ಡಿ. 5ರಿಂದ 9ರ ವರೆಗೆ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ರಜತ ಸಂಭ್ರಮ

ಕಾಣಿಯೂರು : ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಡಿ.೫ರಿಂದ ೯ರ ವರೆಗೆ ಪ್ರಗತಿ ವಿದ್ಯಾಸಂಸ್ಥೆ ಹಾಗೂ ಬೆಳ್ಳಿಹಬ್ಬ ವರ್ಷಾಚರಣ ಸಮಿತಿ ವತಿಯಿಂದ ರಜತ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ಸಮಾಜದ ನಾನಾ ಕ್ಷೇತ್ರಗಳ ಸಾಧಕರ ಪಾಲ್ಗೊಳ್ಳುವಿಕೆ, ಸಂಪನ್ಮೂಲ ವ್ಯಕ್ತಿಗಳ ಉಪನ್ಯಾಸ, ಸಾಧಕರಿಗೆ ಸನ್ಮಾನ, ಖ್ಯಾತ ತಂಡಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ತಾರಾ ಮೆರುಗು, ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯಲಿದೆ.

ಗುರುವಾರ ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಕಾರ್ಯಕ್ರಮ ಕುರಿತಾಗಿ ವಿವರ ನೀಡಿದ ಶಾಲಾ ಆಡಳಿತ ಸಮಿತಿ ಅಧ್ಯಕ್ಷ ಜಗನ್ನಾಥ ರೈ ನುಳಿಯಾಲು ಗ್ರಾಮೀಣ ಭಾಗದ ವಿದ್ಯಾಸಂಸ್ಥೆಯೊಂದು ಕಳೆದ ವರ್ಷ ಎಸ್‌ಎಸ್‌ಎಸ್‌ಸಿ ಇಂಗ್ಲೀಷ್ ಮಾಧ್ಯಮದ ಸರಾಸರಿ ಫಲಿತಾಂಶದಲ್ಲಿ ತಾಲೂಕಿಗೆ ಪ್ರಥಮ, ಜಿಲ್ಲೆಗೆ ದ್ವಿತೀಯ, ರಾಜ್ಯಕ್ಕೆ ೪೪ ನೇ ಸ್ಥಾನ ಪಡೆದಿದೆ. ಸತತ ೧೬ನೇ ಬಾರಿ ೧೦೦ಶೇ. ಪಲಿತಾಂಶ ದಾಖಲಾಗಿರುವುದು ನಮಗೆಲ್ಲ ಹೆಮ್ಮೆಯ ವಿಚಾರ. ಇದೀಗ ಪ್ರಗತಿ ವಿದ್ಯಾಸಂಸ್ಥೆ ಬೆಳ್ಳಿಹಬ್ಬವನ್ನು ಸರ್ವರ ಸಹಕಾರದೊಂದಿಗೆ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ನಮ್ಮ ಸಂತೋಷವನ್ನು ಇಮ್ಮಡಿಗೊಳಿಸುತ್ತಿದೆ ಎಂದರು.

 

ಮೇಳೈಸಲಿದೆ ವಿವಿಧ, ವಿಶಿಷ್ಠ ಕಾರ್ಯಕ್ರಮ

ಶಾಶ್ವತ ಯೋಜನೆ

ಬೆಳ್ಳಿಹಬ್ಬದ ಸವಿನೆನಪಿಗಾಗಿ ಪ್ರಗತಿ ವಿದ್ಯಾಸಂಸ್ಥೆಗೆ ಹೆತ್ತವರ ಹಾಗೂ ಊರ ದಾನಿಗಳ ನೆರವಿನೊಂದಿಗೆ ಸೋಲಾರ್ ಪಾರ್ಕ್, ಕಿಂಡರ್ ಪಾರ್ಕ್, ಸ್ಮಾರ್ಟ್ ಕ್ಲಾಸ್, ಇ-ಲೈಬ್ರೆರಿ ಯೋಜನೆಗಳನ್ನು ಸುಮಾರು ೧೫ರಿಂದ ೨೦ ಲಕ್ಷ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಬೆಳ್ಳಿಹಬ್ಬ ಸಮಿತಿ ಪ್ರಧಾನ ಕಾರ್ಯದರ್ಶಿ ಸುಜಿತ್ ರೈ ಎಣ್ಮೂರು ಪಟ್ಟೆ ಹೇಳಿದರು.

ಡಿ.೫ರ ಬುಧವಾರ ಬೆಳಿಗ್ಗೆ ಗಂಟೆ ೯:೩೦ರಿಂದ ನಗರ ಮೆರವಣಿಗೆ ಹಾಗೂ ಶಾಶ್ವತ ಯೋಜನೆಗಳ ಉದ್ಘಾಟನಾ ಸಮಾರಂಭ ನಡೆಯಲಿದೆ. ಕಾಣಿಯೂರು ಗ್ರಾಪಂ ಅಧ್ಯಕ್ಷೆ ಸೀತಮ್ಮ ಖಂಡಿಗ ಕಾಣಿಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಮುಖ್ಯದ್ವಾರದ ಬಳಿಯಲ್ಲಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಬೆಳಂದೂರು ಗ್ರಾಪಂ ಅಧ್ಯಕ್ಷೆ ಉಮೇಶ್ವರಿ ಅಗಳಿ ಧ್ವಜಾರೋಹಣಗೈಯಲಿದ್ದಾರೆ.

ಒಡಿಯೂರು ದತ್ತಗುರು ಸಂಸ್ಥಾನಮ್‌ನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ದ.ಕ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಪುತ್ತೂರು ಶಾಸಕ ಸಂಜೀವ ಮಠಂದೂರು ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಸದ ನಳೀನ್‌ಕುಮಾರ್ ಕಟೀಲು ಕಿಂಡರ್ ಪಾರ್ಕ್ ಅನ್ನು, ದ.ಕ. ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಸ್ಮಾರ್ಟ್ ಕ್ಲಾಸ್ ಅನ್ನು, ಪುತ್ತೂರು ತಾಲೂಕು ಪಂಚಾಯಿತಿ ಅಧ್ಯಕ್ಷೆ ಭವಾನಿ ಚಿದಾನಂದ ಸೋಲಾರ್ ಪಾರ್ಕ್‌ನ ಉದ್ಘಾಟನೆ ನೆರವೇರಿಸಲಿದ್ದಾರೆ.

ತಾ. ಪಂ. ಉಪಾಧ್ಯಕ್ಷೆ ರಾಜೇಶ್ವರಿ ಕೆ. ಗಾಂಜಿ ಭಾವಚಿತ್ರಕ್ಕೆ ಷುಷ್ಪನಮನ ಸಲ್ಲಿಸಲಿದ್ದಾರೆ. ಬೆಳಂದೂರು ಕ್ಷೇತ್ರ ಜಿಪಂ ಸದಸ್ಯೆ ಪ್ರಮೀಳಾ ಜನಾರ್ದನ ವಸ್ತು ಸಂಗ್ರಹಾಲಯವನ್ನು ಅನಾವರಣಗೊಳಿಸಲಿದ್ದಾರೆ. ತಾಪಂ ಸದಸ್ಯೆ ಲಲಿತಾ ಈಶ್ವರ ಸ್ಟಾಲ್ ಉದ್ಘಾಟಿಸಲಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ವೈ. ಶಿವರಾಮಯ್ಯ, ಪುತ್ತೂರು ಕ್ಷೇತ್ರ ಶಿಕ್ಷಣಾಽಕಾರಿ ಸುಕನ್ಯಾ ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.

 

ಅಪರಾಹ್ನ ಗಂಟೆ ೨ರಿಂದ ವಿದುಷಿ ಪಾರ್ವತಿ ಗಣೇಶ್ ಭಟ್ ಹೊಸಮೂಲೆ ಅವರಿಂದ ಸಂಗೀತ ಕಾರ್ಯಕ್ರಮ, ಸಂಜೆ ೬ರಿಂದ ಕ್ರೀಡಾ ಕ್ಷೇತ್ರದಲ್ಲಿ ಅನನ್ಯ ಸಾಧಕರಾಗಿ ಮಿಂಚಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಕಾರ್ಯಕ್ರಮ ನಡೆಯಲಿದೆ. ಪುತ್ತೂರು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಗೌರವಾಧ್ಯಕ್ಷ ಚಂದ್ರಹಾಸ ರೈ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ರಾಕೇಶ್ ಮಲ್ಲಿ, ಉದ್ಯಮಿಗಳಾದ ಪ್ರಸನ್ನ ಶೆಟ್ಟಿ ಪುತ್ತೂರು, ಅಜಿತ್ ಶೆಟ್ಟಿ, ತಾಲೂಕು ಹಿರಿಯ ಕ್ರೀಡಾ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಮುದ್ವ ಪಾಲ್ಗೊಳ್ಳಲಿದ್ದಾರೆ.

ಬಳಿಕ ಬೂಡಿಯಾರು ರಾಧಾಕೃಷ್ಣ ರೈ ಸಾರಥ್ಯದ ಪುತ್ತೂರು ಕಲಾವಿದೆರ್ ಅಭಿನಯಿಸುವ ರಮಾನಂದ ಜೋಡುಕಲ್ಲು ರಚಿಸಿದ ತುಳು ಹಾಸ್ಯಮಯ ನಾಟಕ “ದಾದಂದ್ ಪನೊಡ್” ಪ್ರದರ್ಶನಗೊಳ್ಳಲಿದೆ.

 

ಡಿ.೬ರ ಗುರುವಾರ ಅಪರಾಹ್ನ ಗಂಟೆ ೨ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ವಿದುಷಿ ಸ್ವಸ್ತಿಕಾ ಆರ್. ಶೆಟ್ಟಿ ಕುದ್ಕಾಡಿ ನಿರ್ದೇಶನದಲ್ಲಿ ಭರತನಾಟ್ಯ ಜರುಗಲಿದೆ.

ಯೋಧ ನಮನ

ಸಂಜೆ ಗಂಟೆ ೬ರಿಂದ ಪ್ರಗತಿ ವಿದ್ಯಾಸಂಸ್ಥೆಯ ಪೋಷಕ ಮತ್ತು ಹಿರಿಯ ವಿದ್ಯಾರ್ಥಿ ವೀರ ಸೇನಾನಿಗಳಿಗೆ ಅಭಿನಂದನೆ ಕಾರ್ಯಕ್ರಮ ನಡೆಯಲಿದೆ. ನಿವೃತ್ತ ಡಿವೈಎಸ್‌ಪಿ ಜಗನ್ನಾಥ ರೈ ನುಳಿಯಾಲು ಸಭಾಧ್ಯಕ್ಷತೆ ವಹಿಸಲಿದ್ದು, ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಜಯಪ್ರಕಾಶ್ ಹೆಗ್ಡೆ, ಚಲನಚಿತ್ರ ನಟ ಶಿವಧ್ವಜ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.

ಶಿವಪ್ರಸಾದ್ ಪುಂಡಿಕಾ ಅವರು ಇದೇ ವೇಳೆ ಪ್ರತ್ಯಕ್ಷ ವರ್ಣಚಿತ್ರ ರಚನೆ ಮಾಡಲಿದ್ದಾರೆ.

ಸಂಗೀತ ಸಂಭ್ರಮ

ಸಂಜೆ ಗಂಟೆ ೭.೦೦ರಿಂದ ೮.೩೦ರವರೆಗೆ ಖ್ಯಾತ ಗಾಯಕ ಡಾ. ಶಶಿಧರ ಕೋಟೆ ಮತ್ತು ತಂಡದವರಿಂದ ಸಂಗೀತ ಜರುಗಲಿದೆ. ಬಳಿಕ ಪ್ರಗತಿ ಶಾಲಾ ವಿದ್ಯಾರ್ಥಿಗಳಿಂದ ಯಕ್ಷಗಾನ ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ.

 

ಡಿ.೭ರಂದು ಅಪರಾಹ್ನ ಗಂಟೆ ೨ರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಸಂಜೆ ಗಂಟೆ ೫ರಿಂದ ಕಲಾ ಕ್ಷೇತ್ರದ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ ಕಾರ್ಯಕ್ರಮ ಕಲಾ ಉತ್ಥಾನ ನಡೆಯಲಿದೆ. ಸುಳ್ಯ ಶಾಸಕ ಎಸ್. ಅಂಗಾರ ಅವರು ಸಭಾಧ್ಯಕ್ಷತೆ ವಹಿಸಲಿದ್ದು, ಖ್ಯಾತ ಚಲನಚಿತ್ರ ನಿದೇರ್ಶಕರಾದ ನಾಗಾಭರಣ ಟಿ.ಎಸ್., ಪ್ರಸಿದ್ಧ ಸಂಗೀತ ನಿರ್ದೇಶಕ ಗುರುಕಿರಣ್ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ. ಕನ್ನಡ ಅಧ್ಯಯನ ಕೇಂದ್ರ ಜೆಎಸ್‌ಎಸ್ ವಿಶ್ವವಿದ್ಯಾನಿಲಯ ದೆಹಲಿ ಇಲ್ಲಿನ ಮುಖ್ಯಪ್ರಾಧ್ಯಾಪಕ ಡಾ. ಪುರುಷೋತ್ತಮ ಬಿಳಿಮಲೆ, ಅಡ್ವಾನ್ಸ್‌ಡ್ ಟೆಕ್ನಿಕಲ್ ಸರ್ವಿಸಸ್‌ನ ಎಂಡಿ ಎಂ. ರವಿ ಶೆಟ್ಟಿ, ದೆಹಲಿ ಕನ್ನಡ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.

ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ.) ಇದರ ಸ್ಥಾಪಕಾಧ್ಯಕ್ಷ ಸತೀಶ ಶೆಟ್ಟಿ ಪಟ್ಲ, ಯಕ್ಷಗಾನ ಕಲಾವಿದೆ ಕು. ಬಿಂದಿಯ ಶೆಟ್ಟಿ ಸುರತ್ಕಲ್ ಅವರಿಗೆ ಅಭಿನಂದನೆ ಕಾರ್ಯಕ್ರಮ ಜರುಗಲಿದೆ.

ಯಕ್ಷ ನೃತ್ಯ ವೈಭವ

ಸಂಜೆ ಗಂಟೆ ೭ರಿಂದ ೯ರವರೆಗೆ ಯಕ್ಷಧ್ರುವ ಸತೀಶ್ ಶೆಟ್ಟಿ ಪಟ್ಲ, ಭವ್ಯಾ ಮಂಡೆಕೋಲು, ಕು| ಅಮೃತಾ ಅಡಿಗ ಭಾಗವತಿಕೆಯಲ್ಲಿ ಯಕ್ಷ ನೃತ್ಯ ವೈಭವ ನಡೆಯಲಿದೆ.

 

ಮಾತೃ ವಂದನಾ

ಡಿ. ೮ರಂದು ಸಂಜೆ ಗಂಟೆ ೫:೩೦ರಿಂದ ಮಾತೃ ವಂದನಾ ಕಾರ್ಯಕ್ರಮ ನಡೆಯಲಿದ್ದು, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಪ್ರಗತಿ ಶಾಲಾ ಸಂಚಾಲಕರ ಮಾತೃಶ್ರೀ ಲಕ್ಷ್ಮೀ ಕೆ. ರೈ ಮಾದೋಡಿ ಅಧ್ಯಕ್ಷತೆ ವಹಿಸಲಿದ್ದು, ದೃಶ್ಯ ಮಾಧ್ಯಮ ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ. ಸಂಜೆ ಗಂಟೆ ೭ರಿಂದ ವಿಧಾತ್ರಿ ಕಲಾವಿದರು ಕೈಕಂಬ ಇವರಿಂದ “ನಿಕ್ಕ್ ಗೊತ್ತುಂಡಾ” ತುಳು ಹಾಸ್ಯಮಯ ನಾಟಕ ಪ್ರದರ್ಶಗೊಳ್ಳಲಿದೆ.

 

ಡಿ. ೯ರಂದು ಬೆಳಿಗ್ಗೆ ಗಂಟೆ ೯:೩೦ರಿಂದ ಸನ್ಮಾನ ಕಾರ್ಯಕ್ರಮ ಜರುಗಲಿದ್ದು, ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ದ.ಕ. ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸುಳ್ಯ ತಾಪಂ ಸದಸ್ಯ ಅಬ್ದುಲ್ ಗಫೂರ್, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ, ಉದ್ಯಮಿ ಜಗನ್ನಾಥ ಶೆಟ್ಟಿ ತಡಗಜೆ, ವಿಜಯ ಬ್ಯಾಂಕ್ ನಿವೃತ್ತ ಸಹಾಯಕ ಮುಖ್ಯಪ್ರಬಂಧಕ ಪಿ.ಎ. ಶೆಟ್ಟಿ ತಂಟೆಪ್ಪಾಡಿ, ನ್ಯಾಯವಾದಿ ಮೋಹನ್ ಗೌಡ ಇಡ್ಯಡ್ಕ, ದ.ಕ., ಉಡುಪಿ ಜಿಲ್ಲಾ ಆಂಗ್ಲ ಮಾಧ್ಯಮ ಶಾಲಾ ಒಕ್ಕೂಟದ ಅಧ್ಯಕ್ಷ ಮಹಮ್ಮದ್ ಬ್ಯಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ರವೀಂದ್ರನಾಥ ರೈ ನೋಲ್ಮೆ, ಶ್ರೀಧರ್ ರೈ ಮಾದೋಡಿ, ಉತ್ತಮ್ ಕುಮಾರ್ ಮೇಲಾಂಟ, ಶಿವಪ್ರಸಾದ್ ಆಳ್ವ ಮೀಪಾಲು, ಶಿವಪ್ರಸಾದ್ ಶೆಟ್ಟಿ ಕಿನಾರ, ಅಬ್ದುಲ್ ರಹಿಮಾನ್ ಬೈತಡ್ಕ ಉಪಸ್ಥಿತರಿರುವರು. ಬೆಳ್ಳಿಹಬ್ಬದ ಯಶಸ್ವಿಗೆ ಸಹಕರಿಸಿದ ದಾನಿಗಳು, ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದ ೨೦೧೭-೧೮ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ, ಎಸ್.ಎಸ್.ಎಲ್.ಸಿ. ಪ್ರಥಮ ಬ್ಯಾಚ್ ವಿದ್ಯಾರ್ಥಿಗಳಿಗೆ, ಎಸ್.ಎಸ್.ಎಲ್.ಸಿ.ಯಲ್ಲಿ ವರ್ಷಾವಾರು ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ, ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕ, ಶಿಕ್ಷಕೇತರ ವೃಂದದವರಿಗೆ ಮತ್ತು ಈ ಮೊದಲು ಸೇವೆ ಸಲ್ಲಿಸಿದ ಶಿಕ್ಷಕರಿಗೆ ಅಭಿನಂದನೆ ಇದೇ ಸಂದರ್ಭದಲ್ಲಿ ನಡೆಯಲಿದೆ.

 

ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಲಾಕೇಂದ್ರ ಕಾಣಿಯೂರು, ಕಲಾಮಾಯೆ ನೃತ್ಯ ತರಬೇತಿ ಕೇಂದ್ರ ಎಣ್ಮೂರು ಇವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆ ಬಳಿಕ ನಡೆಯಲಿದೆ.

 

ರೈತ ಅಭಿನಂದನಾ

ಸಂಜೆ ಗಂಟೆ ೬ರಿಂದ ರೈತ ಅಭಿನಂದನಾ ಕಾರ್ಯಕ್ರಮ ಜರುಗಲಿದ್ದು, ಮಿಲ್ಕ್ ಮಾಸ್ಟರ್ ರಾಘವ ಗೌಡ ಪಳ್ಳತ್ತಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಅಭ್ಯಾಗತರಾಗಿ ಖ್ಯಾತ ಕೃಷಿ ವಿಜ್ಞಾನಿ ಡಾ. ವಸಂತ ಕುಮಾರ್ ತಿಮಕಾಪುರ ಭಾಗವಹಿಸಲಿದ್ದಾರೆ.

 

ಬಳಿಕ ಹಿರಿಯ ವಿದ್ಯಾರ್ಥಿಗಳಿಂದ ಯಕ್ಷಗಾನ, ಕಲಾ ಮಂದಿರ್ ಬೆಳ್ಳಾರೆ ಇವರಿಂದ ನೃತ್ಯ ವೈಭವ ಪ್ರದರ್ಶನಗೊಳ್ಳಲಿದೆ. ಕಾರ್ಯಕ್ರಮದ ಕುರಿತು ಶಾಲಾ ಸಂಚಾಲಕ ಜಯಸೂರ್ಯ ರೈ ಮಾದೋಡಿ, ಮುಖ್ಯಶಿಕ್ಷಕ ಗಿರಿಶಂಕರ್ ಸುಲಾಯ, ಆಡಳಿತಾಕಾರಿ ವಸಂತ ರೈ ಕಾರ್ಕಳ ಮಾಹಿತಿ ನೀಡಿದರು. ಆಡಳಿತ ಸಮಿತಿ ಉಪಾಧ್ಯಕ್ಷ ವಿಶ್ವನಾಥ ರೈ ಮಾದೋಡಿ, ಶಿಕ್ಷಕ ರಕ್ಷಕ ಸಂಘದ ಸ್ಥಾಪಕಾಧ್ಯಕ್ಷ ಪದ್ಮನಾಭ ರೈ ಎಂಜೀರು, ಆಡಳಿತ ಸಮಿತಿ ಕೋಶಾಕಾರಿ ಉದಯ ರೈ ಮಾದೋಡಿ, ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷ ರಮೇಶ್ ಬೆಟ್ಟ, ಬೆಳ್ಳಿಹಬ್ಬ ಸಮಿತಿ ಕೋಶಾಕಾರಿ ಜನಾರ್ದನ ಆಚಾರ್ಯ ಕಾಣಿಯೂರು, ಕನ್ನಡ ಮಾಧ್ಯಮ ಮುಖ್ಯಶಿಕ್ಷಕಿ ಸರಸ್ವತಿ, ಕಾರ್ಯಕಾರಿ ಸಮಿತಿ ಸದಸ್ಯ ಸುನಿಲ್ ಕುಮಾರ್ ಈ ಸಂದರ್ಭದಲ್ಲಿದ್ದರು.

 

 

 

 

 

 

 

error: Content is protected !!

Join the Group

Join WhatsApp Group