ಸುಳ್ಯ ಬಿಜೆಪಿ ಮಂಡಲ ಕಾರ್ಯಕಾರಿಣಿ ಸಭೆ

Newskadba.in ಸುಳ್ಯ : ಕೇಂದ್ರ ಸರಕಾರದ ಸಾಧನೆಗಳನ್ನು ಮನೆಮನೆಗೂ ತಲುಪಿಸುವ ಕಾರ್ಯವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕಿದೆ.ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿನ ಅಂತರ ೨ ಲಕ್ಷಕ್ಕೇ ಏರಿಸುವ ಗುರಿ ಇದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ, ಶಾಸಕ ಸಂಜೀವ ಮಠಂದೂರು ಹೇಳಿದರು.

ಅವರು ಮಂಗಳವಾರ ಸುಳ್ಯ ಅಂಬಟೆಡ್ಕ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಶ್ರೀನಿವಾಸ ಪದ್ಮಾವತಿ ಸಭಾಭವನದಲ್ಲಿ  ನಡೆದ ಬಿಜೆಪಿ ಸುಳ್ಯ ಮಂಡಲ ಕಾರ್ಯಕಾರಣಿ ಸಭೆಯಲ್ಲಿ  ಮಾತನಾಡಿದರು.

ಡಿಸೆಂಬರ್ ಅಂತ್ಯದೊಳಗೆ ೫೦ ಸಾವಿರ ಹೊಸ ಮತದಾರರ ಸೇರ್ಪಡೆ ಮಾಡುವ ಗುರಿಯನ್ನು ಹೊಂದಲಾಗಿದೆ.ಪಕ್ಷದ ಕಾರ್ಯಕರ್ತರು ಹೊಸ ಮತದಾರರನ್ನು ಸೇರ್ಪಡಿಸುವ ಆಂದೋಲನಕ್ಕೆ ಕೈ ಜೋಡಿಸಬೇಕು.ಈ ಮೂಲಕ ಹೊಸ ಮತದಾರರಲ್ಲಿಯೂ ಬಿಜೆಪಿ ಪರ ಒಲವು ಮೂಡಿಸುವ ಕೆಲಸವಾಗಬೇಕು.ಯಾವುದೇ ಪಕ್ಷ ದ ಸಮಸ್ಯೆಗಳಿದ್ದರೂ ಸರಿಪಡಿಸುವ ಕೆಲಸಮಾಡಬೇಕು ಎಂದರು.

ಆಯ್ಕೆಯಾದ ಎಲ್ಲ ಜನಪ್ರತಿನಿಽಗಳೂ ಕಾರ್ಯಕರ್ತರ ಭಾವನೆಗಳಿಗೆ ಬೆಲೆ ಕೊಡಬೇಕು.ಗ್ರಾ.ಪಂ.ನಿಂದ ಹಿಡಿದು ಎಲ್ಲಾ ಸ್ತರದ ಜನಪ್ರತಿನಿಽಗಳ ಗೆಲುವಿನಲ್ಲಿ ಕಾರ್ಯಕರ್ತರ ಶ್ರಮ ಇದೆ.ಹಾಗೂ ಹಲವು ಹಿರಿಯರ ತ್ಯಾಗ ಇದೆ.ಒಟ್ಟಿನಲ್ಲಿ ಚುನಾವಣೆಯಲ್ಲಿ ಒಗ್ಗಟ್ಟಿನ ಕೆಲಸವಾಗಬೇಕು ಎಂದರು.

ಪಕ್ಷದ ಮುಖಂಡರು ತಮ್ಮ ಭಾಗದ ವಿವಿಧ ಸಮಸ್ಯೆಗಳ ಕುರಿತು ಬಿಜೆಪಿ ಜಿಲ್ಲಾಧ್ಯಕ್ಷರ ಹಾಗೂ ಸುಳ್ಯ ಶಾಸಕ ಎಸ್.ಅಂಗಾರ ಅವರ ಮೂಲಕ ಪರಿಹಾರಕ್ಕೆ ಮನವಿ ಮಾಡಿಕೊಂಡರು.

Also Read  ಆತೂರು: ಟಯರ್‌ ಉರಿಸಿ ರಸ್ತೆ ತಡೆ ಮಾಡುವ ವಿಚಾರ ► ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ವಾಗ್ವಾದ

ವಿವಿಧ ಭಾಗದ ಪ್ರಮುಖರು ವಿವಿಧ  ಸಮಸ್ಯೆಗಳ ಕುರಿತು ಗಮನ ಸೆಳೆದರು.

ಶಾಸಕ ಎಸ್.ಅಂಗಾರ ಮಾತನಾಡಿ, ಯಾವುದೇ ಪಕ್ಷದ ಗೊಂದಲ ಇದ್ದಲ್ಲಿ ಪರಿಹರಿಸಬೇಕು  ಎಂದರು.

ವಿವಿಧ ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರು,ಕಾರ್ಯದರ್ಶಿ ತಮ್ಮ ವ್ಯಾಪ್ತಿಯ ಕಾರ್ಯಚಟುವಟಿಕೆಯ ವರದಿ ಮುಂದಿಟ್ಟರು.

ಕೇಂದ್ರ ಸಚಿವ ಸುರೇಶ್ ಪ್ರಭು ಸುಳ್ಯಕ್ಕೆ

ಕೇಂದ್ರ ಸಚಿವ ಸುರೇಶ್ ಪ್ರಭು ಅವರು ಕೆವಿಜಿ ಅವರ ಪ್ರತಿಮೆ ಅನಾವರಣಕ್ಕೆ ಸುಳ್ಯಕ್ಕೆ ಆಗಮಿಸಲಿದ್ದಾರೆ.ಆ ಕಾರ್ಯಕ್ರಮದಲ್ಲೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಸೂಚಿಸಿದರು.

ಎಪಿಎಂಸಿ ಅಧ್ಯಕ್ಷರ ಮೇಲಿನ ಹಲ್ಲೆಗೆ ಖಂಡನಾ ನಿರ್ಣಯ

ಸಭೆಯಲ್ಲಿ ಮಾಜಿ ಸೈನಿಕ ,ಪಕ್ಷದ ಹಿರಿಯ ಕಾರ್ಯಕರ್ತ,ಎಪಿಎಂಸಿ ಅಧ್ಯಕ್ಷ ದೇರಣ್ಣ ಗೌಡ ಅವರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಖಂಡನಾ ನಿರ್ಣಯ ಮಂಡಿಸಲಾಯಿತು.ವಿನಯ ಮುಳುಗಾಡು ಅವರು ಖಂಡನಾ ನಿರ್ಣಯ ಮಂಡಿಸಿದರು.

ಶ್ರದ್ದಾಂಜಲಿ

ಸಭೆಯಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಹಾಗೂ ಸಚಿವ ಅನಂತ ಕುಮಾರ್ ಅವರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು.

Also Read  ಶ್ರೀನಿವಾಸ್ ವಿಶ್ವವಿದ್ಯಾಲಯದಲ್ಲಿ 74ನೇ ಸ್ವಾತಂತ್ರ್ಯೋತ್ಸವ

 

ಸಭೆಯಲ್ಲಿ ಸುಳ್ಯ ಮಂಡಲ ವ್ಯಾಪ್ತಿಯ  ಗ್ರಾ.ಪಂ.ಅಧ್ಯಕ್ಷ,ಉಪಾಧ್ಯಕ್ಷ ,ಸಹಕಾರಿ ಸಂಘಗಳ ಪ್ರತಿನಿಽಗಳು,ತಾ.ಪಂ.ಜಿ.ಪಂ.ಸದಸ್ಯರು,ಪಕ್ಷದ ಪ್ರಮುಖ ಕಾರ್ಯಕರ್ತರು,ಗ್ರಾಮ ಸಮಿತಿ,ಪ.ವಾಯತ್ ಸಮಿತಿ ಪದಾಽಕಾರಿಗಳು ಸೇರಿದಂತೆ ವಿವಿಧ ಸ್ತರದ ಜವಾಬ್ದಾರಿಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.

ವೇದಿಕೆಯಲ್ಲಿ  ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ,ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಹೆಗ್ಡೆ ,ಜಿಲ್ಲಾ ಕಾರ್ಯದರ್ಶಿ ಪಿ.ಜಿ.ಎಸ್.ಎನ್.ಪ್ರಸಾದ್,ಜಿಲ್ಲಾ ಸಮಿತಿ ಸದಸ್ಯ ಎ.ವಿ.ತೀರ್ಥರಾಮ ,ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಸುರೇಶ್ ಕಣೆಮರಡ್ಕ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು,ಕಾರ್ಯದರ್ಶಿ ಲಕ್ಷ್ಮೀ ನಾರಾಯಣ ರಾವ್ ಆತೂರು ವಂದಿಸಿದರು.ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.

error: Content is protected !!
Scroll to Top