ಸವಣೂರು ; ಕುದ್ಮಾರು ಗ್ರಾಮದ ಶಾಂತಿಮೊಗರು ಶ್ರೀಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ದ ಅಂಗವಾಗಿ ಡಿ.12,13 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
ಡಿ.12 ರಂದು ಪಂಚಮಿಯಂದು ಪೂರ್ವಾಹ್ನ ಸ್ಕಂದ ಗಣೇಶ ನಗರದಿಂದ ಭಕ್ತಾದಿಗಳಿಂದ ದೇವಸ್ಥಾನಕ್ಕೆ ಹೊರೆಕಾಣಿಕೆ ಸಮರ್ಪಣೆ, ನಂತರ ದೇವರಿಗೆ ಪಂಚಾಮೃತ ಅಭಿಷೇಕ ,ಕಲಾಶಭಿಷೇಕ ,ಅಪರಾಹ್ನ ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರಿಂದ ಆಶೀರ್ವಚನ ,ಸಂಜೆ ಶಾಂತಿಮೊಗರು ಶ್ರೀಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಹಾಗೂ ಊರವರಿಂದ ಭಜನೆ ,ನಂತರ ದೇವರಿಗೆ ಮಹಾಪೂಜೆ ನಡೆಯಲಿದೆ.
ಡಿ.13 ರಂದು ಷಷ್ಟಿ ಮಹೋತ್ಸವದಲ್ಲಿ ಬೆಳಿಗ್ಗೆ ದೇವತಾ ಪ್ರಾರ್ಥನೆ,ಮಹಾಗಣಪತಿ ಹೋಮ ,ದೇವರಿಗೆ ಕಲಶಪೂಜೆ, ಕಲಾಶಭಿಷೇಕ,ಮದ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ ದೇವರಿಗೆ ಮಹಾಪೂಜೆ,ದೇವರ ಬಲಿಹೊರಟು ಭೂತಬಲಿ ಉತ್ಸವ ,ದರ್ಶನ ಬಲಿ,ಬಟ್ಟಲು ಕಾಣಿಕೆ,ಪ್ರಸಾದ ವಿತರಣೆ,ದೇವರ ಬಲಿ ,ವೈಽಕ ಮತ್ರಾಕ್ಷತೆ ನಂತರ ಕ್ಷೇತ್ರದ ದೈವಗಳಿಗೆ ನೇಮೋತ್ಸವ ನಡೆಯಲಿದೆ.