಶಾಖೆ
ಗೂಗಲ್ ಪೇ ಮೊಬೈಲ್ ನಂಬ್ರ : +917899585805 ( ವಿಜೇತ್ )

error: Content is protected !!
Scroll to Top