ಓವರ್‌ಟೇಕ್ ಭರಾಟೆ: ಕೆಎಸ್‌ಆರ್‌ಟಿಸಿ ಬಸ್‌ – ಬೊಲೇರೋ ಢಿಕ್ಕಿ ► ಶಾಲಾ ವಿದ್ಯಾರ್ಥಿಗೆ ಗಾಯ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ.19. ಓವರ್ ಟೇಕ್ ಮಾಡುವ ಭರದಲ್ಲಿ ಮಹೀಂದ್ರ ಬೊಲೇರೋ ವಾಹನವೊಂದು ಎದುರಿನಿಂದ ಬಂದ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿಯಾದ ಘಟನೆ ಸೆ.19ರಂದು ಬೆಳಿಗ್ಗೆ ಮಾಣಿ-ಮೈಸೂರು ಹೆದ್ದಾರಿಯ ಕಾವು ಎಂಬಲ್ಲಿ ನಡೆದಿದೆ.

ಸುಳ್ಯದಿಂದ ಪುತ್ತೂರು ಕಡೆಗೆ ಬರುತ್ತಿದ್ದ ಮಹೀಂದ್ರ ಬೊಲೇರೋ(ಕೆಎ19ಡಿ2737) ವಾಹನ ಕಾವು ಬುಶ್ರಾ ಶಾಲೆಯ ಸಮೀಪ ಕಾರೊಂದನ್ನು ಹಿಂದಿಕ್ಕುವ ಭರದಲ್ಲಿ ಎದುರಿನಿಂದ ಬಂದ ಕೆಎಸ್‌ಆರ್‌ಟಿಸಿ ಬಸ್(ಕೆಎ21ಎಫ್0132)ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬೊಲೇರೋ ನಜ್ಜುಗುಜ್ಜಾಗಿ ಬೊಲೇರೋದಲ್ಲಿದ್ದ ಬುಶ್ರಾ ಶಾಲಾ ವಿದ್ಯಾರ್ಥಿ ರಾಝಿಕ್(13.ವ) ಎಂಬವರಿಗೆ ಗಾಯವಾಗಿದೆ. ಚಾಲಕ ಹ್ಯಾರಿಸ್ ರವರು ರಾಝಿಕ್ ನನ್ನು ಬುಶ್ರಾ ಶಾಲೆಗೆ ಬಿಡಲು ಹೋಗುವ ಸಂದರ್ಭದಲ್ಲಿ ಘಟನೆ ನಡೆದಿದೆ.

Also Read  ಆಟವಾಡುತ್ತಿದ್ದ ವೇಳೆ ದ್ವಿಚಕ್ರ ವಾಹನ ಢಿಕ್ಕಿ ➤ ಮಗು ಮೃತ್ಯು..!

error: Content is protected !!
Scroll to Top