ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆ  ಕು.ಕುಶಿತಾ.ಕೆ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ

ನರಿಮೊಗರು: ಕರ್ನಾಟಕ ಪೌಢಶಿಕ್ಷಣ ಪರೀಕ್ಷಾ ಮಂಡಳಿ ಬೆಂಗಳೂರು ಇವರು ಕಳೆದ ಮೇ ತಿಂಗಳಿನಲ್ಲಿ ನಡೆಸಿದ ಭರತನಾಟ್ಯ “ಜೂನಿಯರ್ ಗ್ರೇಡ್ ಪರೀಕೆ”ಯಲ್ಲಿ ಶ್ರೀ ಶಾರದಾ ಕಲಾ ಕೇಂದ್ರ ಭಕ್ತಕೋಡಿಯ ನೃತ್ಯ ಗುರು ವಿದ್ವಾನ್ ಗೋಪಾಲಕೃಷ  ವೀರಮಂಗಲ ಇವರ ಶಿಷ್ಯೆ ಕು.ಕುಶಿತಾ.ಕೆ ಶೇ.೯೦ ಅಂಕಗಳೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಗೊಂಡಿರುತ್ತಾರೆ.

ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ಇಲ್ಲಿ ೮ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಗುರುಕುಲ ಸಂಗೀತ ಕಲಾಕೇಂದ್ರ ಪುರುಷರಕಟ್ಟೆಯಲ್ಲಿ ಸುಗಮ ಸಂಗೀತ ಅಭ್ಯಾಸ ಮಾಡುತ್ತಿರುತ್ತಾರೆ. ಹಾಗೆಯೇ ಜಿಲ್ಲಾ ಪ್ರಶಸ್ತಿ ಪುರಸ್ಕೃತ  ನರಿಮೊಗರು ಪ್ರಖ್ಯಾತಿ ಯುವತಿ ಮಂಡಲದ ಸಕ್ರೀಯ ಸದಸ್ಯೆ.

Also Read  ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಭಕ್ತರ ದಂಡು

ಈಕೆ ನರಿಮೊಗರು ಗ್ರಾಮದ ಮಾಡತ್ತಾರು ಕೃಷ್ಣಪ್ಪ ಗೌಡ ಮತ್ತು ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಯಶೋದಾ ಕೆ ಗೌಡ ಇವರ ಸುಪುತ್ರಿ.

error: Content is protected !!
Scroll to Top