(ನ್ಯೂಸ್ ಕಡಬ) newskadaba.com ಮಂಗಳೂರು, ಡಿ .18. ಭಾರತೀಯ ಮೀನುಗಾರಿಕೆ ಕಾಲೇಜುಗಳ ವಿದ್ಯಾರ್ಥಿಗಳ 2 ದಿವಸ ಸಾಂಸ್ಕ್ರತಿಕ ಹಾಗೂ ಕ್ರೀಡಾಕೂಟ ಸಮಾರಂಭವನ್ನು ಡಿಸೆಂಬರ್ 14 ರ ಬೆಳಿಗ್ಗೆ 10 ಗಂಟೆಗೆ ಮೀನುಗಾರಿಕೆ ಮಹಾವಿದ್ಯಾಲಯ ಮಂಗಳೂರಿನ ಆಡಿಟೋರಿಯಂನಲ್ಲಿ ಉದ್ಘಾಟಿಸಲಾಯಿತು. ಮೀನುಗಾರಿಕೆ ಮಹಾವಿದ್ಯಾಲಯಮಂಗಳೂರು, ಭಾರತದ ಮೊದಲ ಮತ್ತು ದಕ್ಷಿಣ ಈಶಾನ್ಯ ದೇಶಗಳಲ್ಲೆ ಮೊದಲನೇ ಮೀನುಗಾರಿಕಾ ಮಹಾವಿದ್ಯಾಲಯವಾಗಿದ್ದು ಇದು ತನ್ನ 50 ವರ್ಷ ಯಶಸ್ವಿಯಾಗಿ ಮೀನುಗಾರಿಕೆಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳಲ್ಲಿ ಕಾರ್ಯನಿರ್ವಹಿಸಿದೆ. ಮೀನುಗಾರಿಕೆ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಸಂಭ್ರಮಾಚರಣೆಯನ್ನು ಉತ್ತಮವಾಗಿ ಮತ್ತು ಭವ್ಯವಾಗಿ ಆಚರಣೆ ಮಾಡಲು ಯೋಜನೆ ಮಾಡಲಾಗಿದೆ. ಆಲ್ ಇಂಡಿಯಾ ಫಿಶರೀಸ್ ಕಾಲೇಜುಗಳ ಸಾಂಸ್ಕ್ರತಿಕ ಮತ್ತು ಕ್ರೀಡಾ ಕೂಟ ಗೋಲ್ಡನ್ ಜುಬಿಲಿ ಆಚರಣೆಗಳ ಒಂದು ಭಾಗವಾಗಿ ಆಯೋಜಿಸಲಾದ ಒಂದು ಕಾರ್ಯಕ್ರಮವಾಗಿದೆ.
ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಯಾದ ಡಾ. ಪಿ. ಈಶ್ವರ್ ಅವರು ಉದ್ಘಾಟಿಸಿದರು. ಅವರ ಉದ್ಘಾಟನಾ ಭಾಷಣದಲ್ಲಿ ಅವರು ಈ ರೀತಿಯ ಸಾಂಸ್ಕ್ರತಿಕ ಹಾಗೂ ಕ್ರೀಡಾ ಸ್ಪರ್ಧೆ ವಿದ್ಯಾರ್ಥಿಗಳಿಗೆ ನಾಯಕತ್ವ ಗುಣಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ ಮತ್ತು ಅಂತಹ ಕಾರ್ಯಕ್ರಮವನ್ನು ಆಯೋಜಿಸಿರುವ ಡೀನ್ ಮತ್ತು ಮೀನುಗಾರಿಕಾ ಮಹಾವಿದ್ಯಾಯಲವನ್ನು ಅವರು ಅಭಿನಂದಿಸಿದರು.
ಫ್ರೊ. ಹೆಚ್.ಶಿವಾನಂದ ಮೂರ್ತಿ, ಡೀನ್ ಮತ್ತು ಸಂಘಟನಾ ಸಮಿತಿಯ ಅಧ್ಯಕ್ಷರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅವರು ತಮ್ಮ ಅಧ್ಯಕ್ಷೀಯ ಬಾಷಣದಲ್ಲಿ ಕಾಲೇಜಿನ ಸುವರ್ಣ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿದರು. ಈ ಎಲ್ಲಾ ಮೀನಗಾರಿಕಾ ಕಾಲೇಜುಗಳ ವಿದ್ಯಾರ್ಥಿಗಳ ನಡುವಿನ ಸಾಂಸ್ಕ್ರತಿಕ ಮತ್ತು ಕ್ರೀಡಾ ಕೂಟವನ್ನು ದೇಶದಲ್ಲೇ ಮೊದಲ ಬಾರಿಗೆ ಆಯೋಜಿಸಲಾಗಿದೆ. ಪ್ರಸ್ತುತ ದೇಶದಾದ್ಯಂತ 30 ಮೀನುಗಾರಿಕಾ ಕಾಲೇಜುಗಳು ವಿವಿಧ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ಮೀನುಗಾರಿಕಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ರಚಿಸಲಾಗಿದೆ. ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ ಮೊದಲ ಬಾರಿಗೆ ಆರಂಭವಾಗಿರುವ ಈ ಕಾರ್ಯಕ್ರಮವು ಮುಂದೆ ವಾರ್ಷಿಕ ಕಾರ್ಯಕ್ರಮಗಾಗಿ ಮುಂದುವರೆಯಲಿದೆ ಹಾಗೂ ಮುಂದಿನ ವರ್ಷ ಇದೇ ರೀತಿಯ ಕಾರ್ಯಕ್ರಮವನ್ನು ತಮಿಳುನಾಡು ಡಾ. ಜೆ. ಜಯಲಲಿತ ಮೀನುಗಾರಿಕಾ ವಿಶ್ವವಿದ್ಯಾನಿಲಯಯವು ಆಯೋಜಿಸಲು ಒಪ್ಪಿಕೊಂಡಿರುತ್ತದೆ. ಈ ಕಾರ್ಯಕ್ರಮದ ಜೊತೆ ಜೊತೆಯಾಗಿ ಮೀನುಗಾರಿಕಾ ಪ್ರದರ್ಶನ – ಮತ್ಸ್ಯಮೇಳವನ್ನು ಕೂಡ ಆಯೋಜಿಸಲಾದೆ ಎಂದು ಅವರು ಹೇಳಿದರು. ರೈತರು, ಸಾರ್ವಜನಿಕರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಬೃಹತ್ ಸಂಖ್ಯೆಯಲ್ಲಿ ಈ ಮತ್ಸ್ಯಮೇಳವನ್ನು ವೀಕ್ಷಿಸಲಿದ್ದಾರೆ ಎಂದರು.
ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಶ್ರೀನಿವಾಸ್‍ರಾವ್ ಮಾತನಾಡಿ, ಮೊದಲ ಭಾರಿಗೆ ದೇಶದ ಮೀನುಗಾರಿಕಾ ಕಾಲೇಜುಗಳ ವಿದ್ಯಾರ್ಥಿಗಳ ನಡುವಿನ ಸಾಂಸ್ಕ್ರತಿಕ ಮತ್ತು ಕ್ರೀಡಾ ಕೂಟವನ್ನು ಆಯೋಜಿಸಿರುವ ಡೀನ್ ಮತ್ತು ಮೀನುಗಾರಿಕಾ ಮಹಾವಿದ್ಯಾಯಲವನ್ನು ಪ್ರಶಂಸಿಸಿದರು.ಡಾ. ಎಸ್.ಎಂ.ಶಿವಪ್ರಕಾಶ್ ಸ್ವಾಗತಿಸಿದರು ಮತ್ತು ಡಾ. ಶಿವಕುಮಾರ್ ಎಮ್. ವಂದನಾರ್ಪಣೆ ಮಾಡಿದರು. ವಿಭಾಗೀಯ ಮುಖ್ಯಸ್ಥರಾದ ಡಾ. ಗಂಗಾಧರ ಗೌಡ ಉಪಸ್ಥಿತರಿದ್ದರು. ಡಾ. ಮೃದುಲಾ ರಾಜೇಶ್ ಹಾಗೂ ವಂದನಾ ಸುವರ್ಣ ಕಾರ್ಯಕ್ರಮ ನಿರೂಪಣೆ ಮಾಡಿದರು.