(ನ್ಯೂಸ್ ಕಡಬ) newskadaba.com ಮಂಗಳೂರು ಡಿ .18.ಸುವರ್ಣೋತ್ಸವದ ಅಂಗವಾಗಿ ಮಂಗಳೂರಿನ ಮೀನುಗಾರಿಕಾ ಕಾಲೇಜು ದ.ಕ. ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರ, ಹೈದರಾಬಾದ್‍ನ ಕೇಂದ್ರೀಯ ಮೀನುಗಾರಿಕೆ ಅಭಿವೃದ್ದಿ ಮಂಡಳಿ ಮತ್ತು ಮೀನುಗಾರಿಕಾ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಸಹಯೋಗದಿಂದ ಒಂದು ದಿನದ ‘ರೈತ-ವಿಜ್ಞಾನಿ’ ಸಂವಾದ ಕಾರ್ಯಕ್ರಮವನ್ನು ಕಾಲೇಜಿನ ಪ್ರೋ. ಎಚ್.ಪಿ.ಸಿ.ಶೆಟ್ಟಿ ಸಭಾಂಗಣದಲ್ಲಿ ನಡೆಸಲಾಯಿತು.

ಮೀನುಗಾರಿಕಾ ಕಾಲೇಜಿನಲ್ಲಿ 50ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ ನಡೆಸಲಾದ ಈ ‘ರೈತ-ವಿಜ್ಞಾನಿ’ ಸಂವಾದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೀನುಗಾರಿಕಾ ಕಾಲೇಜಿನ ಡೀನ್ ಡಾ. ಎಚ್. ಶಿವಾನಂದ ಮೂರ್ತಿ ಮಾತನಾಡಿ, ಮೀನು ಸಾಕಣೆಯ ಜತೆ ಇತರ ಕೃಷಿಯೇತರ ಬೆಳೆಗಳಾದ, ತರಕಾರಿ, ಹಂದಿ, ಕೋಳಿ, ಜಾನುವಾರು ಮತ್ತು ಭತ್ತಗಳನ್ನು ಸಮ್ಮಿಶ್ರ ಕೃಷಿಯಲ್ಲಿ ಅಳವಡಿಸಬುದಾಗಿದೆಯೆಂದು ಹೇಳಿದರು. ಪ್ರಾಣಿಗಳ ಸಾಕಣೆ ಮಾಡುವಾಗ, ಅವುಗಳಿಂದ ಹೊರಹೊಮ್ಮುವ ತ್ಯಾಜ್ಯಗಳು ನೀರಿನಲ್ಲಿ ಸೇರಿ ಅವಶ್ಯವಿರುವ ಆಹಾರಜೀವಿಜನ್ಯಗಳು (ಪ್ಲಾಂಕ್ಟಾನ್) ಉತ್ಪತ್ತಿಯಾಗಿ ಕೊಳದಲ್ಲಿ ಇರುವ ಮೀನುಗಳಿಗೆ ಮೇಲು ಆಹಾರ ಬೆಳೆಯಲು ಸಹಕಾರಿಯಾಗಲಿದೆಯೆಂದು ಹೇಳಿದರು.ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಎ.ಟಿ. ರಾಮಚಂದ್ರ ನಾಯ್ಕ ಕಾರ್ಯಕ್ರಮವನ್ನು ಸ್ವಾಗತಭಾಷಣದಲ್ಲಿ ಮಾತನಾಡಿ, ಜಿಲ್ಲೆಯ ರೈತರಿಗೆ ಕೃಷಿಯಲ್ಲಿ ತಾಂತ್ರಿಕ ವಿಧಾನಗಳ ಬಳಕೆ ಮತ್ತು ಅವುಗಳ ಅಳವಡಿಕೆಯಿಂದ ಲಾಭಗಳಿಸಬಹುದಾದ ವಿಷಯಗಳನ್ನು ಚರ್ಚಿಸಿದರು.

ಮತ್ಸ್ಯ ವಸ್ತು ಪ್ರದರ್ಶನದ ಮತ್ತು ಕಾಲೇಜಿನ ಗೋಲ್ಡನ್ ಜೂಬಿಲಿ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿರುವ ಈ ವಿಶೇಷ ಕಾರ್ಯಕ್ರಮವು ಕೃಷಿಯಲ್ಲಿ, ತೋಟಗಾರಿಕೆಯಲ್ಲಿ, ಹೈನುಗಾರಿಕೆಯಲ್ಲಿ, ಕೋಳಿಸಾಕಣೆಯಲ್ಲಿ, ಹಂದಿಸಾಕಣೆಯಲ್ಲಿ, ಮೀನುಕೃಷಿಯಲ್ಲಿ ಮತ್ತು ಭತ್ತದಕೃಷಿಯಲ್ಲಿ ಅಳವಡಿಕೆಯಲ್ಲಿರುವ ವೈಜ್ಞಾನಿಕ ಆವಿಷ್ಕಾರಗಳನ್ನು ಕೃಷಿಕರಿಗೆ ಮತ್ತು ಕೃಷಿಯಲ್ಲಿ ಆಸಕ್ತಿಯಿರುವ ಯುವಕರಿಗೆ ಉಪಯೋಗವಾಗಲಿರುವುದರಿಂದ ನಡೆಸಲಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.ಮೀನುಗಾರಿಕಾ ಸಹ ವಿಸ್ಥರಣಾ ನಿರ್ದೇಶಕರಾದ ಡಾ. ಶಿವಕುಮಾರ್ ಎಂ. ಮಾತನಾಡಿ ಕೃಷಿ ಒಂದು ಲಾಭದಾಯಕ ಕಸುಬಾಗಿಸಬೇಕಾದರೆ ಸಮಗ್ರ ಕೃಷಿ ಪದ್ದಿತಿಗಳನ್ನು ಅಳವಡಿಸಿದರೆ ಸಾದ್ಯವೆಂದು ತಿಳಿಸಿದರು. ಆದಾಯ-ವೆಚ್ಚಗಳ ಬಗ್ಗೆ ಅರಿವು ಪ್ರತಿಯೊಬ್ಬ ರೈತರಿಗೆ ಮುಖ್ಯವಾದುದ್ದು ಎಂದು ಹೇಳಿದರು. ಕೃಷಿಗೆ ಅಗತ್ಯವಾದ ಫೋಷಕಾಂಶಗಳ ಪೂರೈಕೆಯನ್ನು ಒದಗಿಸಿದರೆ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ ಉತ್ಪಾದನೆ ಮತ್ತು ಉತ್ಪಾದಕತೆಯ ಬಗ್ಗೆ ತಿಳಿದುಕೊಂಡರೆ ಆದಾಯ ಹೆಚ್ಚಿಸಲು ಸಹಕಾರಿಯೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮೂಡಿಗೆರೆಯ ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷರಾದ ಸುಭಾಷ್‍ಚಂದ್ರ ಚೌಟ, ರೈತರಾದ ರಾಜವರ್ಮ ಬೈಲಂಗಡಿ, ರಾಕಿ ಪಿಂಟೋ, ಸ್ಟೀವನ್ ಡಿಸೋಜ, ಮೋಹಿ ಕುನ್ನಿ ಸೇರಿ ಒಟ್ಟು 20 ರೈತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡರು.ಹವ್ಯಾಸಿಯಾಗಿ ಕೃಷಿಯನ್ನು ಪ್ರಾರಂಭ ಮಾಡಿಕೊಂಡಿರುವ ಬಹರೈನ್ ರಾಷ್ಟ್ರದಲ್ಲಿ ಉದ್ಯೋಗಿಯಾಗಿ ಸೇವೆಸಲ್ಲಿಸಿದ ರಾಕಿ ಪಿಂಟೋ ರವರು ಆಕ್ಟೋಪೆ ರಸ್ ಎಂಬ ಗಿಡದ ಬಗ್ಗೆ ಮಾಹಿತಿ ನೀಡಿ ಇದೊಂದು ಕಡಲ ಕೊರೆತವನ್ನು ತಡೆಗಟ್ಟಲು ಬೆಳೆಸುವ ಬೇರು ಉದ್ದಗಲವಾಗಿ ಬೆಳೆಯುವ ತಳಿಯನ್ನು ಪರಿಚಯಿಸಿದರು. ಇದನ್ನು ಆ ದೇಶದಿಂದ ದ.ಕ. ಜಿಲ್ಲೆಯ ಬಳ್ಕುಂಜೆ ಗ್ರಾಮದ ಕಿನ್ನಿಗೊಳಿಯಲ್ಲಿ ತಮ್ಮ ತೋಟದಲ್ಲಿ ಬೆಳೆಸಿರುವುದಾಗಿ ತಿಳಿಸಿದರು.

ಕೇಂದ್ರೀಯ ಮೀನುಗಾರಿಕಾ ಸಂಸ್ಥೆಗಳಾದ ಹಿನ್ನೀರು ಜಲಕೃಷಿ, ಕಡಲ ಸಂಶೋದನೆ ಮತ್ತು ಸಾಗರೋತ್ಪನ್ನ ರಫ್ತು ಪ್ರಾಧಿಕಾರಗಳ ವಿಜ್ಞಾನಿಗಳಾದ ತನ್ವೀರ್ ಹುಸೈನ್, ಡಾ. ಪುರುಶೋತ್ತಮ ಮತ್ತು ವಿಜಯ್‍ಕುಮಾರ ಯರಗಲ್ ರವರು ರೈತರ ಸವಾಲಾದ ಉಪ್ಪುನೀರಿನ ಮೀನಿನ ತಳಿಗಳಾದ ಕುರುಡೆ (ಸೀಬಾಸ್) ಮತ್ತು ಕೆಂಬೇರಿ (ಸ್ನಾಪರ್) ಗಳ ಮರಿಗಳ ಲಭ್ಯತೆಯ ಮತ್ತು ಸಾಕುವ ವಿಧಾನಗಳ ಬಗ್ಗೆ ಮಾಹಿತಿಗಳನ್ನು ತಿಳಿಸಿದರು. ಬೆಂಗಳೂರಿನ ಒಳನಾಡು ಮೀನುಗಾರಿಕಾ ಘಟಕದ ಮುಖ್ಯಸ್ಥ ಡಾ. ಬಿ.ವಿ. ಕೃಷ್ಣಮೂರ್ತಿರವರು ‘ಅಕ್ವಾಫೆನಿಕ್ಸ್’ ಬಗ್ಗೆ ತಿಳಿಸಿ ಸಂಶೋದನೆಯಿಂದ ಹೊರಬಂದತಹ ಪಲಿತಾಂಶಗಳನ್ನು ರೈತರ ಜತೆ ಹಂಚಿಕೊಂಡರು.ಮೀನುಗಾರಿಕಾ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಡಾ. ಎಸ್.ಆರ್. ಸೋಮಶೇಖರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಮತ್ಸ್ಯ ಸಂಪನ್ಮೂಲ ನಿರ್ವಹಣೆ ವಿಭಾಗದ ಮುಖ್ಯಸ್ಥ ಡಾ. ಎಸ್.ಎಂ. ಶಿವಪ್ರಕಾಶ್ ಮಾತನಾಡಿ ಸರ್ಕಾರದ ಸವಲತ್ತುಗಳನ್ನು ನಮಗ್ರವಾಗಿ ರೈತರಿಗೆ ಸಿಗುವುದಾದರೆ ರೈತರಿಗೆ ಅನುಕೂಲವಾಗುತ್ತದೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮೀನುಗಾರಿಕಾ ಕಾಲೇಜಿನ ಜಲ ಕೃಷಿ, ಜಲ ಪರಿಸರ ನಿರ್ವಹಣೆ, ಮತ್ಸ್ಯ ಸಂಪನ್ಮೂಲ ನಿರ್ವಹಣೆ, ಜಲ ಜೀವಿ ಆರೋಗ್ಯ ನಿರ್ವಹಣೆ, ಮೀನು ಸಂಸ್ಕರಣೆ ಮತ್ತು ಮೀನುಗಾರಿಕೆ ಅಭಿಯಂತರ ತಾಂತ್ರಿಕ ವಿಭಾಗಗಳು, ದ.ಕ. ಜಿಲ್ಲೆಯ ಏಕೈಕ ಕೃಷಿ ವಿಜ್ಞಾನ ಕೇಂದ್ರ, ಸಾಗರೋತ್ಪನ್ನ ರಫ್ತು ಪ್ರಾಧಿಕಾರ, ಕೇದ್ರೀಯ ಕಡಲ ಮತ್ಸ್ಯ ಸಂಶೋದನಾ ಸಂಸ್ಥೆ, ಕೇಂದ್ರೀಯ ಹಿನ್ನೀರು ಜಲಕೃಷಿ ಸಂಸ್ಥೆ ಗಳ ವಿಜ್ಞಾನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಮೀನುಗಾರಿಕಾ ವಿಭಾದ ಮುಖ್ಯಸ್ಥ ಡಾ. ಗಂಗಾಧರ ಗೌಡ ಮಾತನಾಡಿ ಮಿಶ್ರಕೃಷಿಗೆ ಉತ್ತೇಜನ ಕೊಡುವುದು ಅನಿವಾರ್ಯವೆಂದು ಹೇಳಿದರು. ಕೃ.ವಿ.ಕೇಂ.ದ ಬೇಸಾಯ ಶಾಸ್ತ್ರದ ತಜ್ಜ ಹರೀಶ ಶೈಣೈ ಮಾತನಾಡಿ ಹೊಸ ತಳಿಗಳ ಬಗ್ಗೆ ಕೃಷಿಕರು ವೈಜ್ಞಾನಿಕ ಸಲಹೆ ಪಡೆದು ಕೃಷಿಪದತಿಗಳನ್ನು ಮಾಡಿದರೆ ಆದಾಯ ಹೆಚ್ಚಿಸಬಹುದಾಗಿದೆಯೆಂದು ಹೇಳಿದರು.
