ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

ಕಾಣಿಯೂರು: ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ೨೦೧೭-೧೮ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ವಠಾರದಲ್ಲಿ ನಡೆಯಿತು. ಸಂಘವು ೨೦೧೭-೧೮ನೇ ಸಾಲಿನಲ್ಲಿ ೧೩,೧೦,೮೧೫.೭೧ ಲಕ್ಷ ರೂ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ ೨೦ ಡಿವಿಡೆಂಡ್ ನೀಡಲು ಸಂಘ ನಿರ್ಧರಿಸಿದೆ.  ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಧನಂಜಯ ಕೇನಾಜೆ ಸಂಘವು ಕಾರ್ಯವ್ಯಾಪ್ತಿಯಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಿದ್ದು, ನಮ್ಮ ಆಡಳಿತ ಮಂಡಳಿಯು ಪ್ರಾಮಾಣಿಕವಾಗಿ ಸಂಘವನ್ನು ಮುನ್ನಡೆಸಿದ್ದೇವೆ ಎಂಬ ತೃಪ್ತಿ ನಮ್ಮದಾಗಿದೆ. ಸಂಘವು ಜಿಲ್ಲಾ ಮಟ್ಟದಲ್ಲಿ ಸತತ ೨ನೇ ಬಾರಿ ಪ್ರಶಸ್ತಿ ಪಡೆದುಕೊಂಡಿದ್ದು, ಸಂಘಕ್ಕೆ ಸದಸ್ಯರಿಂದ ಉತ್ತಮ ಸಹಕಾರ, ಗುಣಮಟ್ಟದ ಹಾಲು ಪೂರೈಕೆ, ಸಂಘದ ಅಭೂತಪೂರ್ವ ಸಾಧನೆಗೆ ಕಾರಣಕರ್ತರಾದ ಸಂಘದ ಸದಸ್ಯರಿಗೆ ಈ ಪ್ರಶಸ್ತಿ ಲಭಿಸುತ್ತದೆ, ಸಹಕರಿಸಿದ ಎಲ್ಲಾರಿಗೂ ಕೃತಜ್ಞತೆ ಸಲ್ಲಿಸಿದರು.

ವರದಿ ವಾಚಿಸಿದ ಸಂಘದ ಪ್ರಭಾರ ಕಾರ್ಯದರ್ಶಿ ದಮಯಂತಿಯವರು, ಸಂಘವು ಒಟ್ಟು ೧೦,೫೮,೩೫,೫೯೯.೨೦ ರೂ ವ್ಯವಾಹಾರ ನಡೆಸಿದ್ದು, ೭,೫೮,೮೫೪.೦ಲೀಟರ್ ಹಾಲು ಖರೀದಿಸಿ ೨,೨೭,೮೭,೦೬೮.೭೨ ರೂ ಗಳನ್ನು ಉತ್ಪಾದಕರಿಗೆ ಪಾವತಿಸಲಾಗಿದೆ. ೨,೪೪,೪೮,೫೭೧.೫೩ ರೂ ಗಳ ೭,೭೫,೦೧೬.೮ ಕೆ.ಜಿ ಹಾಲನ್ನು ದ.ಕ ಜಿಲ್ಲಾ ಹಾಲು ಒಕ್ಕೂಟಕ್ಕೂ ರೂ ೨,೫೬,೪೨೦.೦೦ ರೂಗಳ ೬,೪೧೦.೫೦ ಲೀಟರ್ ಹಾಲನ್ನು ಸ್ಥಳಿಯವಾಗಿಯೂ ಮಾರಾಟ ಮಾಡುವುದರೊಂದಿಗೆ ಹಾಲು ವ್ಯವಹಾರದಲ್ಲಿ ೧೯,೦೯,೫೬೫.೨೫ ರೂ ಗಳ ಹಾಲು ವ್ಯಾಪಾರ ಲಾಭ ಬಂದಿರುತ್ತದೆ.

Also Read  ಕಡಬ: ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಖುಲಾಸೆ

 

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಂಘದ ಸದಸ್ಯರ ಮಕ್ಕಳಿಗೆ ನೀಡಲ್ಪಡುವ ಪ್ರತಿಭಾ ಪುರಸ್ಕಾರವನ್ನು ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಥಮ ಸ್ಥಾನ ಪಡೆದ ಸೌರವ್ ಕೊಪ್ಪ ಹಾಗೂ ದ್ವಿತೀಯ ಸ್ಥಾನ ಪಡೆದ ರಶ್ಮಿತಾ ಸಾರಕರೆ ಮತ್ತು ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ಮನೋಜ್ ಕೀಲೆ ಹಾಗೂ ರಮಶ್ರೀ ಎಂ.ಸಿ ಇವರಿಗೆ ವಿತರಿಸಲಾಯಿತು. ೨೦೧೭-೧೮ನೇ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಕೆ ಮಾಡಿದ ಸದಸ್ಯರಾದ ರಾಮಚಂದ್ರ ಇಡ್ಯಡ್ಕ ಹಾಗೂ ಜಾನಕಿ ಕೀಲೆ ಇವರಿಗೆ ಬಹುಮಾನ ವಿತರಿಸಲಾಯಿತು.

ದ.ಕ ಹಾಲು ಒಕ್ಕೂಟದ ನಿರ್ದೇಶಕರಾದ ನಾರಾಯಣ ಪ್ರಕಾಶ್, ವೀಣಾ ರೈ, ಕಾಣಿಯೂರು ಗ್ರಾ.ಪಂ ಅಧ್ಯಕ್ಷೆ ಸೀತಮ್ಮ ಖಂಡಿಗ, ದ.ಕ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕರಾದ ಡಾ.ರಾಮಕೃಷ್ಣ ಭಟ್, ಡಾ| ಸತೀಶ್ ರಾವ್, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಧರ್ಮೇಂದ್ರ ಗೌಡ ಕಟ್ಟತ್ತಾರು, ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರುಗಳಾದ ಹರಿಯಪ್ಪ ಗೌಡ ಖಂಡಿಗ, ಸುಂದರ ಗೌಡ ಕೀಲೆ, ಸದಾಶಿವ ಗೌಡ ಮೀಯೋಳ್ಪೆ, ಮುಂಡ ಮುಗೇರ, ಬಾಲಕಿ ಅಬಿಕಾರ, ರಾಜೀವಿ ಬೊಮ್ಮಳಿಕೆ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಗೌಡ ಇಡ್ಯಡ್ಕ ವಂದಿಸಿದರು.

error: Content is protected !!
Scroll to Top