ಸವಣೂರು,: ಸವಣೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಸವಣೂರು ವಿನಾಯಕ ಸಭಾಭವನದಲ್ಲಿ 36ನೇ ವರ್ಷದ ಶ್ರೀ ಗಣೇಶೋತ್ಸವವು ಸೆ.13 ಆರಂಭಗೊಂಡಿದ್ದು, ಸೆ.15ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಸೆ.13ರಂದು ಬೆಳಿಗ್ಗೆ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಧ್ವಜಾರೋಹಣ ಮಾಡಿದರು.ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉದ್ಯಮಿ ಎನ್.ಸುಂದರ ರೈ ಚಾಲನೆ ನೀಡಿದರು.ಈ ಸಂದರ್ಭ ಸಮಿತಿ ಅಧ್ಯಕ್ಷ ಶಿವರಾಮ ಗೌಡ ಮೆದು,ಕಾರ್ಯದರ್ಶಿ ಸುಧಾಕರ ರೈ ದೇವಸ್ಯ,ಉಪಾಧ್ಯಕ್ಷ ಪ್ರಭಾಕರ ಶೆಟ್ಟಿ ನಡುಬಲು,ರಾಘವ ಗೌಡ,ಕೋಶಾಽಕಾರಿ ರಾಮಕೃಷ್ಣ ಪ್ರಭು,ಗ್ರಾ.ಪಂ.ಸದಸ್ಯ ಸತೀಶ್ ಬಲ್ಯಾಯ,ಶ್ರವಣ ರಂಗ ಪ್ರತಿಷ್ಠಾನದ ಸಂಚಾಲಕ ತಾರಾನಾಥ ಸವಣೂರು,ವಿದುಷಿ ಪಾರ್ವತಿ ಪದ್ಯಾಣ ಹೊಸಮೂಲೆ ಹಾಗೂ ಸಮಿತಿ ಪದಾಽಕಾರಿಗಳು ಉಪಸ್ಥಿತರಿದ್ದರು.
ಸೆ.13ರಂದು ಬೆಳಿಗ್ಗೆ ಅನಂತರಾಮ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಗಣೇಶನ ಬಿಂಬ ಪ್ರತಿಷ್ಟಾಪನೆ, ಧ್ವಜಾರೋಹಣ, ೧೨ತೆಂಗಿನ ಕಾಯಿ ಗಣಪತಿ ಹೋಮ,ಸ,ಹಿ.ಪ್ರಾ.ಶಾಲೆ ಸವಣೂರು,ಆರೆಲ್ತಡಿ ಕಿ.ಪ್ರಾ.ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸವಣೂರು ವಿಷ್ಣುಮೂರ್ತಿ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ, ಶ್ರವಣ ರಂಗ ಪ್ರತಿಷ್ಠಾನ ಸವಣೂರು ಹಾಗೂ ಪಾರ್ವತಿ ಪದ್ಯಾಣ ಗಣೇಶ್ ಹೊಸಮೂಲೆ ಶಿಷ್ಯರಿಂದ ಭಕ್ತಿಗೀತೆ,ಭಕ್ತಿ ರಸಮಂಜರಿ ಕಾರ್ಯಕ್ರಮ, ವಿದ್ಯಾರ್ಥಿಗಳಿಗೆ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಸ್ಥಳೀಯ ಅಂಗನವಾಡಿ,ಪ್ರಾ.ಶಾಲೆ,ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಹಂತದ ಸ್ಪರ್ಧೆ ನಡೆಯಿತು.
ಸೆ.14ರಂದು ಬೆಳಿಗ್ಗೆ ಉಷೆಪೂಜೆ, ನಂತರ ಅರ್ಪಿತಾ ಯುವತಿ ಮಂಡಲ ಕುಮಾರಮಂಗಲ ಇವರಿಂದ ಭಜನಾ ಕಾರ್ಯಕ್ರಮ ,ಪುಣ್ಚಪ್ಪಾಡಿ ಶಾಲಾ ಮಕ್ಕಳಿಂದ ಭಜನೆ ಹಾಗೂ ಸಾಂಸ್ಕೃತಿP ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. .ಸಂಜೆ ಮುಗೇರು ಮಹಾವಿಷ್ಣು ಮೂರ್ತಿ ಭಜನಾ ಮಂಡಳಿ,ದೇವಸ್ಯ ಹರಿಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಂತರ ದೀಪಾರಾಧನೆ,ಸವಣೂರು ಪ.ಪೂ.ಕಾಲೇಜು ಹಾಗೂ ಮಂಜುನಾಥನಗರ ಹಿ.ಪ್ರಾ.ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ರಾತ್ರಿ ಮಹಾಪೂಜೆ ,ಅನ್ನಸಂತರ್ಪಣೆ ನಡೆಯಿತು.
ಸೆ.15ರಂದು ಧಾರ್ಮಿಕ ಸಭೆ,ವಿಸರ್ಜನಾ ಮೆರವಣಿಗೆ
ಸೆ.15ರಂದು ಬೆಳಿಗ್ಗೆ ಉಷೆಪೂಜೆ,ಗಣಹೋಮ, ವಿಷ್ಣು ಪ್ರಿಯಾ ಭಜನಾ ಮಂಡಳಿ ಬೆಳಂದೂರು ವಲಯ ಇವರಿಂದ ಭಜನಾ ಕಾರ್ಯಕ್ರಮ ,ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಧಾರ್ಮಿಕ ಸಭಾಕಾರ್ಯಕ್ರಮ ಸಮಿತಿ ಅಧ್ಯಕ್ಷ ಶಿವರಾಮ ಗೌಡ ಮೆದು ಅಧ್ಯಕ್ಷತೆಯಲ್ಲಿ ನಡೆಯಲಿದೆ. ಉಪ್ಪಿನಂಗಡಿ ಪ.ಪೂ.ಕಾಲೇಜಿನ ಪ್ರಾಚಾರ್ಯ ಸುಬ್ಬಪ್ಪ ಕೈಕಂಬ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಅತಿಥಿಯಾಗಿ ಸವಣೂರು ಪ.ಪೂ.ಕಾಲೇಜಿನ ಪ್ರಾಚಾರ್ಯೆ ಪದ್ಮಾವತಿ ಭಾಗವಹಿಸಲಿದ್ದಾರೆ.ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಸವಣೂರು ಕೆ.ಸೀತಾರಾಮ ರೈ ಗೌರವ ಉಪಸ್ಥಿತರಿರುವರು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.ಬಳಿಕ ಪುರುಷರಿಗೆ ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದೆ. ಸಂಜೆ ಗಣೇಶನ ಮೆರವಣಿಗೆ ಬಳಿಕ ಸರ್ವೆ ಗೌರಿಹೊಳೆಯ ಸಮೀಪ ಕಟ್ಟೆಪೂಜೆ ನಡೆದು ವಿಗ್ರಹದ ಜಲಸ್ತಂಭನ ನಡೆಯಲಿದೆ ಎಂದು ಗಣೇಶೋತ್ಸವ ಸಮಿತಿಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ