ಸವಣೂರು : ಶಾರದೋತ್ಸವ ಆಮಂತ್ರಣ ಬಿಡುಗಡೆ

ಸವಣೂರು :ಇಲ್ಲಿನ ಶಾರದಾಂಬಾ ಸೇವಾ ಸಂಘದ ವತಿಯಿಂದ ಅ.18ರಂದು ವಿನಾಯಕ ಸಭಾಭವನದಲ್ಲಿ ನಡೆಯುವ ೧೪ನೇ  ವರ್ಷದ ಸಾರ್ವಜನಿಕ ಶ್ರೀಶಾರದೋತ್ಸವದ ಆಮಂತ್ರಣ ಬಿಡುಗಡೆ  ಸವಣೂರು ಪುದುಬೆಟ್ಟು ಚಂದ್ರನಾಥ ಬಸದಿಯಲ್ಲಿ ಸೆ.19ರಂದು ನಡೆಯಿತು.

ಬಸದಿಯ ಅರ್ಚಕ ಶ್ರೇಯಾಂಸ ಕುಮಾರ್ ಇಂದ್ರ ಧಾರ್ಮಿಕ ವಿಽವಿಧಾನ ನೆರವೇರಿಸಿದರು.

ಆಮಂತ್ರಣ ಬಿಡುಗಡೆ ಮಾಡಿದ ಶಾರದಾಂಬಾ ಸೇವಾ ಸಂಘದ ಗೌರವಾಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಮಾತನಾಡಿ, ಕಾರ್ಯಕ್ರಮದಲ್ಲಿ ಗಣಹೋಮ,ದೇವಿಯ ಪ್ರತಿಷ್ಟೆಯ ಬಳಿಕ ಭಜನ ಕಾರ್ಯಕ್ರಮ ಧಾರ್ಮಿಕ ಸಭೆ ನಡೆಯಲಿದೆ.ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಸ್ಕಿರಿ ಕುಡ್ಲ ತಂಡದ ತೆಲಿಕೆ ಬಂಜಿ ನಿಲಿಕೆ ಹಾಸ್ಯ ಕಾರ್ಯಕ್ರಮ ನಡೆಯಲಿದೆ.ಎಲ್ಲರ ಸಹಕಾರದಲ್ಲಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಹೇಳಿದರು.

Also Read  ಸೆಪ್ಟೆಂಬರ್ 24ರಂದು ದಕ್ಷಿಣ ಕನ್ನಡ ಕೇಂದ್ರ ಸಹಕಾರ ಸಗಟು ಮಾರಾಟ ಸಂಘದ ಮಹಾಸಭೆ

ಈ ಸಂದರ್ಭ ಶಾರದಾಂಬಾ ಸೇವಾ ಸಂಘದ  ಗೌರವ ಸಲಹೆಗಾರ ಎನ್.ಸುಂದರ ರೈ ಸವಣೂರು, ಸ್ಥಾಪಕಾಧ್ಯಕ್ಷ ಮೋಹನ್ ರೈ ಕೆರೆಕ್ಕೋಡಿ,ಅಧ್ಯಕ್ಷ ಸಂಪತ್ ಕುಮಾರ್ ಇಂದ್ರ,ಉಪಾಧ್ಯಕ್ಷ  ಬಾಲಚಂದ್ರ ರೈ ಕೆರೆಕ್ಕೋಡಿ,ಪ್ರಧಾನ ಕಾರ್ಯದರ್ಶಿ ಜತ್ತಪ್ಪ ಗೌಡ ಆರೆಲ್ತಡಿ,ಜತೆ ಕಾರ್ಯದರ್ಶಿ ದಯಾನಂದ ಸೊರಕೆ,ಕೋಶಾಽಕಾರಿ ವಸಂತ ರೈ ಸೊರಕೆ,ಕಾರ್ಯಕಾರಿ ಸಮಿತಿ ಸದಸ್ಯರಾದ ರಾಮಕೃಷ್ಣ ಪ್ರಭು,ಸತೀಶ್ ಬಲ್ಯಾಯ,ನಿತ್ಯಾನಂದ ನಾಯ್ಕ, ಸವಣೂರು ಮೆಸ್ಕಾಂ ಜೆಇ ನಾಗರಾಜ್ ಕೆ,ಉಮೇಶ್ ಕೆರೆನಾರು,ಮಹೇಶ್ ಕೆ.ಸವಣೂರು,ರವಿಕುಮಾರ್ ಎಚ್ ಸಿಂಧೂರ ಉಪಸ್ಥಿತರಿದ್ದರು.

error: Content is protected !!
Scroll to Top