ಕಾಣಿಯೂರು :ಇಲ್ಲಿನ ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ವತಿಯಿಂದ 31ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ಸೆ.13ಮತ್ತು ಸೆ.14 ರಂದು ನಡೆಯಿತು.
ಸೆ.13ರಂದು ಬೆಳಿಗ್ಗೆ ಮಹಾಗಣಪತಿ ಪ್ರತಿಷ್ಠೆ ನಡೆದು ನಂತರ ಸಾರ್ವಜನಿಕ ಗಣಹೋಮ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನದ ನಂತರ ಚುಕ್ಕಿ ರಂಗೋಲಿ ಸ್ಪರ್ಧೆ, ಗಣಪತಿ ದೇವರ ಚಿತ್ರ ಬಿಡಿಸುವ ಸ್ಪರ್ಧೆ, ಭಕ್ತಿ ಗೀತೆ ಸ್ಪರ್ಧೆ, ಚೀಟಿ ಎತ್ತಿ ಅಭಿನಯ ಮತ್ತು ಆಶುಬಾಷಣ ಸ್ಪರ್ಧೆ ನಡೆಯಲಿದೆ. ಸಂಜೆ ಭಜನಾ ಕಾರ್ಯಕ್ರಮ,ಮಹಾಪೂಜೆ ನಡೆದು ಅನ್ನಸಂತರ್ಪಣೆ ನಡೆಯಿತು.
ರಾತ್ರಿ ರ್ಮಿಕ ಸಭೆ ನಡೆಯಿತು.ನಂತರ ರಾತ್ರಿ ೧೨ರ ತನಕ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಸೆ.14ರಂದು ಬೆಳಿಗ್ಗೆ ಮಹಾಪೂಜೆ, ಗಣಹೋಮ ನಡೆದು ನಂತರ ವಿಷ್ಣು ಪ್ರಿಯ ಭಜನಾ ಮಂಡಳಿ ಕಾಣಿಯೂರು ಇವರಿಂದ ಭಜನಾ ಕಾರ್ಯಕ್ರಮ ,. ನಂತರ ಮಹಾಪೂಜೆ, ಅನ್ನ ಸಂತರ್ಪಣೆ ಸಂಜೆ ಮಹಾಪೂಜೆ ನಡೆದು ವಿಗ್ರಹ ವಿಸರ್ಜನಾ ಮೆರವಣಿಗೆ ಭಜನಾ ಮಂದಿರದಿಂದ ಹೊರಟು ಕೂಡುರಸ್ತೆಗಾಗಿ ಕಾಣಿಯೂರಿನ ಪ್ರಮುಖ ರಸ್ತೆಯಲ್ಲಿ ಸಾಗಿ ಕಜೆ ಬಾಗಿಲು ಎಂಬಲ್ಲಿ ಜಲಸ್ತಂಭನ ಮಾಡಲಾಯಿತು.