ಶಾಂತಿಮೊಗರು :  16ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಬೆಳಂದೂರು : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕುದ್ಮಾರು ಇದರ ವತಿಯಿಂದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ವಠಾರದಲ್ಲಿ 16ನೇ ವರ್ಷದ ಶ್ರೀ ಗಣೇಶೋತ್ಸವವು ವಿಜ್ರಂಭಣೆಯಿಂದ ನಡೆಯಿತು.

ಪುರೋಹಿತರಾದ ನರಸಿಂಹ ಪ್ರಸಾದ್ ಪಾಂಗಣ್ಣಾಯರು ವೈದಿಕ ಕಾರ್ಯ ನೆರವೇರಿಸಿದರು. ಪೂರ್ವಾಹ್ನ ಗಂಟೆ ೮ಕ್ಕೆ ಪಂಚಗವ್ಯ ಪುಣ್ಯಾಹ, ಶ್ರೀ ಗಣೇಶ ವಿಗ್ರಹದ ಪ್ರತಿಷ್ಠಾಪನೆ, ಗಣಹೋಮ, ಮಂಗಳಾರತಿ ನಡೆದು, ಬಳಿಕ ಶ್ರೀ ಶಾರದಾ ಭಜನಾ ಮಂಡಳಿ ಕೆಳಗಿನಕೇರಿ ಕೊಪ್ಪ ಹಾಗೂ ಶ್ರೀ ಸುಬ್ರಹ್ಮಣೇಶ್ವರ ಭಜನಾ ಮಂಡಳಿ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.

ವೈಭವದ ಶೋಭಾಯಾತ್ರೆ

ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶರ ದೇವಸ್ಥಾನದಿಂದ ಮೆರವಣಿಗೆ ಕೆಲಂಬೀರಿ ಸಾಗಿ ಬಳಿಕ ಅಲ್ಲಿಂದ ಚಾಪಳ್ಳ ತನಕ ಸಾಗಿತು. ಅಲ್ಲಿಂದ ಶಾಂತಿಮೊಗರು ಕುಮಾರಧಾರಾ ನದಿಯಲ್ಲಿ ವಿಗ್ರಹವನ್ನು ವಿಸರ್ಜಿಸಲಾಯಿತು. ಮೆರವಣಿಗೆಯಲ್ಲಿ ಸಿಡಿಮದ್ದು ಪ್ರದರ್ಶನ ಆಕರ್ಷಣೀಯವಾಗಿತ್ತು. ತಳಿರು ತೋರಣಗಳಿಂದ ಶೃಂಗರಿಸಲ್ಪಟ್ಟ ರಸ್ತೆಯುದ್ದಕ್ಕೂ ಸಾವಿರಾರು ಭಕ್ತರು ಸಾಗಿ ಬಂದರು.

Also Read  ಮಂಗಳೂರು: ಗೋಹತ್ಯೆ ಆರೋಪದ ಹಿನ್ನೆಲೆ ➤ ಆರೋಪಿಯ ಆಸ್ತಿ ಜಪ್ತಿಗೆ ನೋಟಿಸ್ ಜಾರಿ

 

 

 

 

 

error: Content is protected !!
Scroll to Top