ಪುತ್ತೂರು ತಾಲೂಕು ಮಟ್ಟದ ಭಾಷಣ ಸ್ಪರ್ಧೆ

ಪುತ್ತೂರು : ರಾಷ್ಟ್ರೀಯತೆ ಯ ಚಿಂತನೆ ಎಲ್ಲರಲ್ಲೂ ಬರಬೇಕು.ಪಕ್ಷ ,ಸರಕಾರದ ಕುರಿತು ಚಿಂತನೆ ಮಾಡುವ ಬದಲು ದೇಶದ ಕುರಿತು ಚಿಂತನೆ ಮಾಡಬೇಕು. ಭಾರತ ದೇಶದ ಬೆಳವಣಿಗೆ ಯುವಜನರ ಕೈಯಲ್ಲಿದೆ.ಸಾಂಸ್ಕೃತಿಕ, ಆದ್ಯಾತ್ಮಿಕತೆ ಹಾಗೂ ಮಾನವ ಸಂಪನ್ಮೂಲ ದಲ್ಲಿ ಅಗ್ರ ಸ್ಥಾನಿಯಾಗಿದೆ.ದೇಶದ ಕುರಿತು ಒಳ್ಳೆಯ ಭಾವನೆ ಇರಬೇಕು. ದಶವನ್ನು ಗೌರವಿಸುವನೋಭಾವ ಬೆಳೆಸಬೇಕು ಎಂದು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಪ್ರಾಚಾರ್ಯ ಲಿಯೋ ನೊರೊನ್ಹಾ ಹೇಳಿದರು.

ಅವರು  ಪುತ್ತೂರು ಸಂತ ಫಿಲೋಮಿನಾ ಪದವಿ ಕಾಲೇಜಿನಲ್ಲಿ  ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ  ನೆಹರು ಯುವ ಕೇಂದ್ರ ಮಂಗಳೂರು ಮತ್ತು ಪುತ್ತೂರು ತಾಲೂಕು ಯುವಜನ ಒಕ್ಕೂಟ ಪುತ್ತೂರು ಇದರ ವತಿಯಿಂದ ನಡೆದ  “ದೇಶಭಕ್ತಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಯುವಜನರು”  ವಿಷಯಾಧಾರಿತ ತಾಲೂಕು ಮಟ್ಟದ ಹಿಂದಿ ,ಇಂಗ್ಲೀಷ್ ಭಾಷಣ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

Also Read  ನರಿಮೊಗರು : ಯುವತಿ ಮಂಡಲದಿಂದ  ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮ

ದೇಶದ ಆದ್ಯಾತ್ಮಿಕ ಹಾಗೂ ಸಾಂಸ್ಕೃತಿಕ  ನೆಲೆಗಟ್ಟಿನಲ್ಲಿ ಹಾಗೂ ಬೆಳವಣಿಗೆಯಲ್ಲಿ ವಿಶ್ವಗುರುವಾಗುವತ್ತ ಸಾಗುತ್ತಿದೆ.ದೇಶದ ಬೆಳವಣಿಗೆ ಗೆ ಪೂರಕವಾದ ಅವಕಾಶ ವಿದ್ದರೆ ಸದ್ಬಳಕೆ ಮಾಡಬೇಕು.ಅಬ್ದುಲ್ ಕಲಾಂ ಅವರ  ಕನಸಿನ ೨೦೨೦ ಭಾರತ ಸೂಪರ್ ಪವರ್‌ರಾಷ್ಟ್ರವಾಗುವ ನಿಟ್ಟಿನಲ್ಲಿ ಎಲ್ಲರ ಕೊಡುಗೆಯೂ ಮಹತ್ವದ್ದು ಎಂದರು.

ವೇದಿಕೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಽಕಾರಿ ಭಾರತಿ ರೈ ,ನೆಹರು ಯುವ ಕೇಂದ್ರದ ತಾಲೂಕು ಸಂಯೋಜಕಿ ಜಿಸ್ಮಿತಾ ಕೆ.ಆರ್‌ಉಪಸ್ಥಿತರಿದ್ದರು.

ಉಪನ್ಯಾಸಕ ಚಂದ್ರಶೇಖರ್ ಸ್ವಾಗತಿಸಿ,ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸುಬ್ರಹ್ಮಣ್ಯ ಕರುಂಬಾರು ವಂದಿಸಿದರು.ಪ್ರಧಾನ ಕಾರ್ಯದರ್ಶಿ ಗುರುಪ್ರಿಯಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

error: Content is protected !!
Scroll to Top