ಸವಣೂರು  ವಲಯ ಕರ್ನಾಟಕ ಟೈಲರ್ ಅಸೋಸಿಯೇಶನ್ ಸಭೆ

ಸವಣೂರು : ಸವಣೂರು ವಲಯ ಕರ್ನಾಟಕ ಟೈಲರ್ ಅಸೋಸಿಯೇಶನ್ ವಾರ್ಷಿಕ ಸಭೆ ಸವಣೂರು ಅಶ್ವಿನಿ ಕಾಂಪ್ಲೆಕ್ಸ್‌ನಲ್ಲಿ ಬುಧವಾರ ಸಂಜೆ ನಡೆಯಿತು.

ಸಭೆಯಲ್ಲಿ ಕರ್ನಾಟಕ ಟೈಲರ್ ಅಸೋಸಿಯೇಶನ್‌ನ ನಿಕಟಪೂರ್ವ ರಾಜ್ಯ ಕಾರ್ಯದರ್ಶಿರಘುನಾಥ ಅವರು,ಟೈಲರ್‌ಗಳಿಗೆ ಸಿಗುವ ವಿವಿಧ ಸವಲತ್ತು ಹಾಗೂ ಸರಕಾರದ ಯೋಜನೆಗಳನ್ನು ಹೇಗೆ ಜೋಡಿಸಿಕೊಂಡು ಸಂಘದ ಸದಸ್ಯರ ಬೆಳವಣಿಗೆಗೆ ಪೂರಕವಾಗಿ ಮಾಡುವ ಕುರಿತು ಮಾಹಿತಿ ನೀಡಿದರು.

ಕೊಡಗು ನೆರೆಯಿಂದ ಸಂತ್ರಸ್ತರಾದ ಅಲ್ಲಿನ ಟೈಲರ್‌ಗಳಿಗೆ ಇಲ್ಲಿನ ಸಮಿತಿಯ ಮೂಲಕ ನೆರವು ನೀಡುವ ಕುರಿತು ವಿವರಿಸಿದರು.

ಟೈಲರ್ ಅಸೋಸಿಯೇಶನ್ ಕ್ಷೇತ್ರ ಸಮಿತಿ ಅಧ್ಯಕ್ಷ ದಯಾನಂದ ಹೆಗ್ಡೆ  ಅವರು ಸಮಿತಿಯ ಬೆಳವಣಿಗೆಗೆ ಪೂರಕ ಚಟುವಟಿಕೆಗೆ ಯಾವ ಕ್ರಮಗಳನ್ನು ಹಾಗೂ ಯೋಜನೆ ಮಾಡುವ ಕುರಿತು ಮಾತನಾಡಿದರು.

ವೇದಿಕೆಯಲ್ಲಿ ಅಸೋಸಿಯೇಶನ್‌ನ  ಪುತ್ತೂರು ನಗರ ವಲಯ ಅಧ್ಯಕ್ಷ ರಘುಚಂದ್ರ,ಕ್ಷೇತ್ರ ಸಮಿತಿ ಕಾರ್ಯದರ್ಶಿ ಜಯರಾಮ,ಸವಣೂರು ವಲಯ ಅಧ್ಯಕ್ಷ ವಸಂತ ಗೌಡ ಬೆದ್ರಂಪಾಡಿ ಉಪಸ್ಥಿತರಿದ್ದರು.

Also Read  ಮಾ.25ಮತ್ತು 26ರಂದು ಸವಣೂರು ಮುಗೇರು ಜಾತ್ರೋತ್ಸವ

ಸಭೆಯಲ್ಲಿ ಸಮಿತಿಯ ವಾರ್ಷಿಕ ವರದಿಯನ್ನು ಓದಲಾಯಿತು.ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.

ನೂತನ ಸಮಿತಿ

ಅಧ್ಯಕ್ಷರಾಗಿ ಬಾಲಚಂದ್ರ  ಟೈಲರ್,ಪ್ರಧಾನ ಕಾರ್ಯದರ್ಶಿಯಾಗಿ ಪ್ರಮೀಳಾ,

ಉಪಾಧ್ಯಕ್ಷರಾಗಿ ಬೇಬಿ ಕೆ,ಲೋಕೇಶ್ ಕೊಪ್ಪ,ಸಂಘಟನ ಕಾರ್ಯದರ್ಶಿಯಾಗಿ  ಸತೀಶ್ ಬಲ್ಯಾಯ,ಜತೆ ಕಾರ್ಯದರ್ಶಿಯಾಗಿ ಯಶೋಧಾ ನವೀನ್ ಮೆದು,ಕೋಶಾಽಕಾರಿಯಾಗಿ ಜಗನ್ನಾಥ ಅಮೈ  ,ಸದಸ್ಯರಾಗಿ ರಹೀಮ್,ಜಯಂತಿ,ಸರಸ್ವತಿ ಹಾಗೂ ಕ್ಷೇತ್ರ ಸಮಿತಿ ಸದಸ್ಯರಾಗಿ ವೆಂಕಪ್ಪ ಗೌಡ ಕುಮಾರಮಂಗಲ,ಬಾಬು ಗೌಡ,ವಸಂತ ಗೌಡ ಅವರನ್ನು ಆಯ್ಕೆ ಮಾಡಲಾಯಿತು.

ಗ್ರಾ.ಪಂ.ಸದಸ್ಯ ಸತೀಶ್ ಬಲ್ಯಾಯ ಸ್ವಾಗತಿಸಿ,ವಂದಿಸಿದರು.

error: Content is protected !!
Scroll to Top