ಬಂಬಿಲ  ಹಾಲು ಉತ್ಪಾದಕರ ಸ.ಸಂ.ವಾರ್ಷಿಕ ಸಭೆ

ಸವಣೂರು :ಪಾಲ್ತಾಡಿ ಗ್ರಾಮದ  ಬಂಬಿಲ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ ಸಂಘದ ಅಧ್ಯಕ್ಷ  ಟಿ.ಕೆ.ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘವು ವರದಿ ಸಾಲಿನಲ್ಲಿ ೧ ಕೋಟಿ ೩೯ ಲಕ್ಷದ ೧೫೭ ರೂ ವ್ಯವಹಾರ ಮಾಡಿದ್ದು,ಸಂಘವು ಹಾಲು ಉತ್ಪಾದಕರಿಂದ ೪ ಲಕ್ಷದ  ೪೪೦ ರೂಗಳ ಹಾಲು ಖರೀದಿಸಿ ಒಕ್ಕೂಟಕ್ಕೆ  ೪೩ ಲಕ್ಷದ  ೫ ಸಾವಿರದ ೯೦೭ ರೂ.ಗಳ ಹಾಲನ್ನು ಹಾಗೂ ಸ್ಥಳೀಯರಿಗೆ ೩೬ ಸಾವಿರದ ೭೮೭ ರೂ ಗೆ ಹಾಗೂ ಸ್ಯಾಂಪಲ್ ಹಾಲನ್ನು ೧೯ ಸಾವಿರದ ೪೫ ರೂ.ಗಳಿಗೆ ಮಾರಾಟ ಮಾಡಿ ಹಾಗೂ ಪಶು ಆಹಾರ,ಲವಣ ಮಿಶ್ರನ ಮಾರಾಟ,ಇತರ ಆದಾಯದಿಂದ ೨೮ ಸಾವಿರದ ೫೬೦ ರೂ. ಬಂದಿದೆ.ಸದಸ್ಯರ ಪಾಲು ಬಂಡವಾಳ ೬೮ ಸಾವಿರದ ೬೦೦ ರೂ. ಇದೆ ಎಂದರು.

ಲಾಭಾಂಶದಲ್ಲಿ ಸೇ.೧೨ ಡೆವಿಡೆಂಡ್ ಮತ್ತು ಸಂಘಕ್ಕೆ ಹಾಲು ಹಾಕಿದ ಪ್ರತೀ ಲೀಟರ್ ಗೆ ೫೫ ಪೈಸೆ ಬೋನಸ್ ನೀಡಲಾಗುವುದು  ಎಂದು ಅಧ್ಯಕ್ಷ ಟಿ.ಕೆ.ಗೌಡ ಹೇಳಿದರು.

Also Read  ಡಿ.8 : ಮಂಜುನಾಥನಗರ ಶಾಲಾ ವಾರ್ಷಿಕೋತ್ಸವ

ಹಾಲು ಉತ್ಪಾದಕರ ಸಹಕಾರ ಸಂಘ ಅಭಿವೃದ್ದಿಯಾಗಲು ಸದಸ್ಯರು ಹೆಚ್ಚಿನ ಪ್ರಮಾಣದಲ್ಲಿ ಹಾಲು ಪೂರೈಸಬೇಕು.ಹೆಚ್ಚು ಹಾಲು ಪೂರೈಸಿದರೆ ಸಂಘದ ಬೆಳವಣಿಗೆಗೆ ಪೂರಕವಾಗಲಿದೆ ಎಂದರು.

ದ.ಕ.ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಸತೀಶ್ ರಾವ್ ,ಹೈನುಗಾರ ಸದಸ್ಯರಿಗೆ ಮಾಹಿತಿ ನೀಡಿ ಸಂಘಕ್ಕೆ ಗುಣಮಟ್ಟದ ಹಾಲು ಪೂರೈಕೆ ಮಾಡುವ ನಿಟ್ಟಿನಲ್ಲಿ ಗಮನಹರಿಸಬೇಕು ಎಂದರು.

ಹಾಲು ಒಕ್ಕೂಟದ ವಿಸ್ತರಣಾಽಕಾರಿ ಹರೀಶ್ ಕುಮಾರ್ ,ಸಂಘದ ಸದಸ್ಯರ ಪ್ರಶ್ನೆಗಳಿಗೆ,ಒಕ್ಕೂಟದ ಸವಲತ್ತುಗಳ ಕುರಿತು ಮಾಹಿತಿ ನೀಡಿದರು.

ಸಂಘಕ್ಕೆ ಸ್ವಂತ ಕಟ್ಟಡ ರಚನೆ ಕುರಿತಂತೆ ಸದಸ್ಯರಾದ ಬಾಬು ಗೌಡ ಅಮೈ,ಹೊನ್ನಪ್ಪ ಗೌಡ ಪರಣೆ,ವಸಂತ ಗೌಡ ಬಂಬಿಲ ಚಾಕೋಟೆತ್ತಡಿ ಮಾತನಾಡಿದರು.ಈ ಕುರಿತು ಜಾಗದ ಲಭ್ಯತೆಯ ವಿಚಾರದಲ್ಲಿ ಪ್ರಯತ್ನಿಸುತಿರುವುದಾಗಿ ಅಧ್ಯಕ್ಷರು ತಿಳಿಸಿದರು.

ಹಾಲು ಪೂರೈಸುವ ಸದಸ್ಯರಿಗೆ ಸ್ಟೀಲ್ ಪಾತ್ರೆ

ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕಿದವರನ್ನು ಅಭಿನಂದಿಸಲಾಯಿತು.ಪ್ರಥಮ ಟಿ.ಕೆ.ಗೌಡ,ದ್ವಿತೀಯ ಜಯಪ್ರಕಾಶ್,ತೃತೀಯ ಕುಸುಮಾ ಅಂಗಡಿಮೂಲೆ ಬಹುಮಾನ ಪಡೆದುಕೊಂಡರು.ಸಂಘದ ಎಲ್ಲಾ ಹಾಲು ಪೂರೈಸುವ ಸದಸ್ಯರಿಗೆ ಸ್ಟೀಲ್ ಪಾತ್ರೆ ನೀಡಲಾಯಿತು.

Also Read  ಸವಣೂರು: ಮಂಜುನಾಥನಗರ ಹಿ.ಪ್ರಾ.ಶಾಲೆಯಲ್ಲಿ ಶಾರದಾ ಪೂಜೆ ► ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮ

ಸಭೆಯಲ್ಲಿ  ಸವಣೂರು ಗ್ರಾ.ಪಂ.ಸದಸ್ಯ ಸತೀಶ್ ಅಂಗಡಿಮೂಲೆ,ದ.ಕ.ಹಾಲು ಒಕ್ಕೂಟದ ಡಾ.ಪ್ರಕಾಶ್ ,ಬಂಬಿಲ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ  ಜಯಪ್ರಕಾಶ್ ಎನ್.ಆರ್,ನಿರ್ದೇಶಕರಾದ ಬಿ.ಕೆ.ರಮೇಶ್,ಬಿ.ಜಿ.ಭಾಸ್ಕರ ರೈ ,ಅನ್ನಪೂರ್ಣ ಪ್ರಸಾದ್ ರೈ ಬಲಾಡಿ,ವಿಠಲ ಶೆಟ್ಟಿ ಬಿ,ಕೇಶವ ಗೌಡ ಅಮೈ,ಜಯಂತ ಪೂಜಾರಿ,ಕುಸುಮಾ,ತೇಜಾಕ್ಷಿ ಬಿ.ಪೂಜಾರಿ ,ಬಾಬು ಬಿ.ಸಿ ಉಪಸ್ಥಿತರಿದ್ದರು.

ಸಂಘದ ನಿರ್ದೇಶಕರಾದ ಬಿ.ಕೆ.ರಮೇಶ್ ಸ್ವಾಗತಿಸಿ,ಅನ್ನಪೂರ್ಣ ಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು.ಕಾರ್ಯದರ್ಶಿ ಸೌಮ್ಯಾ ಬಿ.ವಂದಿಸಿದರು.ಹಾಲು ಪರೀಕ್ಷಕಿ  ಲಕ್ಷ್ಮೀ ಚೆನ್ನಪ್ಪ ಗೌಡ ಸಹಕರಿಸಿದರು.

error: Content is protected !!
Scroll to Top