ಡಿ.13  : ನಳೀಲು ಸುಬ್ರಹ್ಮಣ್ಯ  ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ

Newskadaba.in ಸವಣೂರು ; ಪುತ್ತೂರು ತಾಲೂಕಿನಲ್ಲಿ ವಲ್ಮಿಕ (ಹುತ್ತ)ಕ್ಕೆ  ಪೂಜೆ ಸಲ್ಲುವ ವಿಶೇಷ ಹಾಗೂ ಕಾರಣಿಕ ಸಾನಿಧ್ಯ  ಕೊಳ್ತಿಗೆ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಮಹೋತ್ಸವ ವಿವಿಧ ಧಾರ್ಮಿಕ ಕಾರ‍್ಯಗಳೊಂದಿಗೆ ಡಿ.12,13 ರಂದು ನಡೆಯಲಿದೆ.

ಹುತ್ತಕ್ಕೆ ಪೂಜೆ ಸಲ್ಲುವ ತಾಲೂಕಿನ ಏಕೈಕ ಕ್ಷೇತ್ರ

ನಳೀಲು ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ  ಹುತ್ತಕ್ಕೆ ಆರಾಧನೆ ನಡೆಯುತ್ತದೆ.ಆದರಿಂದ ಇದು ಭಕ್ತರ ಪಾಲಿನ ಶ್ರದ್ದೆಯ ಹಾಗೂ ಭಕ್ತಿಯ ಕ್ಷೇತ್ರವಾಗಿದೆ.ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಸೇವೆ ಪಡೆಯುವ ಏಕೈಕ ಕ್ಷೇತ್ರವಾಗಿರುವ ಇಲ್ಲಿ   ಕಂಕಣ ಭಾಗ್ಯಕ್ಕಾಗಿ, ಸಂತಾನ ಭಾಗ್ಯಕ್ಕೆ,ಉದ್ಯೋಗ,ಇಷ್ಟಾರ್ಥ ಸಿದ್ದಿಗೆ,ವಿದ್ಯೆಗಾಗಿ  ಪೂಜೆ ಸಲ್ಲಿಸಿದರೆ ಫಲ ಪ್ರಾಪ್ತಿ ಆಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.

ಇಲ್ಲಿ ಹುತ್ತದ ರೂಪದಲ್ಲಿರುವ ಸುಬ್ರಹ್ಮಣ್ಯನಿಗೆ ರಂಗಪೂಜೆ,ಹೂವಿನ ಪೂಜೆ,ರಾಹು ಜಪ,ಆಶ್ಲೇಷ ಬಲಿ,ಕುಂಕುಮಾರ್ಚಣೆ,ಕಾರ್ತಿಕ ಪೂಜೆ ,ನಾಗನ ಕಟ್ಟೆಯಲ್ಲಿ ನಾಗತಂಬಿಲ ಹಾಗೂ ಇತರ ಸೇವೆಗಳಾದ ಆಶ್ಲೇಷ ಬಲಿ,ಸರ್ಪ ಸಂಸ್ಕಾರ,ನವಗ್ರಹ ಶಾಂತಿ ಹೋಮ ನಡೆಯುತ್ತದೆ.

Also Read  ಮುರುಡೇಶ್ವರ ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರ ರಕ್ಷಣೆ ➤ ಈಜಲು ಇಳಿದಿದ್ದ ವೇಳೆ ದುರ್ಘಟನೆ

ಡಿ.12ರ ರಾತ್ರಿ  ರಾತ್ರಿ ವಿಶೇಷ ಕಾರ್ತಿಕ ಪೂಜೆ, ಡಿ.13 ರಂದು ಬೆಳಿಗ್ಗೆ  ನಾಗತಂಬಿಲ, ಮಧ್ಯಾಹ್ನ ಚಂಪಾಷಷ್ಠಿ  ಮಹೋತ್ಸವ, ಪ್ರಸಾದ ವಿತರಣೆ ಸಾರ್ವಜನಿಕ ಅನ್ನಸಂತರ್ಪಣೆ ಸೇವೆಗಳು ನಡೆಯಲಿದೆ.ಭಕ್ತಾಽಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು ತಿಳಿಸಿದ್ದಾರೆ.

 

 

 

 

 

 

 

error: Content is protected !!
Scroll to Top