(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.20. ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳ ಇತಿಹಾಸ, ವೈಶಿಷ್ಟ್ಯ, ಕಲೆ, ಸಾಹಿತ್ಯವನ್ನು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಪರಿಚಯಿಸಲು ಹಾಗೂ ಪ್ರಚಾರಪಡಿಸುವ ಸಲುವಾಗಿ ಮಂಗಳೂರು ಪುರಭವನದಲ್ಲಿ ಕರಾವಳಿ ಉತ್ಸವದ ಅಂಗವಾಗಿ ಡಿಸೆಂಬರ್ 26 ರಂದು ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿದೆ. ಬೆಳಿಗ್ಗೆ 9.30 ಗಂಟೆಗೆ ಕಾಲೇಜು ವಿದ್ಯಾರ್ಥಿಗಳಿಗೆ ಪದವಿ ಪೂರ್ವ, ವೃತ್ತಿಪರ, ಪದವಿ ಹಾಗೂ ಸ್ನಾತಕೋತ್ತರ ಹಾಗೂ ಅಪರಾಹ್ನ 1.30 ಕ್ಕೆ ಸಾರ್ವಜನಿಕರಿಗೆ ವ್ಯಾಪಾರ ಹಾಗೂ ಪ್ರವಾಸೋದ್ಯಮದ ಕುರಿತು ಕ್ವಿಜ್ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಪ್ರತೀ ವಿಭಾಗದಲ್ಲಿ ರೂ. 30,000/- ನಗದು ಬಹುಮಾನವಿದ್ದು, ಒಟ್ಟು ರೂ. 1 ಲಕ್ಷ ವೆಚ್ಚದಲ್ಲಿ ನಗದು ಬಹುಮಾನ, ಪಾರಿತೋಷಕ, ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು.
ಆಸಕ್ತರು ತಮ್ಮ ಹೆಸರು ನೋಂದಣಿಗಾಗಿ ಆನ್‍ಲೈನ್www.q4quizzing.com/mql ನಲ್ಲಿ ನೋಂದಣಿ ಮಾಡಬಹುದು, ಕ್ವಿಜ್ ಸ್ಪರ್ಧೆಗೆ ಪಾಲ್ಗೊಳ್ಳಲು ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಈ ಕ್ವಿಜ್ ಸ್ಪರ್ಧೆಯ ಸದುಪಯೋಗ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಪ್ರವಾಸೋದ್ಯಮ ಇಲಾಖೆ, ಮಂಗಳೂರು ಮಹಾನಗರಪಾಲಿಕೆ ವಾಣಿಜ್ಯ ಸಂಕೀರ್ಣ, 1 ನೇ ಮಹಡಿ, ಲಾಲ್‍ಬಾಗ್, ಮಂಗಳೂರು ಅವರನ್ನು ದೂರವಾಣಿ ಸಂಖ್ಯೆ: 0824-2453926, ಸುಧೀರ್.ಟಿ., ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕರು, ಮೊಬೈಲ್ ನಂ: 8105472464. adtourismmangalore@gmail.com)) ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.