ಮಂಜುನಾಥ ನಗರದಲ್ಲಿ 35ನೇ ವರ್ಷದ ಗಣೇಶೋತ್ಸವ

ಸವಣೂರು :ಪಾಲ್ತಾಡಿ ಗ್ರಾಮದ ಮಂಜುನಾಥನಗರ ಸಿದ್ದಿವಿನಾಯಕ ಸೇವಾ ಸಂಘ ಇದರ ವತಿಯಿಂದ 35ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ  ಸೆ.13ರಂದು ಸಿದ್ದಿವಿನಾಯಕ ಭಜನಾ ಮಂದಿರದಲ್ಲಿ ನಡೆಯಿತು.

ಬೆಳಿಗ್ಗೆ ಗಣೇಶ ವಿಗ್ರಹದ ಪ್ರತಿಷ್ಟೆ ಯ ಬಳಿಕ ಭಜನ ಕಾರ್ಯಕ್ರಮ,ಮಹಾಪೂಜೆ ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಿತು.

ಮದ್ಯಾಹ್ನ ನಡೆದಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಗತಿಪರ ಕೃಷಿಕ ಭಾಸ್ಕರ ರೈ ಕುಂಜಾಡಿ  ವಹಿಸಿದ್ದರು..ಕೆಯ್ಯೂರು ಸ.ಪ್ರೌಢಶಾಲಾ ಮುಖ್ಯಗುರು ವಿನೋದ್ ಕುಮಾರ್ ಕೆ.ಎಸ್ ಧಾರ್ಮಿಕ ಉಪನ್ಯಾಸ ನೀಡಿದರು.

ಪ್ರತಿಭಾನ್ವಿತರಿಗೆ ಅಭಿನಂದನೆ

ಇದೇ ಸಂದರ್ಭದಲ್ಲಿ ಗ್ರಾಮ ವಿಕಾಸ ಸಮಿತಿ ಪಾಲ್ತಾಡಿಯ ಸಹಯೋಗದೊಂದಿಗೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.

ದ್ವಿತೀಯ ಪಿಯುಸಿಯಲ್ಲಿ ಅತ್ಯಽಕ ಅಂಕಗಳಿಸಿದ ಪ್ರಿಯಾ ಎಸ್.ಎಂ,ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕಗಳಿಸಿದ ರಚಿತಾ,ದೀಕ್ಷಿತಾ,ಸ್ವಾತಿ,7ನೇ ತರಗತಿಯ ದಾಮಿನಿ,ರಂಸೀನಾ ಹಾಗೂ ಎಸ್ಸೆಸೆಲ್ಸಿಯಲ್ಲಿ ಶೇ.100 ಫಲಿತಾಂಶ ಪಡೆದ ಮಂಜುನಾಥನಗರ  ಸರಕಾರಿ ಪ್ರೌಢಶಾಲೆ ಇವರನ್ನು ಅಭಿನಂದಿಸಲಾಯಿತು.

ಸಮ್ಮಾನ ಸಮಾರಂಭ

ಸಿದ್ದಿವಿನಾಯಕ ಸೇವಾ ಸಂಘದ ಸ್ಥಾಪಕಾಧ್ಯಕ್ಷ ಬಿ.ಕೆ.ರಮೇಶ್,ಮಾಜಿ ಅಧ್ಯಕ್ಷರಾದ ಬಿ.ಜಿ.ಭಾಸ್ಕರ ರೈ ಕುಂಜಾಡಿ,ಬಾಳಪ್ಪ ಪೂಜಾರಿ ಅವರನ್ನು ಸಮ್ಮಾನಿಸಲಾಯಿತು.

Also Read  ನಿಖಿಲ್ ಕುಮಾರಸ್ವಾಮಿ ಕುಕ್ಕೇಶ್ರೀ ಸುಬ್ರಹ್ಮಣ್ಯಕ್ಕೆ ಭೇಟಿ

ಈ ಸಂದರ್ಭ ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ,ಉಪಾಧ್ಯಕ್ಷ  ರವಿ ಕುಮಾರ್,ಸದಸ್ಯ ಸತೀಶ್ ಅಂಗಡಿಮೂಲೆ,ಗ್ರಾಮ ವಿಕಾಸ ಸಮಿತಿ ಮಾಜಿ ಅಧ್ಯಕ್ಷ ಸುಧಾಕರ ರೈ ಕುಂಜಾಡಿ,ಚೈತನ್ಯ ರೈತಶಕ್ತಿ ಗುಂಪಿನ ಅಧ್ಯಕ್ಷ  ಗಣೇಶ್ ಶೆಟ್ಟಿ ಕುಂಜಾಡಿ,ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಪದ್ಮಪ್ರಸಾದ್ ಆರಿಗ,ನವೀನ್ ಕುಮಾರ್ ರೈ ಕುಂಜಾಡಿ,ವಿವೇಕಾನಂದ ಯುವಕ ಮಂಡಲದ ಗೌರವಾಧ್ಯಕ್ಷ ಸುಽರ್ ಕುಮಾರ್ ರೈ ಕುಂಜಾಡಿ ,ಗ್ರಾಮ ವಿಕಾಸ ಸಮಿತಿ ಅಧ್ಯಕ್ಷ ಪ್ರವೀಣ್ ಚೆನ್ನಾವರ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ನಂತರ ಮಂಜುನಾಥನಗರ ಅಂಗನವಾಡಿ ಹಾಗೂ ಶಾಲಾ ಮಕ್ಕಳಿಂದ ,ಶ್ರೀಗೌರಿ ಯುವತಿ ಮಂಡಲದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಸಿದ್ದಿವಿನಾಯಕ ಸೇವಾ ಸಂಘದ ಬೆಳವಣಿಗೆಯಲ್ಲಿ ಸಹಕರಿಸಿದ ದಾನಿಗಳನ್ನು  ಗುರುತಿಸಿ ಅಭಿನಂಽಸಲಾಯಿತು.

ಸಿದ್ದಿ ವಿನಾಯಕ ಸೇವಾ ಸಂಘದ ಅಧ್ಯಕ್ಷ ಪ್ರವೀಣ್ ಬಂಬಿಲದೋಳ ಸ್ವಾಗತಿಸಿದರು.ಪ್ರಧಾನ ಕಾರ್ಯದರ್ಶಿ ವಾರ್ಷಿಕ ವರದಿ ವಾಚಿಸಿದರು.ಸತ್ಯಪ್ರಕಾಶ್ ಬಹುಮಾನಿತರ ಪಟ್ಟಿ ವಾಚಿಸಿದರು.ವಿವೇಕಾನಂದ ಯುವಕ ಮಂಡಲದ ಅಧ್ಯಕ್ಷ ಅನ್ನಪೂರ್ಣ ಪ್ರಸಾದ್ ರೈ ಬಲಾಡಿ ವಂದಿಸಿದರು.ಶಿಕ್ಷಕರಾದ ವಿನಯ್ ಬಂಬಿಲದೋಳ,ಪ್ರಶಾಂತ್ ಬಂಬಿಲದೋಳ ಕಾರ್ಯಕ್ರಮ ನಿರೂಪಿಸಿದರು.

Also Read  ಮರ್ಧಾಳ: ರಸ್ತೆ ಬಿಟ್ಟು ಕಮರಿಗೆ ಉರುಳಿದ ಕಾರು

ಸಂಸದ ನಳಿನ್ ಕುಮಾರ್ ಬೇಟಿ

ಗಣೇಶೋತ್ಸವ ಕಾರ್ಯಕ್ರಮಕ್ಕೆ ಸಂಸದ ನಳಿನ್ ಕುಮಾರ್ ಬೇಟಿ ನೀಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಸಂಜೆ ಮಹಾಪೂಜೆ, ಪ್ರಸಾದ ವಿತರಣೆಯ ಬಳಿಕ ಬಂಬಿಲ ಗೌರಿಹೊಳೆಯಲ್ಲಿ ವಿಗ್ರಹದ ಜಲಸ್ತಂಬನ ನಡೆಯಿತು.

 

 

 

 

error: Content is protected !!
Scroll to Top