ಭರತನಾಟ್ಯ ಅಂತಿಮ ವಿದ್ವತ್ ಪರೀಕ್ಷೆ : ಶಾಶ್ವತಿ ಸಚಿನ್ ಜೈನ್ ಜಿಲ್ಲೆಯಲ್ಲಿ ಪ್ರಥಮ

ಸವಣೂರು : ಕರ್ನಾಟಕ ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಭರತನಾಟ್ಯ ಅಂತಿಮ ವಿದ್ವತ್ ಪರೀಕ್ಷೆಯಲ್ಲಿ  ಪುಣ್ಚಪ್ಪಾಡಿಯ ಶಾಶ್ವತಿ ಸಚಿನ್ ಜೈನ್ ಜಿಲ್ಲೆಯಲ್ಲಿಯೇ ಹೆಚ್ಚು ಅಂಕಪಡೆದು  ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ.

ಇವರು ಮಂಗಳೂರು ಸನಾತನ ನಾಟ್ಯಾಲಯವಿದುಷಿ ಶಾರದಾ ಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಇವರಿಂದ ತರಬೇತು ಪಡೆದುಕೊಂಡಿದ್ದಾರೆ.

ಎಂಎಸ್ಸಿ,ಮೆಥಮೆಟಿಕ್ಸ್,ಸಂಗೀತದಲ್ಲೂ ಸೀನಿಯರ್ ಪದವಿ ಪಡೆದುಕೊಂಡಿರುವ ಇವರು ಕೂಚುಪುಡಿ ನೃತ್ಯ ತರಬೇತಿಯನ್ನೂ ಪಡೆದುಕೊಂಡಿರುವ ಇವರು ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಗಣಿತ ಉಪನ್ಯಾಸಕಿಯಾಗಿದ್ದಾರೆ.

Also Read  ಇಂದಿನ ಪ್ರಮುಖ ಸುದ್ದಿಗಳು

ಇವರು ಪುಣ್ಚಪ್ಪಾಡಿ ಶ್ರೀ ಗೌರಿ ಗಣೇಶ ಸೇವಾ ಸಂಘದ ಅಧ್ಯಕ್ಷ  ಸಚಿನ್ ಕುಮಾರ್ ಜೈನ್ ಅವರ ಪತ್ನಿ.

error: Content is protected !!
Scroll to Top