►► ಕವರ್ ಸ್ಟೋರಿ ► ಸವಣೂರಿನಿಂದ ಪ್ರತ್ಯೇಕವಾಗಲಿದೆಯೇ ಪಾಲ್ತಾಡಿ ಗ್ರಾಮ..!! ► ಈಡೇರುವುದೇ ಪಾಲ್ತಾಡಿ ಪ್ರತ್ಯೇಕ ಗ್ರಾಮ ಪಂಚಾಯತ್ ನ ಬೇಡಿಕೆ..??

ಸವಣೂರು, ಸೆ.13. ಸವಣೂರು ಗ್ರಾ.ಪಂ. ವ್ಯಾಪ್ತಿಗೆ ಒಳಪಟ್ಟಿರುವ ಪಾಲ್ತಾಡಿ ಗ್ರಾಮವನ್ನು ಪ್ರತ್ಯೇಕ ಗ್ರಾ.ಪಂ.ಮಾಡಬೇಕೆಂಬ ಬೇಡಿಕೆ ಈ ಬಾರಿಯಾದರೂ ಈಡೇರುತ್ತಾ ಎಂಬ ಆಶಾ ಭಾವನೆ ಗ್ರಾಮಸ್ಥರದ್ದು.

ಕಳೆದ ಬಾರಿ ಗ್ರಾಮ ಪಂಚಾಯತ್ ಪುನರ್ವಿಂಗಡನೆ ಸಮಯದಲ್ಲಿಯೇ ಈ ಕುರಿತು ಗ್ರಾಮಸ್ಥರಿಂದ ಬೇಡಿಕೆ ವ್ಯಕ್ತವಾಗಿತ್ತು.ಬಳಿಕ ಗ್ರಾಮಸ್ಥರಿಂದ ಕಂದಾಯ ಇಲಾಖೆಯ ಸಚಿವರಿಗೆ, ಗ್ರಾ.ಪಂ.ಪುನರ್ವಿಂಗಡನಾ ಸಮಿತಿಗೆ, ಇಲಾಖೆಯ ನಿರ್ದೇಶಕರಿಗೂ ಮನವಿ ಸಲ್ಲಿಸಿದ್ದರು. ಆದರೆ ಪ್ರತ್ಯೇಕ ಗ್ರಾ.ಪಂ.ಕನಸು ಕನಸಾಗಿಯೇ ಉಳಿಯಿತು. ಪಾಲ್ತಾಡಿ ಗ್ರಾಮದ ಒಟ್ಟು ವಿಸ್ತೀರ್ಣ ೨೬೬೮.೧೦ ಎಕ್ರೆ ಆಗಿದ್ದು ,ಒಟ್ಟು ೫೮೦ ಕುಟುಂಬಗಳನ್ನು ಹೊಂದಿದ್ದು ೨೦೧೧ರ ಜನಗಣತಿಯ ಪ್ರಕಾರ ೨೮೩೮ ಜನಸಂಖ್ಯೆಹೊಂದಿದೆ. ಇದರಲ್ಲಿ ೭೫೩ ಪರಿಶಿಷ್ಟ ಜಾತಿ.,೨೨೦ ಪರಿಶಿಷ್ಟ ಪಂಗಡ ,೧೮೬೫ ಮಂದಿ ಇತರರು ಇದ್ದಾರೆ.೨೧೯೧ ಮಂದಿ ಮತದಾರರು ಇದ್ದಾರೆ. ೨ ವಾರ್ಡ್‌ಗಳನ್ನು ಹೊಂದಿದ್ದು ೮ ಗ್ರಾ.ಪಂ.ಸದಸ್ಯರನ್ನು ಈ ಗ್ರಾಮ ಹೊಂದಿದೆ.

ಗ್ರಾಮದಲ್ಲಿ ಪಾಲ್ತಾಡಿ, ಅಂಕತ್ತಡ್ಕ, ಮಂಜುನಾಥ ನಗರದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳು, ಚೆನ್ನಾವರದಲ್ಲಿ ಕಿರಿಯ ಪ್ರಾಥಮಿಕ ಶಾಲೆ ಇದೆ. ಮಂಜುನಾಥನಗರದಲ್ಲಿ ಸರಕಾರಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಅಂಕತ್ತಡ್ಕ, ಮಂಜುನಾಥ ನಗರ, ಚೆನ್ನಾವರ, ಪಾಲ್ತಾಡಿ, ಉಪ್ಪಳಿಗೆಯಲ್ಲಿ ಅಂಗನವಾಡಿ ಕೇಂದ್ರಗಳಿವೆ. ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶಾಖೆಯೂ ಪಾಲ್ತಾಡಿಯ ಅಂಕತ್ತಡ್ಕದಲ್ಲಿ ಇದೆ. ಅಂಕತ್ತಡ್ಕದಲ್ಲಿ ಕೊಳ್ತಿಗೆ ಸಹಕಾರಿ ಸಂಘದ ಹಾಗೂ ಮಂಜುನಾಥ ನಗರದಲ್ಲಿ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನ್ಯಾಯಬೆಲೆ ಅಂಗಡಿ ಇದೆ. ಚೆನ್ನಾವರ, ಅಂಕತ್ತಡ್ಕದಲ್ಲಿ ಮಸೀದಿ, ಮದ್ರಸಗಳಿವೆ. ಮಂಜುನಾಥನಗರ, ಪಾದೆ ಬಂಬಿಲ, ಅಲ್ಯಾಡಿ ದಲ್ಲಿ ಭಜನಾ ಮಂದಿರಗಳಿವೆ. ಮಂಜುನಾಥ ನಗರದಲ್ಲಿ  ಸಿದ್ದಿವಿನಾಯಕ ಸಭಾಭವನ ಹಾಗೂ ಸುವರ್ಣ ಗ್ರಾಮ ಯೋಜನೆಯಲ್ಲಿ ನಿರ್ಮಾಣಗೊಂಡ ಸಮುದಾಯ ಭವನವೂ ಇದೆ. ದೇವಸ್ಥಾನ, ದೈವಸ್ಥಾನಗಳೂ ಇವೆ. ಬಂಬಿಲ ಮತ್ತು ಉಪ್ಪಳಿಗೆಯಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘವೂ ಇದೆ. ಜೊತೆಗೆ ಯುವಕ ಮಂಡಲ, ಯುವತಿ ಮಂಡಲ ಸೇರಿದಂತೆ ವಿವಿಧ ಸಾಮಾಜಿಕ, ಧಾರ್ಮಿಕ ಸಂಘ ಸಂಸ್ಥೆಗಳೂ ಇದೆ. ಜೊತೆಗೆ ಗ್ರಾ.ಪಂ.ಗೆ ಸೂಕ್ತವಾದ ನಿವೇಶನವೂ ಪಾಲ್ತಾಡಿ ಗ್ರಾಮದಲ್ಲಿದೆ. ಒಟ್ಟಿನಲ್ಲಿ ಪಾಲ್ತಾಡಿಯನ್ನು ಪ್ರತ್ಯೇಕ ಗ್ರಾ.ಪಂ.ಆಗಿ ಮಾಡಬೇಕೆನ್ನುವ ಬೇಡಿಕೆ ಪ್ರಭಲವಾಗಿ ಕೇಳಿ ಬರುತ್ತಿದೆ.

Also Read  ವೈಯಕ್ತಿಕ ಪೂರ್ವದ್ವೇಷದ ಹಿನ್ನೆಲೆ ➤ ಐವರ ತಂಡದಿಂದ ಮೂವರ ಕೊಲೆಯತ್ನ- ಆರೋಪಿಗಳಿಗಾಗಿ ಶೋಧ

ಕಳೆದ ಬಾರಿ ಗ್ರಾ.ಪಂ.ಪುನರ್ವಿಂಗಡನೆಯ ಸಂದರ್ಭದಲ್ಲಿ ಪಾಲ್ತಾಡಿ ಗ್ರಾ.ಪಂ.ನ್ನು ನೂತನವಾಗಿ ಮಾಡಬೇಕೆಂಬ ನಿಟ್ಟಿನಲ್ಲಿ  ಸಾಕಷ್ಟು  ಪ್ರಯತ್ನ ನಡೆಸಲಾಗಿದೆ.ಕೊನೆಗಳಿಗೆಯಲ್ಲಿ ಕೆಲ ವ್ಯತ್ಯಾಸಗಳಿಂದ ತಪ್ಪಿಹೋಯಿತು.ಮುಂದಿನ ಬಾರಿಯಾದರೂ ಪಾಲ್ತಾಡಿಯನ್ನು ಪ್ರತ್ಯೇಕ ಗ್ರಾ.ಪಂ.ಆಗಿ ಮಾಡಬೇಕು.

-ಎ.ಎಸ್.ರಝಾಕ್ ಅಂಕತ್ತಡ್ಕ ,ಸಾಮಾಜಿಕ ಕಾರ್ಯಕರ್ತ

ಅಭಿವೃದ್ಧಿ ದೃಷ್ಟಿಯಿಂದ ಪಾಲ್ತಾಡಿಯನ್ನು ಪ್ರತ್ಯೇಕ ಗ್ರಾ.ಪಂ.ಆಗಿ ಮಾಡಬೇಕು.ಗ್ರಾ.ಪಂ.ಆಗುವ ಎಲ್ಲಾ ಅರ್ಹತೆಗಳು ಪಾಲ್ತಾಡಿ ಗ್ರಾಮಕ್ಕಿದೆ.ಈ ಕುರಿತು ಪ್ರಯತ್ನಗಳನ್ನು ಮಾಡಬೇಕಿದೆ.

Also Read  ಕಡಬದ ಯಶೋದಾ ಜನರಲ್ ಸ್ಟೋರ್‌ನಲ್ಲಿ ಬೃಹತ್ ದರಕಡಿತದ ತರಕಾರಿ ಮೇಳ ► ಟೊಮ್ಯಾಟೊ, ಸಾಂಬಾರ್ ಸೌತೆ 05 ರೂ. ಉಳಿದಂತೆ ತರಕಾರಿಗಳಿಗೆ 10 ರೂ.

-ಬಿ.ಕೆ.ರಮೇಶ್ ,ಸ್ಥಾಪಕಾಧ್ಯಕ್ಷರು,ಭಾರತಿ ಗ್ರಾಮ ವಿಕಾಸ ಪ್ರತಿಷ್ಠಾನ ಪಾಲ್ತಾಡಿ

ಪಾಲ್ತಾಡಿಯನ್ನು ಪ್ರತ್ಯೇಕ ಗ್ರಾ.ಪಂ.ಆಗಬೇಕೆಂಬ ನಿಟ್ಟಿನಲ್ಲಿ ಗ್ರಾ.ಪಂ.ಸಾಮಾನ್ಯ ಸಭೆ,ಗ್ರಾಮ ಸಭೆಗಳಲ್ಲಿ ಪ್ರಸ್ತಾಪಿಸಲಾಗಿದೆ. ಈ ಕುರಿತು ಶಾಸಕರೂ ಮುತುವರ್ಜಿ ವಹಿಸಬೇಕಿದೆ.

-ಸತೀಶ್ ಅಂಗಡಿಮೂಲೆ,ಸದಸ್ಯರು ಸವಣೂರು ಗ್ರಾ.ಪಂ

ಪಾಲ್ತಾಡಿಯನ್ನು ಪ್ರತ್ಯೇಕ ಗ್ರಾ.ಪಂ.ಮಾಡಬೇಕೆನ್ನುವ ಕೂಗು ಈ ಹಿಂದಿನಿಂದಲೂ ಇದೆ. ಜನರ ಬೇಡಿಕೆಯನ್ನು ಗ್ರಾ.ಪಂ.ಸಭೆಯಲ್ಲಿ ನಿರ್ಣಯಕೈಗೊಂಡು ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸಲಾಗಿದೆ.

-ಇಂದಿರಾ ಬಿ.ಕೆ,ಅಧ್ಯಕ್ಷೆ ಸವಣೂರು ಗ್ರಾ.ಪಂ.

error: Content is protected !!
Scroll to Top