ಡಿ.8 : ಮಂಜುನಾಥನಗರ ಶಾಲಾ ವಾರ್ಷಿಕೋತ್ಸವ

Newskadaba.in ಸವಣೂರು:  ಪಾಲ್ತಾಡಿ ಗ್ರಾಮದ  ಮಂಜುನಾಥನಗರ ಸ.ಹಿ.ಪ್ರಾ ಶಾಲೆ ಮತ್ತು ಸರಕಾರಿ ಪ್ರೌಢಶಾಲೆಯ ಜಂಟಿ ವಾರ್ಷಿಕೋತ್ಸವ ಡಿ.೮ ರಂದು ನಡೆಯಲಿದೆ.

ಬೆಳಿಗ್ಗೆ ನಡೆಯುವ ಧ್ವಜಾರೋಹಣವನ್ನು ಸವಣೂರು ಗ್ರಾ.ಪಂ.ಉಪಾಧ್ಯಕ್ಷ ಬಿ.ಕೆ.ರವಿಕುಮಾರ್ ನೆರವೇರಿಸುವರು.ಗ್ರಾ.ಪಂ.ಸದಸ್ಯೆ ಜಯಂತಿ ಮಡಿವಾಳ ಪುಸ್ತಕ ಪ್ರದರ್ಶನ ಉದ್ಘಾಟಿಸುವರು.ಗ್ರಾ.ಪಂ.ಸದಸ್ಯ ಸತೀಶ್ ಅಂಗಡಿಮೂಲೆ ವಸ್ತು ಪ್ರದರ್ಶನ ಉದ್ಘಾಟಿಸುವರು.ಕೆಯ್ಯೂರು ಕ್ಲಸ್ಟರ್ ಸಿಆರ್‌ಪಿ ಅಬ್ದುಲ್ ಬಶೀರ್ ಕೆ  ಶುಭಾಶಂಸನೆ ಮಾಡುವರು.

ಸಿದ್ದಿವಿನಾಯಕ ಸೇವಾ ಸಂಘದ ಅಧ್ಯಕ್ಷ  ಪ್ರವೀಣ್ ಬಂಬಿಲದೋಳ,ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಪದ್ಮಪ್ರಸಾದ್ ಆರಿಗ ಪಂಚೋಡಿ,ವಿವೇಕಾನಂದ ಯುವಕ ಮಂಡಲದ ಅಧ್ಯಕ್ಷ  ಅನ್ನಪೂರ್ಣ ಪ್ರಸಾದ್ ರೈ ಬಲಾಡಿ,ಪಾಲ್ತಾಡಿ ಗ್ರಾಮ ವಿಕಾಸ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್,ಆರುಂಧತಿ ಮಾತೃ ಮಂಡಳಿಯ ಅಧ್ಯಕ್ಷ ಧರ್ಮಾವತಿ ,ಶ್ರೀ ಗೌರಿ ಯುವತಿ ಮಂಡಲದ ಅಧ್ಯಕ್ಷೆ ಪ್ರೇಮಾ ಎಸ್.ಎಂ,ಅಂಗನವಾಡಿ ಕಾರ್ಯಕರ್ತೆ ಸುಮಂಗಲಾ,ಪ್ರಾಥಮಿಕ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಆಶಿತ್ ರೈ ಕುಂಜಾಡಿ,ಪ್ರೌಢ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪೂವಪ್ಪ ಬಿ ಉಪಸ್ಥಿತರಿರುವರು.

Also Read  ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾಗಿ ಕೆ.ಎಂ ಲತೀಫ್ ಪರ್ತಿಪ್ಪಾಡಿ ನೇಮಕ

ಸಭಾ ಕಾರ್ಯಕ್ರಮ

ಅಪರಾಹ್ನ ನಡೆಯುವ ಸಭಾ ಕಾರ್ಯಕ್ರಮವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸುವರು.ಅಧ್ಯಕ್ಷತೆಯನ್ನು ಸುಳ್ಯ ಶಾಸಕ ಎಸ್.ಅಂಗಾರ ವಹಿಸುವರು.ಪುತ್ತೂರು ಶಾಸಕ ಸಂಜೀವ ಮಠಂದೂರು ,ಜಿ.ಪಂ.ಸದಸ್ಯೆ ಪ್ರಮೀಳಾ ಜನಾರ್ದನ್,ತಾ.ಪಂ.ಉಪಾಧ್ಯಕ್ಷೆ ರಾಜೇಶ್ವರಿ ಕೆ, ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ,ಎಪಿಎಂಸಿ ನಿರ್ದೇಶಕ ದಿನೇಶ್ ಮೆದು,ಕ್ಷೇತ್ರ ಶಿಕ್ಷಣಾಽಕಾರಿ ಸುಕನ್ಯಾ ಡಿ.ಎನ್,ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಸುರೇಶ್ ಕುಮಾರ್,ಕ್ಷೇತ್ರ ಸಮನ್ವಯಾಽಕಾರಿ ಮೋನಪ್ಪ ಪೂಜಾರಿ, ಪಾಲ್ತಾಡಿ ಚೈತನ್ಯ ರೈತ ಶಕ್ತಿ ಗುಂಪಿನ ಅಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ,ಭಾರತೀ ಗ್ರಾಮ ವಿಕಾಸ ಪ್ರತಿಷ್ಠಾನದ ಅಧ್ಯಕ್ಷ ಸುಧಾಕರ ರೈ ಕುಂಜಾಡಿ,ಪ್ರಗತಿಪರ ಕೃಷಿಕ ಬಾಳಪ್ಪ ಪೂಜಾರಿ ಬಂಬಿಲದೋಳ,ಸಿದ್ದಿವಿನಾಯಕ ಸೇವಾ ಸಂಘದ ಗೌರವಾಧ್ಯಕ್ಷ ಈಶ್ವರ್ ಕೆ.ಎಸ್ ಪಾಲ್ಗೊಳ್ಳುವರು.

Also Read  ಮಂಗಳೂರು: ಬೊಂದೆಲ್ ಸಂತ ಲಾರೆನ್ಸರ ಚರ್ಚ್ ಗೆ ತ್ರಿವಳಿ ಸಂಭ್ರಮ

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ  ಅಂಗನವಾಡಿ ಮಕ್ಕಳಿಂದ,ಪ್ರಾಥಮಿಕ,ಪ್ರೌಢಶಾಲಾ ಮಕ್ಕಳಿಂದ ಹಿರಿಯ ವಿದ್ಯಾರ್ಥಿಗಳಿಂದ,ಯುವಕ ,ಯುವತಿ ಮಂಡಲದಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ.

error: Content is protected !!
Scroll to Top