ಡಿ.16 : ಪಾಲ್ತಾಡಿ ಅಂಕತ್ತಡ್ಕದಲ್ಲಿ  ನವೋದಯ ಕ್ರೀಡಾಕೂಟ

Newskadaba.in ಸವಣೂರು : ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ,ನವೋದಯ ಸ್ವಸಹಾಯ ಗುಂಪುಗಳ ಒಕ್ಕೂಟ ಪಾಲ್ತಾಡಿ ಮತ್ತು ಕೊಳ್ತಿಗೆ ,ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್  ಮಂಗಳೂರು ಇದರ ವತಿಯಿಂದ ನವೋದಯ ಸ್ವಸಹಾಯ ಗುಂಪುಗಳ ಸದಸ್ಯರ ಕ್ರೀಡಾಕೂಟ ಡಿ.16 ರಂದು ಅಂಕತ್ತಡ್ಕ  ಹಿ.ಪ್ರಾ.ಶಾಲೆಯಲ್ಲಿ  ನಡೆಯಲಿದೆ.

ಕ್ರೀಡಾಕೂಟವನ್ನು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಹಣಾಽಕಾರಿ ಪೂರ್ಣಿಮಾ ಶೆಟ್ಟಿ  ಉದ್ಘಾಟಿಸುವರು.ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಸಂತ ಕುಮಾರ್ ಕೆ ಅಧ್ಯಕ್ಷತೆ ವಹಿಸುವರು.ಅತಿಥಿಗಳಾಗಿ ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು,ಎಸ್.ಬಿ.ಜಯರಾಮ ರೈ ಬಳಜ್ಜ, ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಓ ಹಂಸಾವತಿ ರೈ, ನಿರ್ದೇಶಕ ದಿವಾಕರ ಬಂಗೇರ ,ಅಂಕತ್ತಡ್ಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಿಶ್ವನಾಥ ,ನವೋದಯ ಸ್ವಸಹಾಯ ಸಂಘಗಳ ಪುತ್ತೂರು ವಲಯ ಮೇಲ್ವೀಚಾರಕ ಚಂದ್ರಶೇಖರ,ಪಾಲ್ತಾಡಿ ಒಕ್ಕೂಟದ ಅಧ್ಯಕ್ಷೆ ವಸಂತಿ ಗೌಡ,ಕೊಳ್ತಿಗೆ ಒಕ್ಕೂಟದ ಅಧ್ಯಕ್ಷ ಅಶೋಕ್ ಒರ್ಕೊಂಬು, ನವೋದಯ ಸ್ವಸಹಾಯ ಸಂಘಗಳ ಪ್ರೇರಕಿ ಕಲ್ಪವಲ್ಲಿ,ಕೊಳ್ತಿಗೆ ಸಿಎ ಬ್ಯಾಂಕಿನ ಶಾಖಾಽಕಾರಿ ಜಯರಾಮ ಕೆ. ಮೊದಲಾದವರು ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

Also Read  ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

 

error: Content is protected !!
Scroll to Top