ಕಾಣಿಯೂರು : ನೆಹರು ಯುವ ಕೇಂದ್ರ ಮಂಗಳೂರು,ತಾಲೂಕು ಯುವಜನ ಒಕ್ಕೂಟ ಪುತ್ತೂರು ಹಾಗೂ ಪ್ರಮುಖಿ ಮಹಿಳಾ ಮಂಡಲ ಕೊಲ್ಯೊಟ್ಟು ನೆಲ್ಯಾಡಿ ಇದರ ವತಿಯಿಂದ ಕೊಲ್ಯೊಟ್ಟು ಅಂಗನವಾಡಿ ಕೇಂದ್ರದಲ್ಲಿ ಪಂಡಿತ್ ದೀನ್ ದಯಾಳ್ ಉಪಾದ್ಯಾಯರ ಜನ್ಮದಿನಾಚರಣೆ ಮಂಗಳವಾರ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಸಂಪಾವತಿ ಮಾತನಾಡಿ, ಕ್ರೀಯಾಶೀಲತೆ ಮತ್ತು ವೈಚಾರಿಕತೆಯಿಂದ ಬದುಕಿದ ಪಂಡಿತ್ ದೀನ್ ದಯಾಳ್ ಉಪಾದ್ಯಾಯರು ಯಾವುದೇ ಸ್ಥಾನವನ್ನು ಬಯಸದೇ ಸಾಮಾನ್ಯ ವ್ಯಕ್ತಿಯಾಗಿಯೇ ಅಸಾಮಾನ್ಯ ಸಾಧನೆ ತೋರಿದವರು.ಅವರ ಜೀವನ ಆದರ್ಶಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದರು.
ಪ್ರಮುಖಿ ಮಹಿಳಾ ಮಂಡಲದ ಅಧ್ಯಕ್ಷೆ ವಾಣಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಪುತ್ತೂರು ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸುಬ್ರಹ್ಮಣ್ಯ ಕರುಂಬಾರು,ಕೊಲ್ಯೊಟ್ಟು ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿ ಅಧ್ಯಕ್ಷೆ ಸುಮಿತ್ರಾ,ನೆಹರು ಯುವ ಕೇಂದ್ರದ ತಾಲೂಕು ಸಂಯೋಜಕಿ ಜಿಸ್ಮಿತಾ ಕೆ.ಆರ್,ಅಂಗನವಾಡಿ ಸಹಾಯಕಿ ಶೈಲಜಾ ಉಪಸ್ಥಿತರಿದ್ದರು.
ಜಯಂತಿ ಸ್ವಾಗತಿಸಿ, ಹೇಮಲತಾ ಶೆಟ್ಟಿ ವಂದಿಸಿದರು.ನಮಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.